ಮಧುಮೇಹಿಗಳು ಎಷ್ಟು ಮಾವು ತಿಂದರೆ ಬ್ಲಡ್‌ ಶುಗರ್‌ ಹೆಚ್ಚಾಗುವುದಿಲ್ಲ? ಹಣ್ಣು ಸವಿಯುವ ಸಮಯ ಇದಾಗಿರಬೇಕು

ಮಾವು ಹೆಚ್ಚಿನ ಜನರ ನೆಚ್ಚಿನ ಹಣ್ಣು. ರಸಭರಿತ ಮಾವು ತುಂಬಾ ಸಿಹಿಯಾಗಿರುತ್ತದೆ. ಹಾಗಾಗಿ ಮಧುಮೇಹ ಇರುವವರು ಈ ಹಣ್ಣನ್ನು ಸೇವಿಸಬಹುದೇ ಎನ್ನುವ ಪ್ರಶ್ನೆ ಖಂಡಿತವಾಗಿಯೂ ಕಾಡದೇ ಇರದು. ಬ್ಲಡ್‌ ಶುಗರ್‌ ಇದ್ದವರು ಮಾವಿನಹಣ್ಣು ತಿನ್ನಬಹುದು ಎಂದಾದರೆ ದಿನಕ್ಕೆ ಎಷ್ಟು ಹಣ್ಣುಗಳನ್ನು ಸೇವಿಸುವುದು ಸುರಕ್ಷಿತ ಎನ್ನುವ ಅರಿವು ಕೂಡಾ ಇರಬೇಕು. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುವಂತೆ ನೋಡಿಕೊಳ್ಳಬಹುದು.

ಆರೋಗ್ಯ ತಜ್ಞರ ಪ್ರಕಾರ ಮಧುಮೇಹ ರೋಗಿಗಳು ಮಾವು ತಿನ್ನಬಹುದು. ಆದರೆ, ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗದಂತೆ ಬಹಳ ಕಡಿಮೆ ಪ್ರಮಾಣದಲ್ಲಿ ಸೇವಿಸಿದರೆ ಒಳ್ಳೆಯದು.

Can Diabetics Eat Mango

ಮಾವಿನಲ್ಲಿ ಯಾವ ಪೋಷಕಾಂಶಗಳಿವೆ?:

ಮಾವನ್ನು ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ. ಮಾವು ರುಚಿಕರ ಮಾತ್ರವಲ್ಲದೆ ಪೋಷಕಾಂಶಗಳಿಂದ ಕೂಡ ಸಮೃದ್ಧವಾಗಿದೆ. ಇದು ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿದೆ.ಅವುಗಳೆಂದರೆ,

ವಿಟಮಿನ್ ಎ
ವಿಟಮಿನ್ ಸಿ
ಫೈಬರ್
ಉತ್ಕರ್ಷಣ ನಿರೋಧಕಗಳು
ಪೊಟ್ಯಾಸಿಯಮ್

Mangoes: ಮಾವಿನ ಹಣ್ಣಿನ ಸಿಹಿ ಮತ್ತು ತಾಜಾತನ ಉಳಿಸಬೇಕಾ, ಈ ವಿಧಾನಗಳು ಉಪಯುಕ್ತ
Mangoes: ಮಾವಿನ ಹಣ್ಣಿನ ಸಿಹಿ ಮತ್ತು ತಾಜಾತನ ಉಳಿಸಬೇಕಾ, ಈ ವಿಧಾನಗಳು ಉಪಯುಕ್ತ

ಮಧುಮೇಹ ಇರುವವರು ಮಾವಿನ ಹಣ್ಣು ತಿನ್ನುವುದು ಸುರಕ್ಷಿತವೇ?:

"ಹೌದು, ಮಧುಮೇಹ ರೋಗಿಗಳು ಮಾವು ತಿನ್ನಬಹುದು. ಆದರೆ ಮಿತವಾಗಿ ಸೇವಿಸಬೇಕು. ಮಾವಿನ ಗ್ಲೈಸೆಮಿಕ್ ಸೂಚ್ಯಂಕ ಸುಮಾರು 50 ರಿಂದ 60 ರಷ್ಟಿರುತ್ತದೆ. ಅಂದರೆ ಮಾವು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ವೇಗವಾಗಿ ಹೆಚ್ಚಾಗುವುದಿಲ್ಲ. ಆದರೆ ಹೆಚ್ಚಿನ ಪ್ರಮಾಣದಲ್ಲಿ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ.

