ಕೆಎಸ್ಆರ್ ಟಿಸಿ ಟಿಕೆಟ್ ರದ್ದು ಮಾಡಿಸಿದ್ರೆ ಹೆಚ್ಚು ಶುಲ್ಕ ತೆರಬೇಕು
ಬೆಂಗಳೂರು, ಮಾ. 27: ಟಿಕೆಟ್ ರದ್ದು ಮಾಡುವ ಪ್ರಕ್ರಿಯೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಗುರುವಾರ ಹೊಸ ಶುಲ್ಕಗಳನ್ನು ಘೋಷಣೆ ಮಾಡಿ ಆದೇಶ ಹೊರಡಿಸಿದೆ.
ಪ್ರಯಾಣದ ಪ್ರಾರಂಭಕ್ಕಿಂತಲೂ 72 ಗಂಟೆ ಮುಂಚಿತವಾಗಿ ಟಿಕೆಟ್ ರದ್ದುಪಡಿಸಿದರೆ, ಮೂಲ ಟಿಕೆಟ್ ದರದ ಶೇ. 10 ನ್ನು ಶುಲ್ಕದೊಂದಿಗೆ ಮುಂಗಡ ಕಾಯ್ದಿರಿಸುವಿಕೆ ಶುಲ್ಕವನ್ನಾಗಿ ನೀಡಬೇಕಾಗುತ್ತದೆ. ಪ್ರಯಾಣಕ್ಕೆ ಮುನ್ನ 24 ಗ0ಟೆಗಳಿಂದ 48 ಗಂಟೆಗಳವರೆಗೆ ರದ್ದು ಪಡಿಸಿದರೆ ಶೇ. 25 ರಷ್ಟು ಶುಲ್ಕ ನೀಡಬೇಕಾಗುತ್ತದೆ.[ಗೋವಾ-ಕರ್ನಾಟಕ ನಡುವೆ ಸಂಚರಿಸಲಿವೆ ಹೆಚ್ಚುವರಿ ಬಸ್]

ಪ್ರಯಾಣಕ್ಕೂ ಮೊದಲ 2 ಗಂಟೆಯಿಂದ 24 ಘಂಟೆಗೆ ಮುಂಚಿತವಾಗಿ ರದ್ದು ಪಡಿಸಿದಾಗ ಟಿಕೆಟ್ ದರದ ಶೇ. 50 ನ್ನು ಶುಲ್ಕವಾಗಿ ನೀಡಬೇಕಾಗುತ್ತದೆ. ಪ್ರಯಾಣಕ್ಕೆ 2 ಗಂಟೆ ಇರುವಾಗ ಟಿಕೆಟ್ ರದ್ದುಪಡಿಸಲು ಸಾಧ್ಯವಿಲ್ಲ.[ಗದಗದಿಂದ ಬೆಂಗಳೂರಿಗೆ ಎಸಿ ಬಸ್ ಸಂಚಾರ ಭಾಗ್ಯ]
ಈ ಮೊದಲು ಪ್ರಯಾಣದ ಹಿಂದಿನ 30 ನಿಮಿಷಗಳವರೆಗೂ ಟಿಕೆಟ್ ರದ್ದುಪಡಿಸುವ ಸೌಲಭ್ಯವಿತ್ತು ಅದಕ್ಕೆ ಟಿಕೆಟ್ ಮೊತ್ತದ ಶೇ. 50ನ್ನು ಮುರಿದುಕೊಳ್ಳಲಾಗುತ್ತಿತ್ತು. ಆದರೆ ಈಗ ಕೆಎಸ್ ಆರ್ ಟಿಸಿ ಹೊಸ ಶುಲ್ಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಹೊಸ ಶುಲ್ಕ ನೀತಿ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ ಎಂದು ಪ್ರಕಟಣೆ ತಿಳಿಸಿದೆ.












Click it and Unblock the Notifications