ಮದುವೆ ಸಮಾರಂಭಗಳಿಗೆ ಬುಕ್ ಮಾಡುವ ಕೆಎಸ್‌ಆರ್‌ಟಿಸಿ ಬಸ್ ದರ ಕಡಿತ
ಬೆಂಗಳೂರು,ಜನವರಿ 08:ರಾಜ್ಯ ಸರ್ಕಾರಿ ಸ್ವಾಮ್ಯದ ಸಾರಿಗೆ ಸೇವಾ ಸಂಸ್ಥೆ ಕೆಎಸ್‌ಆರ್‌ಟಿಸಿಯು ಮದುವೆ ಸಮಾರಂಭಗಳಿಗೆ ಬುಕ್ ಮಾಡುವ ಬಸ್‌ಗಳ ದರ ಕಡಿತ ಮಾಡಿದೆ.
ವರ್ಷ ವರ್ಷ ಆರಂಭವಾಗುತ್ತಿದ್ದಂತೆಯೇ ಕೆಎಸ್‌ಆರ್‌ಟಿಸಿ ಈ ಕೊಡುಗೆ ಘೋಷಿಸಿದೆ.
ಅಂತೆಯೇ 40 ಆಸನಗಳ ಫ್ಲೈ ಬಸ್ಸಿನ ಒಪ್ಪಂದ ದರ ಪ್ರತಿ ಕಿ.ಮೀಗೆ 10ರಿಂದ 16ರೂ ಗಳ ವರೆಗೆ ಕಡಿಮೆ ಮಾಡಲಾಗಿದೆ. ಅಂತೆಯೇ ಪ್ರತಿದಿನ 400ರಿಂದ 500 ಕಿಲೋ ಮೀಟರ್ ಪ್ರಯಾಣಿಸಬೇಕು ಎಂಬುದನ್ನು ನಿಗದಿಪಡಿಸಲಾಗಿದೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಬಸ್‌ಗಳನ್ನೇ ಬಳಕೆ ಮಾಡಿಕೊಳ್ಳಲು ಉತ್ತೇಜಿಸುವ ಸಂಬಂಧ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.
ಈ ಕುರಿತಂತೆ ಪ್ರಕಟಣೆ ಹೊರಡಿಸಿರುವ ಇಲಾಖೆ, 'ಮದುವೆ, ಪ್ರವಾಸ ಹಾಗೂ ಇನ್ನಿತರ ಕಾರಣಗಳಿಗೆ ಐಷಾರಾಮಿ ಬಸ್‌ಗಳನ್ನು ಒಪ್ಪಂದದ ಆಧಾರದಲ್ಲಿ ನೀಡಲು ಮುಂದಾಗಿರುವ ಕೆಎಸ್‌ಆರ್‌ಟಿಸಿ, ದರಗಳನ್ನು ಇಳಿಕೆ ಮಾಡಲಾಗಿದೆ ಎಂದು ಹೇಳಿದೆ.
ಪ್ರಕಟಣೆಯಲ್ಲಿರುವಂತೆ 47ರಿಂದ 49 ಆಸನಗಳ ಐರಾವತ ಕ್ಲಬ್ ಕ್ಲಾಸ್ (ಮಲ್ಟಿ ಆಕ್ಸೆಲ್) ಬಸ್ ಒಪ್ಪಂದದ ದರ ಪ್ರತಿ ಕಿಲೋ ಮೀಟರ್‌ಗೆ 5 ರಿಂದ 10 ಇಳಿಕೆ ಮಾಡಲಾಗಿದ್ದು, 32 ಆಸನಗಳ ಎಸಿ ಸ್ಲೀಪರ್ ಬಸ್ಸಿನ ಒಪ್ಪಂದ ದರ ಪ್ರತಿ ಕಿಲೋ ಮೀಟರ್‌ಗೆ 5 ರಿಂದ 6ರವರೆಗೆ ಇಳಿಕೆ ಮಾಡಲಾಗಿದೆ.











Click it and Unblock the Notifications