ಮಧುಮೇಹ ರೋಗಿಯೊಬ್ಬರು ದಿನಕ್ಕೆ ಎಷ್ಟು ಮಾವಿನ ಹಣ್ಣುಗಳನ್ನು ತಿನ್ನಬಹುದು?:

ಮಧುಮೇಹವಿದ್ದರೆ, ದಿನಕ್ಕೆ ಒಂದು ಸಣ್ಣ ಮಾವನ್ನು ತಿನ್ನಬಹುದು. ಮಾವು ದೊಡ್ಡದಾಗಿದ್ದರೆ, ಅರ್ಧ ಮಾವಿನ ಹಣ್ಣು ತಿನ್ನುವುದು ಸುರಕ್ಷಿತವಾಗಿರಬಹುದು. ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ಮಾವಿನಕಾಯಿಯನ್ನು ನೈಸರ್ಗಿಕವಾಗಿ ಹಣ್ಣಾಗಿಸುವ ಸುಲಭ ವಿಧಾನ : ಮೂರೇ ದಿನಗಳಲ್ಲಿ ರಸಭರಿತ ಹಣ್ಣು ಸವಿಯಬಹುದು
ಮಾವಿನಕಾಯಿಯನ್ನು ನೈಸರ್ಗಿಕವಾಗಿ ಹಣ್ಣಾಗಿಸುವ ಸುಲಭ ವಿಧಾನ : ಮೂರೇ ದಿನಗಳಲ್ಲಿ ರಸಭರಿತ ಹಣ್ಣು ಸವಿಯಬಹುದು

ಮಧುಮೇಹಿಗಳು ಮಾವಿನ ಹಣ್ಣು ತಿನ್ನುವುದರಿಂದ ಏನು ಪ್ರಯೋಜನ?:

ಮಧುಮೇಹ ರೋಗಿಗಳು ಮಾವಿನಹಣ್ಣನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ, ಪ್ರಯೋಜನ ಪಡೆಯಬಹುದು.

* ಮಾವಿನಹಣ್ಣು ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.
* ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.
* ಮಾವಿನಹಣ್ಣಿನಲ್ಲಿ ವಿಟಮಿನ್ ಸಿ ಇದ್ದು, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
* ಮಾವಿನಲ್ಲಿ ವಿಟಮಿನ್ ಎ ಕೂಡ ಸಮೃದ್ಧವಾಗಿದೆ. ಆದ್ದರಿಂದ, ಮಾವು ಕಣ್ಣಿನ ಆರೋಗ್ಯಕ್ಕೂ ಪ್ರಯೋಜನಕಾರಿ.

ಮಾವು ತಿನ್ನಲು ಸರಿಯಾದ ಸಮಯ ಯಾವುದು?:

* ಖಾಲಿ ಹೊಟ್ಟೆಯಲ್ಲಿ ಮಾವಿನಹಣ್ಣನ್ನು ತಿನ್ನಬಾರದು.
* ಮಾವಿನಹಣ್ಣನ್ನು ಸ್ನಾಕ್ಸ್‌ ಸಮಯದಲ್ಲಿ ಸೇವಿಸಬಹುದು.
* ಊಟದ ಒಂದು ಗಂಟೆಯ ನಂತರವೂ ಮಾವಿನಹಣ್ಣು ತಿನ್ನುವುದು ಉತ್ತಮ
* ಮಾವಿನಹಣ್ಣು ತಿಂದ ನಂತರ ಸ್ವಲ್ಪ ಸಮಯದವರೆಗೆ ಬೇರೆ ಯಾವುದೇ ಸಿಹಿ ಪದಾರ್ಥವನ್ನು ಸೇವಿಸಬೇಡಿ. ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

ಮಧುಮೇಹ ರೋಗಿಗಳು ಮಾವು ತಿನ್ನುವಾಗ ಯಾವ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು?:

ಒಂದೇ ಬಾರಿಗೆ ಹೆಚ್ಚಿನ ಪ್ರಮಾಣದಲ್ಲಿ ಮಾವಿನ ಹಣ್ಣುಗಳನ್ನು ತಿನ್ನಬಾರದು. ಹೆಚ್ಚು ಮಾವಿನ ಹಣ್ಣುಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ತ್ವರಿತವಾಗಿ ಹೆಚ್ಚಾಗುತ್ತದೆ. ಮಾವಿನಹಣ್ಣನ್ನು ಹಾಗೆಯೇ ತಿನ್ನಬೇಕು. ಮಾವಿನ ರಸ ಅಥವಾ ಶೇಕ್ ಕುಡಿಯುವುದರಿಂದ ಫೈಬರ್ ಅಂಶ ಕಡಿಮೆಯಾಗುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಹೆಚ್ಚಾಗುತ್ತದೆ.

ಬರೀ ಮಾವಿನಹಣ್ಣನ್ನು ಮಾತ್ರ ತಿನ್ನುವ ಬದಲು ಅದನ್ನು ಪ್ರೋಟೀನ್ ಮತ್ತು ಫೈಬರ್‌ನೊಂದಿಗೆ ಸೇರಿಸಿ ತಿನ್ನಬೇಕು. ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಬೇಗನೆ ಏರುವುದನ್ನು ತಡೆಯುತ್ತದೆ. ಅತಿಯಾಗಿ ಹಣ್ಣಾದ ಮತ್ತು ಸಿಹಿಯಾದ ಮಾವಿನಹಣ್ಣುಗಳನ್ನು ತಿನ್ನದಿದ್ದರೆ ಒಳ್ಳೆಯದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+