ಕರ್ಣ ಸೀರಿಯಲ್ ತ್ಯಾಗಮಯಿ ಟ್ಯಾಗ್‌ಲೈನ್ ತೆಗೆಯಲು ಪ್ರೇಕ್ಷಕರ ಒತ್ತಾಯ, ಕ್ಯೂಟ್ ಸೀನ್‌ಗೆ ಬಂತು ಈ ಕಮೆಂಟ್

Karna Serial: ಕರ್ಣ ಸೀರಿಯಲ್ ರೋಚಕ ತಿರುವು ಪಡೆದುಕೊಂಡಿದೆ. ನಿಧಿ ಹಾಗೂ ಕರ್ಣ ಒಂದಾಗಿದ್ದಾರೆ. ಆದರೆ, ನಿತ್ಯಾಳ ತ್ಯಾಗ್ಯವನ್ನು ಪ್ರೇಕ್ಷಕರು ಪ್ರಶ್ನೆ ಮಾಡಿದ್ದಾರೆ. ಕರ್ಣ ಸೀರಿಯಲ್‌ನಲ್ಲಿ ಕರ್ಣ ಎನ್ನುವ ಹೆಸರಿಗೆ ತಕ್ಕಂತೆ ಪಾತ್ರಧಾರಿ ಇಲ್ಲ. ಈ ರೀತಿ ಕಥೆ ಮೂಡಿ ಬರುತ್ತಿಲ್ಲ. ಕರ್ಣ ಸೀರಿಯಲ್ ತ್ಯಾಗಮಯಿ ಟ್ಯಾಗ್‌ಲೈನ್ ತೆಗೆಯಲು ಪ್ರೇಕ್ಷಕರು ಒತ್ತಾಯಿಸುತ್ತಿದ್ದು, ಕ್ಯೂಟ್ ಸೀನ್‌ಗೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸೀರಿಯಲ್‌ನಲ್ಲಿ ತ್ಯಾಗಮಯಿ ಎನ್ನುವ ಪದವನ್ನು ಮೊದಲು ತೆಗೆಯಿರಿ. ತ್ಯಾಗಮಯಿ ನಿಧಿ - ಕರ್ಣ ಅಂತ. ಕೊನೆಯ ತನಕವೂ ನಿಧಿ ಮತ್ತು ಕರ್ಣ ಒಬ್ಬರನ್ನೊಬ್ಬರು ಬಿಟ್ಟುಕೊಡದೆ ನಿಷ್ಠೆಯಾಗಿದ್ದರೆ ಸಾಕು ಎಂದು ಪ್ರೇಕ್ಷಕರು ಕಮೆಂಟ್ ಮಾಡುತ್ತಿದ್ದಾರೆ.

ನಿತ್ಯಾ ಹಾಗೂ ತೇಜಸ್ ನಡುವೆ ಸಂಭಾಷಣೆ ನಡೆದಿದ್ದು, ನಿತ್ಯಾಗೆ ತೇಜಸ್ ಶಾಕ್ ಕೊಟ್ಟಿದ್ದಾನೆ. ನಾನು ನಿನ್ನೊಂದಿಗೆ ಇಷ್ಟೊಂದು ಕಠಿಣವಾಗಿ ನಡೆದುಕೊಳ್ಳಬಾರದಿತ್ತು. ಆದರೆ ನಿತ್ಯಾ ನಾನು ನಿನ್ನ ಮದುವೆ ಆಗುವುದಕ್ಕೆ ಆಗಲ್ಲ. ನನಗೆ ಈಗಾಗಲೇ ಮದುವೆ ಆಗಿದೆ ಅಂತ ಶಾಕ್ ಕೊಟ್ಟಿದ್ದಾನೆ. ನಿನ್ನಿಂದ ದೂರವಾದಾಗ ಮನೆಯವರು ಒಂದು ಹುಡುಗಿಯನ್ನು ತೋರಿಸಿದ್ದರು. ಆ ಹುಡುಗಿಯೊಂದಿಗೆ ನನಗೆ ಮದುವೆಯಾಗಿದೆ ಅಂತ ತೇಜಸ್ ಹೇಳಿದ್ದಾನೆ. ಮನೆಯವರೆಲ್ಲರೂ ನಿನ್ನನ್ನು ಮದುವೆ ಆಗಬೇಕು ಅಂತ ಹೇಳ್ತಾ ಇದ್ದಾರೆ. ಆದರೆ ನಿನ್ನ ಮದುವೆ ಆಗೋಕೆ ಆಗಲ್ಲ ನಿತ್ಯಾ ಅಂತ ತೇಜಸ್ ಹೇಳಿದ್ದಾನೆ. ಇದನ್ನು ನಾನು ಮೊದಲೇ ನಿನಗೆ ಹೇಳಬೇಕು ಅಂದುಕೊಂಡಿದ್ದೆ. ಆದರೆ ನನಗೆ ಧೈರ್ಯ ಸಾಕಾಗಲಿಲ್ಲ. ಅಪ್ಪ - ಅಮ್ಮ ತೋರಿಸಿದ ಹುಡುಗಿನ ಮದುವೆಯಾಗಿದ್ದೇನೆ ಅಂತ ತೇಜಸ್ ಹೇಳಿದ್ದಾನೆ.

