KSRTC: ಮೈಸೂರು – ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬೆಕ್ಕಿನ ಮರಿಗೆ ಚಾರ್ಜ್ ತೆಗೆದುಕೊಂಡ ಕಂಡಕ್ಟರ್: ದರ ಇಲ್ಲಿದೆ ನೋಡಿ
KSRTC: ಸಾಮಾನ್ಯವಾಗಿ ಯಾವುದೇ ಬಸ್‌ಗಳಲ್ಲಿ ದೊಡ್ಡವರಿಗೆ ಪೂರ್ತಿ ದರದ ಟಿಕೆಟ್ ಅನ್ನೇ ನೀಡಲಾಗುತ್ತದೆ. ಮಕ್ಕಳಿಗೆ ಇದರಲ್ಲಿ ಅರ್ಧ ಇರುತ್ತದೆ. ಆದರೆ, ಇದೀಗ ಮೈಸೂರು-ಮಡಿಕೇರಿ ಮಾರ್ಗದ ಕೆಎಸ್‌ಆರ್‌ಸಿ ಬಸ್‌ನಲ್ಲಿ ಕಂಡಕ್ಟರ್ ಬೆಕ್ಕಿನ ಮರಿಗೆ ಸೀಟ್ ರಹಿತ ಶೇಕಡ 50 ಚಾರ್ಜ್ ತೆಗೆದುಕೊಂಡ ವಿಚಿತ್ರ ಘಟನೆ ನಡೆದಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಆಧಾರ್ ಅಥವಾ ಐಡಿ ಕಾರ್ಡ್ ತೋರಿಸಿ ಅವರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಆದರೆ, ಇದೀಗ ಮೈಸೂರು - ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಬೆಕ್ಕಿನ ಮರಿಗೂ ಟಿಕೆಟ್ ಅನ್ನೂ ಕೊಡಲಾಗಿದೆ. ಟಿಕೆಟ್ ತೆಗೆದುಕೊಂಡರೂ ಸಹ ಆ ಬೆಕ್ಕಿನ ಮರಿಗೆ ಸೀಟ್ ನೀಡಿಲ್ಲ ಎನ್ನುವ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ.

ಮೈಸೂರು - ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಬರುವಾಗ ಬೆಕ್ಕಿನ ಮರಿಗೆ ಟಿಕೇಟ್ ಕೇಳಿ, ಕಂಡಕ್ಟರ್ "ಅದು ಬೆಕ್ಕಿನ ಮರಿನೆ ಆಗಲಿ, ಮಕ್ಕಳೇ ಆಗಲಿ ಅರ್ಧ ದರವನ್ನು ಕೊಡಲೇಬೇಕು," ಎಂದು ಹೇಳಿದ್ದಾರೆ. ಇನ್ನು ಇದಕ್ಕೆ ನೆಟ್ಟಿಗರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. "ಇನ್ಮೇಲೆ ಬೆಕ್ಕಿಗೂ ಕ್ಯಾಟ್‌ಪಾಸ್ ಮಾಡಿಸಬೇಕಾ? ಅಷ್ಟೇ ಅಲ್ಲದೆ, ಹಣ ತೆಗೆದುಕೊಂಡರೂ ಸಹ ಸೀಟು ಕೂಡಾ ಕೊಟ್ಟಿಲ್ಲ. ಇದು ನ್ಯಾಯನಾ," ಎಂದು ಪ್ರಶ್ನೆ ಮಾಡಿದ್ದಾರೆ. ಈ ಟಿಕೆಟ್ ಫೋಟೋವನ್ನು