KSRTC ಬಸ್ ಪಾಸ್‌ ವಿತರಣೆ: ಮೇ 29ರಿಂದ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಈ ಕ್ರಮ ಅನುಸರಿಸಿ

ಬೆಂಗಳೂರು: ಪ್ರಸ್ತಕ 2026-27ನೇ ಶೈಕ್ಷಣಿಕ ವರ್ಷದ ಶಾಲಾ-ಕಾಲೇಜುಗಳು ಜೂನ್ 1ರಿಂದ ಪ್ರಾರಂಭಗೊಳ್ಳಲಿವೆ. ಸಾರ್ವಜನಿಕ ಬಸ್ ಹಿಡಿದು ನಿತ್ಯ ಶೈಕ್ಷಣಿಕ ಸಂಸ್ಥೆಗಳಿಗೆ ಓಡಾಡುವ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ ಆರಂಭ ಪ್ರಕ್ರಿಯೆ ಎದುರು ನೋಡುತ್ತಿದ್ದರು. ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ವಿದ್ಯಾರ್ಥಿ ಬಸ್ ಪಾಸ್‌ಗಳನ್ನು ವಿತರಿಸಲು ಸಿದ್ದವಾಗಿದೆ. ಈ ವರ್ಷ ಸಂಪೂರ್ಣ ಗಣಕೀಕೃತ ವ್ಯವಸ್ಥೆಯಡಿ ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿಗಳನ್ನು ಸ್ವೀಕರಿಸಲಿದೆ.

ಮಾಸಿಕ, ವಾರ್ಷಿಕ ಬಸ್ ಪಾಸ್ ವಿತರಿಸಲಿರುವ ಸಾರಿಗೆ ಸಂಸ್ಥೆಯು ವಿದ್ಯಾರ್ಥಿಗಳು ಒಂದಷ್ಟು ಕ್ರಮಗಳನ್ನು ಅನುಸರಿಸಬೇಕೆಂದು ತಿಳಿಸಿದೆ. ಮೇ 29ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ವಿದ್ಯಾರ್ಥಿಗಳು/ಪೋಕಷರು ಸೇವಾಸಿಂಧು ಪೋರ್ಟಲ್ (https://sevasindhuservices.karnataka.gov.in/buspassservices/) ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಆನ್‌ಲೈನ್ ಅರ್ಜಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಇದು ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಸೌಲಭ್ಯ ಎಂದು ಸ್ಪಷ್ಟಪಡಿಸಿದೆ.

KSRTC Student Bus Pass 2026

ಆನ್‌ಲೈನ್‌ನಲ್ಲಿ ಸರ್ಕಾರದ ಸೇವಾಸಿಂಧು ಪೋರ್ಟಲ್ ನಲ್ಲಿ ಸ್ವಯಂ ಪ್ರೇರಿತವಾಗಿ ಅರ್ಜಿ ಸಲ್ಲಿಸಲು ಬರದವರು, ವಿದ್ಯಾರ್ಥಿಗಳು ಕರ್ನಾಟಕ-ಒನ್, ಗ್ರಾಮ-ಒನ್ ಹಾಗೂ ಬೆಂಗಳೂರು-ಒನ್ ಕೇಂದ್ರಗಳ ಮೂಲಕವೂ ಅರ್ಜಿ ಸಲ್ಲಿಸಬಹುದು. ಈ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಸರ್ಕಾರ ನಿಗದಿಪಡಿಸಿರುವ 30 ರೂಪಾಯಿ ಸೇವಾ ಶುಲ್ಕ ಪಾವತಿಸುವುದು ಕಡ್ಡಾಯವಾಗಿದೆ. ಇದಕ್ಕಿಂತ ಹೆಚ್ಚಿನ ಹಣ ಪಾವತಿಸುವಂತಿಲ್ಲ ಎಂದು ತಿಳಿಸಿದೆ.

ಅರ್ಜಿ ಪಾಸ್ ಕೌಂಟರ್ ಆಯ್ಕೆ ಕಡ್ಡಾಯ

ಮೊದಲು ವಿದ್ಯಾರ್ಥಿಗಳು 'Declaration Form' ಅನ್ನು ಸೇವಾಸಿಂಧು ಅಥವಾ ಕರಾರಸಾ ನಿಗಮದ ವೆಬ್‌ಸೈಟ್‌ನಿಂದ (https://ksrtc.karnataka.gov.in/studentpass) ಡೌನ್‌ಲೋಡ್ ಮಾಡಿಕೊಳ್ಳಬೇಕು. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತಮಗೆ ಅನುಕೂಲಕರವಾದ ಪಾಸ್ ಕೌಂಟರ್ ಆಯ್ಕೆ ಮಾಡಿ, ಈ ಫಾರ್ಮ್‌ ಭರ್ತಿ ಮಾಡಬೇಕು. ಇದು ಅರ್ಜಿ ಪ್ರಕ್ರಿಯೆಯ ಪ್ರಮುಖ ಹಂತವಾಗಿದ್ದು ವಿದ್ಯಾರ್ಥಿಗಳ ಗಮನಿಸಬೇಕು ಎಂದು ಕೋರಿದೆ.

