KRS Dam: ಕೆಆರ್‌ಎಸ್ & ಆಲಮಟ್ಟಿ ಸೇರಿದಂತೆ ಯಾವ ಯಾವ ಜಲಾಶಯಕ್ಕೆ ಎಷ್ಟು ನೀರು ಹರಿದು ಬರುತ್ತಿದೆ?

ಮುಂಗಾರು ಮಳೆ ಅಬ್ಬರ ಜೋರಾಗಿದೆ. ಕರ್ನಾಟಕ ರಾಜ್ಯದಲ್ಲಿ ಭರ್ಜರಿ ಮಳೆ ಸುರಿಯುತ್ತಿದ್ದು ರೈತರು & ನಗರ ಪ್ರದೇಶದ ನಿವಾಸಿಗಳು ಖುಷಿಯಾಗಿದ್ದಾರೆ. ಕಳೆದ 3 ವಾರಗಳಿಂದ ನಿರಂತರ, ಭರ್ಜರಿ ಅಬ್ಬರದಿಂದ ಮಳೆ ಸುರಿಯುತ್ತಿದೆ. ಹೀಗೆ ಭರ್ಜರಿ ಮಳೆ ಸುರಿಯುತ್ತಿರುವ ಕಾರಣಕ್ಕಾಗಿ ಇದೀಗ ಕರ್ನಾಟಕದ ಜಲಾಶಯಗಳು ಕೂಡ ತುಂಬಿಕೊಳ್ಳುತ್ತಿವೆ. ಹಾಗಾದ್ರೆ ಇದೀಗ ಕರ್ನಾಟಕದ ಜಲಾಶಯಗಳಲ್ಲಿ ಎಷ್ಟಿದೆ ನೀರಿನ ಮಟ್ಟ? ಕೆಆರ್‌ಎಸ್ & ಆಲಮಟ್ಟಿ ಸೇರಿದಂತೆ ಇತರ ಡ್ಯಾಂಗಳ ನೀರಿನ ಮಟ್ಟ ತಿಳಿಯಲು ಮುಂದೆ ಓದಿ.

ಮಳೆ.. ಮಳೆ.. ಮಳೆ.. ಎಲ್ಲೆಲ್ಲೂ ಬರೀ ಮಳೆಯ ಬಗ್ಗೆಯೇ, ಇದೀಗ ಚರ್ಚೆ ಜೋರಾಗುತ್ತಿದೆ. ಕರ್ನಾಟಕದ ಪಾಲಿಗೆ 2024ರ ಮುಂಗಾರು ಮಳೆ ಅದೃಷ್ಟ ತರುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಯಾಕಂದ್ರೆ ಅಂದುಕೊಂಡ ರೀತಿಯಲ್ಲೇ ಇದೀಗ ಮುಂಗಾರು ಮಳೆ ಕರ್ನಾಟಕದಲ್ಲಿ ಬೀಳುತ್ತಿದ್ದು, ಮುಂಗಾರು ಮಳೆ ಈಗ ಫುಲ್ ಅಲರ್ಟ್ ಆಗಿದ್ದು, ಎಲ್ಲೆಲ್ಲೂ ಭಾರಿ ಮಳೆಯನ್ನು ಸುರಿಸುತ್ತಿದೆ. ಕರ್ನಾಟಕದ ಮಲೆನಾಡು, ಕರಾವಳಿ ಜಿಲ್ಲೆಗಳೂ ಸೇರಿ ಉತ್ತರ ಕರ್ನಾಟಕ & ದಕ್ಷಿಣ ಕರ್ನಾಟಕ ಭಾಗದಲ್ಲೂ ಭರ್ಜರಿಯಾಗಿ ಮಳೆ ಬೀಳುತ್ತಿದೆ. ಹೀಗಾಗಿ ಕರ್ನಾಟಕದ ಡ್ಯಾಂಗಳಿಗೆ ಭಾರಿ ಪ್ರಮಾಣದ ನೀರು ಬರುತ್ತಿದೆ. ಹಾಗಾದ್ರೆ ಇದೀಗ ಕರ್ನಾಟಕದ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ? ಮುಂದೆ ಓದಿ.

