KSRTC: ಒಪ್ಪಂದದ ಮೇರೆಗೆ ಪಡೆಯುವ ಬಸ್‌ ಪ್ರಯಾಣ ದರ ಹೆಚ್ಚಳ, ಎಷ್ಟಾಗಿದೆ?

ಬೆಂಗಳೂರು, ಜನವರಿ 13: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ತನ್ನ ಬಸ್‌ಗಳ ಪ್ರಯಾಣ ದರ ದುಬಾರಿ ಮಾಡಿದೆ. ಶೇಕಡಾ 15ರಷ್ಟ ಬಸ್ ಟಿಕೆಟ್ ಬೆಲೆಯನ್ನು ಕಳೆದ ಜನವರಿ 5ರಿಂದಲೇ ಸಾರಿಗೆ ಇಲಾಖೆ ಜಾರಿಗೊಳಿಸಿದೆ. ಇದರ ಬೆನ್ನಲ್ಲೆ ವಿವಿಧ ಕಾರಣಗಳಿಗೆ ಸರ್ಕಾರಿ ಬಸ್‌ಗಳನ್ನು ಗಂಟೆಗೆ, ದಿನಕ್ಕೆ ಬಾಡಿಗೆ ಪಡೆಯುವ ಸಾಮಾನ್ಯ ಕಾಂಟ್ರ್ಯಾಕ್ಟ್ ಚಾರ್ಜ್ ಅನ್ನು ಹೆಚ್ಚಳ ಮಾಡಲಾಗಿದೆ. ಇದು ಪ್ರಯಾಣಿಕರಿಗೆ ಮಾತ್ರವಲ್ಲದೇ ಒಪ್ಪಂದ ಮೇರೆಗೆ ಓಡಾಡುವ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ದುಬಾರಿಯಾಗಿದೆ.

ಇತ್ತೀಚೆಗೆ ರಾಜ್ಯ ಸರ್ಕಾರ ಖರ್ಚು, ವೆಚ್ಚಗಳ ಹೆಸರಿನಲ್ಲಿ ರಾಜ್ಯದ ನಾಲ್ಕು ನಿಮಗಳ ಬಸ್‌ಗಳ ಪ್ರಯಾಣ ದರ ದುಬಾರಿ ಆಗಿತ್ತು. ಇದೀಗ ಒಪ್ಪಂದ ಮಾಡಿಕೊಂಡು ಇಂತಿಷ್ಟು ಸಮಯ, ದಿನಗಳವರೆಗೆ ಖಾಸಗಿ ಹಾಗೂ ಇನ್ನಿತರ ವ್ಯಕ್ತಿಗಳಿಗೆ ನೀಡುವ ಬಸ್ ಪ್ರಯಾಣ ದರವು ಹೆಚ್ಚಿಸಲಾಗಿದೆ ಎಂದು ನಿಗಮ ತಿಳಿಸಿದ್ದಾಗಿ 'ಡಿಎಚ್' ವರದಿ ಮಾಡಿದೆ.

KSRTC Provide Buses With Increased Charges for Casual Contract

ವಿದ್ಯಾರ್ಥಿಗಳ ಸಂಶೋಧನೆ, ಮದುವೆ, ಇನ್ನಿತರ ಸಮಾರಂಭ, ಪ್ರವಾಸ, ವಿವಿಧ ಕಾರ್ಯಕ್ರಮಗಳಿಗೆ ಕೆಎಸ್‌ಆರ್‌ಟಿಸಿ ಸೇರಿದಂತೆ ಬೆಂಗಳೂರು ಮಹಾನಗರ ಸಾರಿಗೆ (BMTC), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC), ಕರ್ನಾಟಕ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಬಸ್‌ಗಳನ್ನು ಸಾಮಾನ್ಯ ಒಪ್ಪಂದದ ಮೇರೆಗೆ ಬಾಡಿಗೆ ಪಡೆಯಲಾಗುತ್ತದೆ.

ಈ ಬಾಡಿಗೆಯ ದರವನ್ನು ಹೆಚ್ಚಳ ಮಾಡಿರುವುದಾಗಿ ಸದ್ಯ ಕೆಎಸ್‌ಆರ್‌ಟಿಸಿ ನಿಗಮ ತಿಳಿಸಿದೆ. ಇನ್ನೂಳಿದ ನಿಗಮಗಳು ಈ ಬಗ್ಗೆ ಅಧಿಕೃತ ಮಾಹಿತಿ ನೀಡಬೇಕಿದೆ. ಆದರೆ ಎಷ್ಟು ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ ಎಂಬ ಅಧಿಕೃತಿ ಮಾಹಿತಿ ಸಿಗಬೇಕಿದೆ.

ಕಿಲೋ ಮೀಟರ್‌, ಗಂಟೆಯ ಅವಧಿಗೆ ಇಂತಿಷ್ಟು ಬಸ್ ದರವೆಂದು ಹೆಚ್ಚಳ ಮಾಡಲಾಗಿದೆ. ಮುಖ್ಯವಾಗಿ ಈ ಬಸ್ ಪ್ರಯಾಣ ದರ ವಾರದ ದಿನಗಳು, ವಾರಾಂತ್ಯ ದಿನಗಳಲ್ಲಿ ಕೊಂಚ ವ್ಯತ್ಯಾಸವಾಗಲಿವೆ ಎಂದು KSRTC ಅಧಿಕಾರಿಗಳು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಒಪ್ಪಂದ ಪ್ರಯಾಣ ದರವನ್ನು ಶೇಕಡಾ ಸುಮಾರು 5 ರಿಂದ 15ರಷ್ಟು ಏರಿಕೆ ಮಾಡಬಹುದು ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+