Video: ಎಕ್ಸ್‌ಪ್ರೆಸ್‌ವೇನಲ್ಲಿ ಟೋಲ್‌ ತಪ್ಪಿಸಲು ಸರ್ವೀಸ್‌ ರಸ್ತೆಗೆ ಇಳಿದ KSRTC ಬಸ್, ಚಾಲಕನಿಗೆ ನೆಟ್ಟಿಗರ ತರಾಟೆ
Video: ಎಕ್ಸ್‌ಪ್ರೆಸ್‌ವೇನಲ್ಲಿ ಟೋಲ್‌ ತಪ್ಪಿಸಲು ಸರ್ವೀಸ್‌ ರಸ್ತೆಗೆ ಇಳಿದ KSRTC ಬಸ್, ಚಾಲಕನಿಗೆ ನೆಟ್ಟಿಗರ ತರಾಟೆ

ಸಾರಿಗೆ ಅಧಿಕಾರಿಗಳು ಅರ್ಜಿ ಪರಿಶೀಲಿಸಿ ಪಾಸ್‌ಗೆ ಅನುಮೋದಿಸುತ್ತಿದ್ದಂತೆ ನಿಮಗೆ ಕೌಂಟರ್ ವಿಳಾಸದ ಮಾಹಿತಿ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮೂಲಕ ಕಳುಹಿಸಲಾಗುತ್ತದೆ. ಜೂನ್ 01, 2026ರಿಂದ ನಿಗದಿತ ಪಾಸ್ ಕೌಂಟರ್‌ಗಳಲ್ಲಿ ವಿದ್ಯಾರ್ಥಿ ಪಾಸ್‌ಗಳ ವಿತರಣೆ ಆರಂಭವಾಗಲಿದೆ.

ವಿದ್ಯಾರ್ಥಿಗಳು ತಾವು ಆಯ್ಕೆಮಾಡಿದ ಕೌಂಟರ್‌ಗೆ ತೆರಳಿ ಶುಲ್ಕವನ್ನು ಪಾವತಿಸಿ ಪಾಸ್ ಪಡೆಯಬೇಕು. ಶುಲ್ಕವನ್ನು ನಗದು, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ಅವಕಾಶ ಇದೆ. ಕರ್ನಾಟಕ ಸರ್ಕಾರವು 'ಶಕ್ತಿ ಯೋಜನೆ' ಅಡಿಯಲ್ಲಿ ರಾಜ್ಯದ ಮಹಿಳೆಯರಿಗೆ (ವಿದ್ಯಾರ್ಥಿನಿಯರು, ಲಿಂಗತ್ವ ಅಲ್ಪಸಂಖ್ಯಾತರು ಒಳಗೊಂಡಂತೆ) ಉಚಿತ ಪ್ರಯಾಣ ಸೌಲಭ್ಯ ಒದಗಿಸಿದೆ. ಅರ್ಹ ವಿದ್ಯಾರ್ಥಿನಿಯರು ಈ ಸೌಲಭ್ಯ ಪಡೆಯಬಹುದಾದ್ದರಿಂದ, ಅವರಿಗೆ ಪ್ರತ್ಯೇಕ ಬಸ್ ಪಾಸ್ ಅಗತ್ಯವಿಲ್ಲ.

ನೆರೆರಾಜ್ಯದಲ್ಲಿ ವಾಸವಿದ್ದು ಕರ್ನಾಟಕದ ಶಾಲೆ/ಕಾಲೇಜುಗಳಲ್ಲಿ ಕಲಿಯುತ್ತಿರುವ, ಹಾಗೂ ಕರ್ನಾಟಕದಲ್ಲಿ ವಾಸವಿದ್ದು ನೆರೆಯ ರಾಜ್ಯದ ಶಾಲೆ/ಕಾಲೇಜುಗಳಲ್ಲಿ ಓದುತ್ತಿರುವ ಗಡಿಭಾಗದ ವಿದ್ಯಾರ್ಥಿಗಳಿಗೆ ರಿಯಾಯಿತಿ ಬಸ್ ಪಾಸ್ ಅಗತ್ಯವಿದ್ದಲ್ಲಿ ಅವರು ಸಹ ಇದೇ ರೀತಿ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಸಹಾಯವಾಣಿ 080 26252625 ಅನ್ನು ಸಂಪರ್ಕಿಸಬಹುದು. ಇಮೇಲ್ [email protected] ಮೂಲಕವು ಸಂಪರ್ಕಿಸಬೇಕೆಂದು ಮನವಿ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+