KRS And Almatti Including Others Dams Water Level On 13th Of July 2024

KRS ಡ್ಯಾಂನಲ್ಲಿ ಎಷ್ಟಿದೆ ನೀರು?

ಕೆಆರ್‌ಎಸ್ ಡ್ಯಾಂನಲ್ಲಿ 49.45 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಇದೆ. ಈಗ 26.40 ಟಿಎಂಸಿ ನೀರು ಇದೆ. ಕಳೆದ ವರ್ಷ ಸುಮಾರು 14 ಟಿಎಂಸಿ ನೀರು ಇತ್ತು. 4,673 ಕ್ಯುಸೆಕ್ ನೀರು ಕೆಆರ್‌ಎಸ್ ಡ್ಯಾಂಗೆ ಹರಿದು ಬರ್ತಿದೆ. ಮುಂದಿನ ಕೆಲ ದಿನಗಳ ಕಾಲ ಭರ್ಜರಿ ಮಳೆ ನಿರೀಕ್ಷೆ ಇದ್ದು ಕೆಆರ್‌ಎಸ್‌ ಡ್ಯಾಂಗೆ ಮತ್ತಷ್ಟು ನೀರು ಹರಿದು ಬರುವ ಸಾಧ್ಯತೆ ಇದೆ. ಆದರೆ ಇನ್ನೊಂದು ಕಡೆ ತಮಿಳುನಾಡಿಗೆ ಕೂಡ ನೀರು ಬಿಡುವ ಅನಿವಾರ್ಯತೆ ಇರುವ ಕಾರಣಕ್ಕೆ ಪರಿಸ್ಥಿತಿ ಕೈಮೀರಿ ಹೋಗುವ ಸಾಧ್ಯತೆ ಕೂಡ ದಟ್ಟವಾಗಿದೆ. ಯಾಕಂದ್ರೆ ತಮಿಳುನಾಡಿಗೆ ನೀರು ಹರಿಸುವ ಕುರಿತು ಈಗಾಗಲೇ ರೈತಪರ ಸಂಘಟನೆಗಳು ಪ್ರತಿಭಟನೆ ಶುರು ಮಾಡಿವೆ.

ಆಲಮಟ್ಟಿ ಡ್ಯಾಂಗೆ ಇಷ್ಟು ನೀರು!

ಉತ್ತರ ಕರ್ನಾಟಕ ಭಾಗದ ಆಸರೆ ಆಲಮಟ್ಟಿ ಡ್ಯಾಂಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರ್ತಿದೆ. ಮಹಾರಾಷ್ಟ್ರದಲ್ಲಿ ನದಿಗಳು ಈಗ ಉಕ್ಕಿ ಹರಿಯುತ್ತಿವೆ. ಹೀಗೆ ಆಲಮಟ್ಟಿ ಡ್ಯಾಂಗೆ 34,645 ಕ್ಯುಸೆಕ್ ನೀರು ಹರಿದು ಬರುತ್ತಿದ್ದು. ಈ ಮೂಲಕ ಆಲಮಟ್ಟಿ ಜಲಾಶಯದಲ್ಲಿ ಈಗ 87.222 ಟಿಎಂಸಿ ನೀರು ಸಂಗ್ರಹ ಆಗಿದೆ. ಒಟ್ಟು 123 ಟಿಎಂಸಿ ಸಾಮರ್ಥ್ಯ ಹೊಂದಿರುವ ಆಲಮಟ್ಟಿ ಡ್ಯಾಂ ಇನ್ನೇನು ಕೆಲವೇ ದಿನಗಳಲ್ಲಿ ತುಂಬುವ ನಿರೀಕ್ಷೆ ಇದೆ. ಮತ್ತೊಂದು ಕಡೆ ಮಹಾರಾಷ್ಟ್ರ ರಾಜ್ಯದಲ್ಲಿ ಇದೀಗ ಭರ್ಜರಿ ಮಳೆ ಬೀಳುತ್ತಿದ್ದು, ಕೃಷ್ಣಾ ನದಿಗೆ ಕೂಡ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹಾಗೇ ಕೃಷ್ಣಾ ನದಿಯ ಉಪನದಿಗಳು ಕೂಡ ತುಂಬಿ ತುಳುಕುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+