Karna Serial

ನಿನ್ನ ಮೇಲಿನ ಕೋಪಕ್ಕೆ ನಾನು ಆ ಹುಡುಗಿಯನ್ನು ಮದುವೆಯಾದೆ. ನೀನು ಕರ್ಣನನ್ನು ಮದುವೆಯಾದ ರೀತಿಯೇ ನಾನೂ ಒಂದು ಹುಡುಗಿನ ಮದುವೆ ಆಗಬೇಕು ಎನ್ನುವ ಕೆಟ್ಟ ಕೋಪದಲ್ಲಿ ಈ ನಿರ್ಧಾರಕ್ಕೆ ಬಂದೆ ಎಂದು ತೇಜಸ್ ಹೇಳಿದ್ದಾನೆ. ಇದು ಪ್ರೇಕ್ಷಕರಿಗೆ ಬೇಸರ ತರಿಸಿದೆ. ಇಲ್ಲಿ ನಿಜಕ್ಕೂ ಕರ್ಣನ ಹೆಸರು ಹಾಗೂ ತ್ಯಾಗಕ್ಕೆ ಸೂಕ್ತವಾದ ವ್ಯಕ್ತಿ ಎಂದರೆ ಅದು ನಿತ್ಯಾ - ನಿಧಿ. ಆದ್ರೂ ಕರ್ಣ ನಿತ್ಯಾಗೆ ಬಾಳು ಕೊಟ್ಟಿದ್ದರೆ ಆ ಹೆಸರಿಗೆ ಒಂದು ಅರ್ಥ ಇರೋದು. ಈಗ ಡೈರೆಕ್ಟರ್ ಯಾವ ರೀತಿ ನ್ಯಾಯ ಕೊಡಿಸ್ತಾರೆ ಎಂದು ಪ್ರೇಕ್ಷಕರು ಪ್ರಶ್ನೆ ಮಾಡಿದ್ದಾರೆ.

ತೇಜಸ್ ನಾನು ಈಗ ಏನು ಮಾಡದ ಪರಿಸ್ಥಿತಿಯಲ್ಲಿದ್ದೇನೆ. ನೀನು ಯಾವಾಗ ಈ ಮಗು ನಿಂದಾ ಅಂತ ತಿಳಿದುಕೊಳ್ಳೋಕೆ ಡಿಎನ್ಎ ಟೆಸ್ಟ್‌ ಮಾಡಿಸಬೇಕು ಎಂದಾಗಲೇ ನನ್ನ ಮನಸ್ಸು ಹೊಡೆದು ಹೋಯ್ತು. ಪ್ರೀತಿ ಮೇಲಿದ್ದ ನಂಬಿಕೆಯನ್ನೇ ನಾನು ಸಂಪೂರ್ಣವಾಗಿ ಕಳೆದುಕೊಂಡು ಬಿಟ್ಟೆ. ಯಾರದೋ ಮಾತು ಕೇಳಿ ನಮ್ಮಿಬ್ಬರ ಪವಿತ್ರ ಸಂಬಂಧಕ್ಕೆ ಬೆಂಕಿ ಹಾಕ್ದಲ್ಲ ಅಂತ ತೇಜಸ್‌ಗೆ ನಿತ್ಯಾ ಪ್ರಶ್ನೆ ಮಾಡಿದ್ದಾಳೆ.

ಕರ್ಣ ಸೀರಿಯಲ್ ಹೊಸ ಎಪಿಸೋಡ್‌ಗಳಿಗೆ ಪ್ರೇಕ್ಷಕರು ಏನಂದ್ರು

ಕರ್ಣ ನ ಮೇಲಿನ ದ್ವೇಷದ ಕಾರಣಕ್ಕೆ ನಿತ್ಯಾಗೆ ಬದುಕಿಗೆ ಯಾಕಿಷ್ಟು ಕಷ್ಟ.? ಇಲ್ಲಿ ನಿತ್ಶಾ ತಪ್ಪಾದ್ರು ಏನು.? ಕರ್ಣ ಬದಲೂ ನಿತ್ಯಾ ಅಂತ ಟೈಟಲ್ ಹೆಸರು ಚೇಂಜ್ ಮಾಡಿ. ಇಲ್ಲಿ ತ್ಶಾಗಮಯಿ ನಿತ್ಯಾ ಮಾತ್ರ ಎಂದು ಪ್ರತಿಮಾ ಎನ್ನುವವರು ಹೇಳಿದ್ದಾರೆ.

ಮಧುಮಂಚದಲ್ಲಿ ಕರ್ಣ - ನಿಧಿ ಮುದ್ದಾದ ಜೋಡಿ; ದಾಂಪತ್ಯಕ್ಕೆ ಕರ್ಣನ ಮುತ್ತಿನ ಮುನ್ನುಡಿ ಎಂದು ಹೊಸ ಎಪಿಸೋಡ್ ಬಿಡುಗಡೆ ಮಾಡಲಾಗಿದೆ. ಆದರೆ ಈ ಹೊಸ ಎಪಿಸೋಡ್‌ನ ರೊಮ್ಯಾಂಟಿಕ್ ಸೀನ್‌ಗಳಿಗೂ ಪ್ರೇಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮನೇಲಿ ಮಕ್ಕಳು ಇರ್ತಾರೆ. ಸ್ವಲ್ಪ ನೋಡ್ಕೊಂಡ್ ಸೀನ್ ಮಾಡಿ ಮುಜುಗಾರ ಆಗದೇ ಇರೋ ತರ ಆದರೂ ಮಾಡಿ ಎಂದು ಕೆಲವು ಪ್ರೇಕ್ಷಕರು ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+