ಕರ್ನಾಟಕದ ಶ್ರೀಮಂತ ದೇವಾಲಯಗಳ ಪಟ್ಟಿ; ಕುಕ್ಕೆ ನಂ. 1

ಬೆಂಗಳೂರು, ಜನವರಿ 16 : ಕರ್ನಾಟಕದ ಶ್ರೀಮಂತ ದೇವಾಲಯಗಳ ಪಟ್ಟಿ ಬಿಡುಗಡೆಯಾಗಿದೆ. ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರುವ ದೇವಾಲಯಗಳ ಪೈಕಿ ಕುಕ್ಕೆ ಸುಬ್ರಮಣ್ಯ ಶ್ರೀಮಂತ ದೇವಾಲಯವಾಗಿದ್ದು, ಕಳೆದ ವರ್ಷವೂ ಮೊದಲ ಸ್ಥಾನದಲ್ಲಿತ್ತು.

2019ರಲ್ಲಿ ಹೆಚ್ಚು ಆದಾಯಗಳಿಸಿದ ದೇವಾಲಯಗಳ ಪಟ್ಟಿಯನ್ನು ಮುಜರಾಯಿ ಇಲಾಖೆ ಬಿಡುಗಡೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯ ದೇವಾಲಯ 100 ಕೋಟಿ ರೂ. ಆದಾಯಗಳಿಸಿದ್ದು, ಪ್ರಥಮ ಸ್ಥಾನ ಪಡೆದಿದೆ.

2018ರಲ್ಲಿಯೂ 92 ಕೋಟಿ ರೂ. ಆದಾಯಗಳಿಸಿ ಕುಕ್ಕೆ ಸುಬ್ರಮಣ್ಯ ಮೊದಲ ಸ್ಥಾನದಲ್ಲಿತ್ತು. ಈ ವರ್ಷವೂ ದೇವಾಲಯ ಪ್ರಥಮ ಸ್ಥಾನದಲ್ಲಿದೆ. ಪ್ರತಿನಿತ್ಯ ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದು, ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ ವಿವಿಧ ಪೂಜೆಗಳನ್ನು ಮಾಡಿಸುತ್ತಾರೆ.

ಕೊಲ್ಲೂರು, ಕಟೀಲು, ಮೈಸೂರಿನ ಚಾಮುಂಡೇಶ್ವರಿ, ನಂಜನಗೂಡು ಸೇರಿದಂತೆ ರಾಜ್ಯದ ವಿವಿಧ ದೇವಾಲಯಗಳು 10 ಶ್ರೀಮಂತ ದೇವಾಲಯಗಳ ಪಟ್ಟಿಯಲ್ಲಿವೆ. ಬೆಂಗಳೂರು ನಗರದ ಬನಶಂಕರಿ ದೇವಾಲಯ ಸಹ ಪಟ್ಟಿಯಲ್ಲಿದೆ.

ರಾಜ್ಯದ ಶ್ರೀಮಂತ ದೇವಾಲಯಗಳು

ರಾಜ್ಯದ ಶ್ರೀಮಂತ ದೇವಾಲಯಗಳು

ವಾರ್ಷಿಕ 100 ಕೋಟಿ ಆದಾಯಗಳಿಸಿದ ಕುಕ್ಕೆ ಸುಬ್ರಮಣ್ಯ ದೇವಾಲಯ ಕರ್ನಾಟಕದ ಶ್ರೀಮಂತ ದೇವಾಲಯಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. 2ನೇ ಸ್ಥಾನದಲ್ಲಿದ್ದು 90 ರಿಂದ 92 ಕೋಟಿ ಆದಾಯವಿದೆ. ಕಟೀಲು ದುರ್ಗ ಪರಮೇಶ್ವರಿ ದೇವಾಲಯ 3ನೇ ಸ್ಥಾನದಲ್ಲಿದ್ದು, 40 ರಿಂದ 42 ಕೋಟಿ ಆದಾಯವಿದೆ.

ಮೈಸೂರಿನ ಚಾಮುಂಡೇಶ್ವರಿ ದೇವಾಲಯ

ಮೈಸೂರಿನ ಚಾಮುಂಡೇಶ್ವರಿ ದೇವಾಲಯ

* ಮೈಸೂರುನ ಚಾಮುಂಡೇಶ್ವರಿ ದೇವಾಲಯದ ಆದಾಯ 30 ರಿಂದ 33 ಕೋಟಿ ಇದ್ದು ರಾಜ್ಯದ ಶ್ರೀಮಂತ ದೇವಾಲಯಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.

* ಮೈಸೂರು ಜಿಲ್ಲೆಯ ನಂಜನಗೂಡು ಶ್ರೀಕಂಠೇಶ್ವರ ದೇವಾಲಯ 15 ರಿಂದ 20 ಕೋಟಿ ಆದಾಯಗಳಿಸುತ್ತಿದ್ದು 5ನೇ ಸ್ಥಾನದಲ್ಲಿದೆ.

ಶ್ರೀಮಂತ ದೇವಾಲಗಳು

ಶ್ರೀಮಂತ ದೇವಾಲಗಳು

* ವಾರ್ಷಿಕ 15 ರಿಂದ 17 ಕೋಟಿ ಆದಾಯಗಳಿಸುವ ಸವದತ್ತಿ ಯಲ್ಲಮ್ಮ ದೇವಾಲಯ ಶ್ರೀಮಂತ ದೇವಾಲಯಗಳ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದೆ.

* ಉಡುಪಿ ಜಿಲ್ಲೆಯ ಮಂದರ್ತಿ ದೇವಾಲಯ 10 ರಿಂದ 12 ಕೋಟಿ ಆದಾಯಗಳಿಸುತ್ತಿದ್ದು 7ನೇ ಸ್ಥಾನದಲ್ಲಿದೆ.

* ಕೊಪ್ಪಳದ ಗುಳ್ಳಮ್ಮನ ದೇವಾಲಯ 8 ರಿಂದ 10 ಕೋಟಿ ಆದಾಯಗಳಿಸುತ್ತಿದ್ದು 8ನೇ ಸ್ಥಾನ ಪಡೆದಿದೆ.

ಯಾವ-ಯಾವ ದೇವಾಲಯ

ಯಾವ-ಯಾವ ದೇವಾಲಯ

* ಘಾಟಿ ಸುಬ್ರಮಣ್ಯ ದೇವಾಲಯ 8 ರಿಂದ 10 ಕೋಟಿ ರೂ. ಆದಾಯಗಳಿಸುತ್ತಿದ್ದು ಶ್ರೀಮಂತ ದೇವಾಲಯಗಳ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿದೆ.

* ಬೆಂಗಳೂರಿನ ಬನಶಂಕರಿ ದೇವಾಲಯ 7 ರಿಂದ 8 ಕೋಟಿ ಆದಾಯಗಳಿಸುತ್ತಿದ್ದು ಶ್ರೀಮಂತ ದೇವಾಲಯದ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+