KRS And Kabini Dam: ಕೆಆರ್‌ಎಸ್ ಡ್ಯಾಂಗೆ ಭರ್ಜರಿ ನೀರು, ತಮಿಳುನಾಡಿಗೆ ನೀರು ಹರಿಸಲು ಸಿದ್ಧತೆ?
ಕೆಆರ್‌ಎಸ್ ನೀರಿನ ಮಟ್ಟ ಬಲು ಜೋರಾಗಿ ಏರುತ್ತಿದ್ದು, ಇದೀಗ ಬರೋಬ್ಬರಿ 100 ಅಡಿ ದಾಟಿ ಹೋಗಿದೆ. ಕೆಆರ್‌ಎಸ್ ಮಾತ್ರವಲ್ಲ ಕಾವೇರಿ ಕೊಳ್ಳದಲ್ಲಿ ಬರುವ ಕಬಿನಿ & ಹೇಮಾವತಿ ಡ್ಯಾಂಗಳಿಗೆ ಕೂಡ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದ್ದು, ಜಲಾಶಯಗಳು ಇದೀಗ ತುಂಬಿ ತುಳುಕುತ್ತಿವೆ. ಹಾಗಾದ್ರೆ ಈಗ ಕೆಆರ್‌ಎಸ್, ಕಬಿನಿ & ಹೇಮಾವತಿ ಡ್ಯಾಂಗಳಲ್ಲಿ ಎಷ್ಟಿದೆ ನೀರಿನ ಪ್ರಮಾಣ? ಹಾಗೇ ತಮಿಳುನಾಡಿಗೆ ಕಾವೇರಿ ನೀರು ಬಿಡೋಕೆ ಸಿದ್ಧತೆ ಸಾಗಿದೆಯಾ? ಬನ್ನಿ ತಿಳಿಯೋಣ.
ಕೆಆರ್‌ಎಸ್ ಜಲಾಶಯ ದಕ್ಷಿಣ ಕರ್ನಾಟದ ಅದರಲ್ಲೂ ಹಳೇ ಮೈಸೂರು ಭಾಗದ ಪ್ರಮುಖ ಡ್ಯಾಂ ಆಗಿದೆ. ಕೆಆರ್‌ಎಸ್ ಜಲಾಶಯ ನಂಬಿ ಕೋಟಿ ಕೋಟಿ ಜನರು ಜೀವನ ಮಾಡ್ತಿದ್ದಾರೆ. ಆದರೆ ಕಳೆದ ವರ್ಷ ಅಂದ್ರೆ 2023 ರಲ್ಲಿ ಮಳೆ ಕೈಕೊಟ್ಟಿದ್ದ ಕಾರಣಕ್ಕೆ ಕೆಆರ್‌ಎಸ್ ಡ್ಯಾಂಗೆ ನೀರಿನ ಕೊರತೆ ಆಗಿತ್ತು. ಹೀಗಾಗಿ 2024 ರಲ್ಲಿ ಅಂದ್ರೆ ಪ್ರಸಕ್ತ ವರ್ಷ ಉತ್ತಮವಾಗಿ ಮಳೆಯ ಆಗಮನ ಆಗಲಿದೆ ಎಂಬ ನಿರೀಕ್ಷೆ ಇತ್ತು. ಈಗ ಆ ನಿರೀಕ್ಷೆಗಳು ನಿಜವಾಗಿದ್ದು, ಭಾರಿ ಮಳೆ ಬೀಳುತ್ತಿದೆ. ಇದರ ಪರಿಣಾಮ ಕೆಆರ್‌ಎಸ್ ಡ್ಯಾಂಗೆ ಭಾರಿ ಪ್ರಮಾಣದ ನೀರು ಬರುತ್ತಿದ್ದು, ನಿನ್ನೆಯೇ 100 ಅಡಿ ದಾಟಿದೆ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ. ಹಾಗಾದ್ರೆ ಇದೀಗ ಎಷ್ಟಿದೆ ನೀರಿನ ಪ್ರಮಾಣ? ಮುಂದೆ ಓದಿ.

ಕೆಆರ್‌ಎಸ್ ತುಂಬಲು ದಿನಗಣನೆ!