coorgthekashmirofkarnataka ಎಂಬ thread ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ramadastalekar ಎಂಬುವರು, "ಪ್ರಾಣಿಗಳಿಗೂ ಟಿಕೇಟ್ ಪಡೆಯಬೇಕು ಎನ್ನುವುದು ಹಳೆಯ ನಿಯಮ. ಪಾಪ ಅವರಾದ್ರೂ ಏನು ಮಾಡ್ತಾರೆ. ಸೀಟ್ ಇದ್ದರೆ ಬೆಕ್ಕಿನ ಮರಿ ಕುಳಿತುಕೊಳ್ಳಲು ಅವರ ಅಭ್ಯಂತರ ಇರುವುದಿಲ್ಲ. ಸಾಕುಪ್ರಾಣಿಗಳಿಗೆ ನಿಷೇಧ ಮಾಡಿದರೆ, ನಿಮಗೆ ಕಷ್ಟ ಆಗಿರೋದಲ್ವಾ? ಅರ್ಧ ಟಿಕೇಟ್‌ಗಾದರೂ ನಿಮ್ಮ ಉಚಿತ ಟಿಕೆಟ್ ಜೊತೆ ಕರೆದುಕೊಂಡು ಹೋಗ್ತಿದ್ದಾರೆ. ಇಲ್ಲಾ ಅಂದ್ರೆ ಆಟೋ ಅಥವಾ ಕಾರು ಇಲ್ಲ ಅಂದ್ರೆ ನಡಕೊಂಡು ಕರಕೊಂಡು ಹೋಗಬೇಕಾಗಿತ್ತು," ಎಂದು ಬರೆದುಕೊಂಡಿದ್ದಾರೆ.
ಮತ್ತೊಬ್ಬರು, "ಇದು ನ್ಯಾಯವೇ? ಏಕೆಂದರೆ ಇವತ್ತು ಬೆಕ್ಕು ತರ್ತಿರ, ನಾಳೆ ಹಾವನ್ನು ತರ್ತಿರ. ಜೀವಂತ ಪ್ರಾಣಿಗಳನ್ನು ತರುವಾಗ ನೀವು ಸಾರ್ವಜನಿಕ ಸಾರಿಗೆಯನ್ನು ಬಳಕೆ ಮಾಡಬಾರದು. ಅದರಿಂದ ಜನರಿಗೆ ಅಥವ ಚಾಲಕನಿಗೆ ತೊಂದರೆ ಆದರೆ ಯಾರು ಜವಾಬ್ದಾರರು?," ಎಂದು ಪ್ರಶ್ನೆ ಮಾಡಿದ್ದಾರೆ.
ಚಕ್ರಪಾಣಿ ಎಂಬುವವರು, ಪ್ರಾಣಿಗಳಿಗೆ ಟಿಕೆಟ್ ತೆಗೆದು ಕೊಳ್ಳಬೇಕು. ಪಕ್ಷಿಗಳನ್ನು ಪಂಜರದಲ್ಲಿ ಸಾಗಿಸಬೇಕು ಹಾಗೂ ನಾಯಿ, ಬೆಕ್ಕುಗಳನ್ನೂ ಇತರ ಪ್ರಯಾಣಿಕರಿಗೆ ತೊಂದರೆ ಆಗದ ಹಾಗೆ ಮಾಸ್ಕ್ ಹಾಕಿ ಸರಪಳಿಯಿಂದ ಕಟ್ಟಬೇಕು. ಅದಕ್ಕೆ ಪೂರ್ಣ ಹಣಕೊಟ್ಟು ಸಾಗಿಸಬೇಕು. ಅದಕ್ಕೆ ಅಂತ ಸೀಟಿನ ವ್ಯವಸ್ಥೆ ಇರುವುದಿಲ್ಲ. ಕೇವಲ ಸಾಮಾನ್ಯ ಬಸ್ ಅಲ್ಲಿ ಮಾತ್ರ ಸಾಗಾಣಿಕೆ ಮಾಡಬೇಕು. ಅವುಗಳನ್ನು ಹವಾನಿಯಂತ್ರಿತ, ರಾಜಹಂಸ, ವೈಭವ, ಮುಂತಾದ ಬಸ್‌ಗಳಲ್ಲಿ ಸಾಗಾಣೆಗೆ ಅನುಮತಿ ಇರುವುದಿಲ್ಲ," ಎಂದು ಬರೆದುಕೊಂಡಿದ್ದಾರೆ.












Click it and Unblock the Notifications