ಕೊಡಗು ಜಿಲ್ಲೆಯಲ್ಲಿ ಹಾಗೂ ಕೇರಳದ ವಯನಾಡು ಪ್ರದೇಶದಲ್ಲಿ ಭಾರಿ ಮಳೆ ಬೀಳ್ತಿದೆ. ಇದೇ ಕಾರಣಕ್ಕೆ ಕಾವೇರಿ ನದಿಗೆ ಕಟ್ಟಿರುವ ಕೆಆರ್‌ಎಸ್ & ಕಬಿನಿ ಡ್ಯಾಂಗಳ ನೀರಿನ ಮಟ್ಟ ಭಾರಿ ಏರಿಕೆ ಕಾಣುತ್ತಿದೆ. 49 ಟಿಎಂಸಿ ಸಾಮರ್ಥ್ಯದ ಕೆಆರ್‌ಎಸ್ ಡ್ಯಾಂಗೆ ಈಗ ಸುಮಾರು 15,000 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಈಗ ಕೆಆರ್‌ಎಸ್ ಡ್ಯಾಂನಲ್ಲಿ ಸುಮಾರು 23 ಟಿಎಂಸಿ ಅಡಿಯಷ್ಟು ನೀರು ಸಂಗ್ರಹ ಆಗಿದೆ. ಈ ಮೂಲಕ ಇನ್ನೇನು ಕೆಲವೇ ದಿನದಲ್ಲಿ ಕೆಆರ್‌ಎಸ್ ಡ್ಯಾಂ ಫುಲ್ ಆಗುವ ನಿರೀಕ್ಷೆ ಇದೆ. ಹಾಗಾದ್ರೆ ಹೇಗಿದೆ ಕಬಿನಿ & ಹೇಮಾವತಿ ಪರಿಸ್ಥಿತಿ? ಮುಂದೆ ಓದಿ.
ಕಬಿನಿ ತುಂಬಲು 3 ಅಡಿ ಬಾಕಿ!
ಕೊಡಗು & ಕೇರಳದ ವಯನಾಡು ಪ್ರದೇಶದ ಸುತ್ತಮುತ್ತ ಭಾರಿ ಮಳೆ ಬೀಳುತ್ತಿರುವ ಕಾರಣ ಈಗ ಕಾವೇರಿ ಕೊಳ್ಳದ ಮತ್ತೊಂದು ಡ್ಯಾಂ ಕಬಿನಿಗೆ ಕೂಡ ಭಾರಿ ನೀರು ಹರಿದು ಬರುತ್ತಿದೆ. ಇದರ ಪರಿಣಾಮ ಕಬಿನಿ ಜಲಾಶಯ ಇನ್ನೇನು ಫುಲ್ ಆಗುವ ನಿರೀಕ್ಷೆ ಕೂಡ ಇದೆ. ಹಾಗೇ ಸದ್ಯಕ್ಕೆ ಕಬಿನಿ ಡ್ಯಾಂನಲ್ಲಿ 17.25 ಟಿಎಂಸಿ ನೀರು ಇದ್ದು, ಈ ಡ್ಯಾಂನಲ್ಲಿ ಒಟ್ಟಾರೆ 19.52 ಟಿಎಂಸಿ ನೀರು ಸಂಗ್ರಹ ಮಾಡಬಹುದು. ಸದ್ಯಕ್ಕೆ ಕಬಿನಿ ಜಲಾಶಯಕ್ಕೆ ಸುಮಾರು 8,000 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹಾಗಾದ್ರೆ ಹೇಮಾವತಿ ಡ್ಯಾಂನಲ್ಲಿ ಎಷ್ಟಿದೆ ನೀರು? ಬನ್ನಿ ತಿಳಿಯೋಣ, ಮುಂದೆ ಓದೋಣ.
ಹೇಮಾವತಿ ಡ್ಯಾಂಗೆ ಭರ್ಜರಿ ನೀರು
ಕರ್ನಾಟಕದ ಪ್ರಮುಖ ಡ್ಯಾಂಗಳ ಪೈಕಿ ಹೇಮಾವತಿ ಜಲಾಶಯ ಕೂಡ ಒಂದಾಗಿದೆ. ಇಲ್ಲಿ ಸುಮಾರು 37 ಟಿಎಂಸಿ ನೀರು ಸಂಗ್ರಹ ಮಾಡಲು ಸಾಧ್ಯವಿದೆ. ಇದೀಗ ಹೇಮಾವತಿ ಡ್ಯಾಂ ಸುಮಾರು 16 ಟಿಎಂಸಿ ನೀರು ಹೊಂದಿದ್ದು, ಕಳೆದ ವರ್ಷ ಇದೇ ಸಮಯಕ್ಕೆ 14 ಟಿಎಂಸಿ ನೀರು ಹೊಂದಿತ್ತು. ಹೀಗಾಗಿ ಈ ವರ್ಷ ನೀರಿನ ಪ್ರಮಾಣ ಹೆಚ್ಚಾಗಿ ಇದ್ದು, 6230 ಕ್ಯುಸೆಕ್ ನೀರು ಹೇಮಾವತಿ ಡ್ಯಾಂಗೆ ಹರಿದು ಬರುತ್ತಿದೆ.












Click it and Unblock the Notifications