Gali Janardhan Reddy : ಜ.16 ಬಳಿಕ ಕೆಆರ್‌ಪಿಪಿ ಪ್ರಣಾಳಿಕೆ, ಸಂಭಾವ್ಯ ಅಭ್ಯರ್ಥಿ ಘೋಷಣೆ

ಬೆಂಗಳೂರು, ಜನವರಿ 05: ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿರುವ ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಅವರು ತಮ್ಮ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ)ದ ಪ್ರಣಾಳಿಕೆ ಮತ್ತು ಸಂಭಾವ್ಯ ಅಭ್ಯರ್ಥಿಗಳನ್ನು ಜನವರಿ 16 ರ ನಂತರ ಪ್ರಕಟಿಸುವುದಾಗಿ ಬುಧವಾರ ಘೋಷಿಣೆ ಮಾಡಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಂದ ಸಿಗುತ್ತಿರುವ ಸ್ಪಂದನೆಯನ್ನು ಗಮನಿಸಿದರೆ ಪಕ್ಷದ ಬಲವನ್ನು ತೋರಿಸಬಲ್ಲೆ ಎಂಬ ವಿಶ್ವಾಸವಿದೆ. ಕರ್ನಾಟಕದಲ್ಲಿ ಆರಂಭಿಸಿರುವ ಯಾವುದೇ ಪ್ರಾದೇಶಿಕ ಸಂಘಟನೆಗಳು ಪರೀಕ್ಷೆಗೆ ನಿಂತಿಲ್ಲ ಎಂಬ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಪಕ್ಷಕ್ಕೆ ಸಿಗುತ್ತಿರುವ ಸ್ಪಂದೆನ ವ್ಯಾಪಕವಾಗಿದೆ. ಈ ಮೂಲಕ ಸ್ಥಳೀಯ ಪಕ್ಷದ ಬಲ ತೊರಿಸುವುದಾಗಿ ಹೇಳಿದರು.

ಜನಾರ್ದನ ರೆಡ್ಡಿ ಮತ್ತವರ ಪತ್ನಿ ಅರುಣಾ ಲಕ್ಷ್ಮಿ ಅವರು ಕಾಂಗ್ರೆಸ್‌ನ ಸಾಂಪ್ರದಾಯಿಕ ಮತ ಬ್ಯಾಂಕ್ ಅನ್ನು ಗುರಿಯಾಗಿಸಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ಪಕ್ಷ ಪ್ರಾರಂಭಿಸಿದ ಬಳಿಕ ಗಂಗಾವತಿ-ಬಳ್ಳಾರಿ ವಿಧಾನಸಭಾ ಕ್ಷೇತ್ರಗಳ ಮುಸ್ಲಿಂ ಮತ್ತು ಕುರುಬ ಸಮುದಾಯಗಳನ್ನು ಓಲೈಸಲು ಪ್ರಯತ್ನಿಸುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಎರಡನೇ ಹಂತದ ನಾಯಕರೊಂದಿಗೆ ರೆಡ್ಡಿ ಕೂಡ ಸ್ನೇಹ ಬೆಳೆಸಿದ್ದಾರೆ. ಜನವರಿ 11ರಂದು ಜನಾರ್ದನ ರೆಡ್ಡಿಯವರು ಜನ್ಮದಿನ ಅಂಗವಾಗಿ ಗಂಗಾವತಿಯಲ್ಲಿ ನಡೆಯಲಿರುವ ಸಮಾರಂಭಗಳಲ್ಲಿ ಪ್ರವಾಸದ ಪ್ರಗತಿ ಸಾಧನೆ, ಜನ ಸ್ಪಂದನೆ ಹೇಗಿರಲಿದೆ ಎಂದು ತಿಳಿದು ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

KRPP Party Manifesto And Potential Candidates Announce After Jan.16 Says Janardhan Reddy

ಜನಾರ್ದನ ರೆಡ್ಡಿ ಅವರ ಕೆಆರ್‌ಪಿಪಿ ಬಿಜೆಪಿಗೆ ಯಾವುದೇ ದಕ್ಕೆ ಮಾಡುವುದಿಲ್ಲ ಎಂದು ಅವರ ಮಾಜಿ ಸಹಾಯಕ ಮತ್ತು ಸಾರಿಗೆ ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ. ಬಿಜೆಪಿಯ ಹಿರಿಯ ನಾಯಕರು ಕೂಡ ಅದೇ ಅಭಿಪ್ರಾಯವನ್ನು ಹೊಂದಿದ್ದಾರೆ. ಆದರೆ ಜನಾರ್ದನ್ ರೆಡ್ಡಿ ಸ್ಥಾಪಿತ ಪಕ್ಷದಿಂದ ಬಿಜೆಪಿಗೆ ಧಕ್ಕೆ ಆಗದಿದ್ದರೆ, ಚುನಾವಣೆ ವೇಳೆ ಮತಗಳ ಒಡೆಯುತ್ತವೆ. ಇದು ಪರೋಕ್ಷವಾಗಿಯಾದರೂ ಬಿಜೆಪಿ ಇತರ ಪಕ್ಷ ಮೇಲೆ ಪರಿಣಾಮ ಬೀರಲಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಆಡಳಿತಾರೂಢ ಬಿಜೆಪಿಯು ಆಡಳಿತ ವಿರೋಧಿ ಹೋರಾಟವನ್ನು ಎದುರಿಸುತ್ತಿದೆ. ಈ ಕಾರಣದಿಂದ 2023 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭವಿಷ್ಯವು ಪ್ರಕಾಶಮಾನವಾಗಿಲ್ಲ ಎಂದು ರಾಜಕೀಯ ವಿಶ್ವೇಷಕರು ವಿಶ್ಲೇಷಣೆ ಮಾಡಿದ್ದಾರೆ.

ಆದರೆ ಪ್ರಾದೇಶಿಕ ರಾಜಕೀಯ ಸಂಘಟನೆಗಳಾದ ಜೆಡಿ(ಎಸ್), ಎಸ್‌ಡಿಪಿಐ, ಎಐಎಂಐಎಂ ಮತ್ತು ಆಮ್‌ ಆದ್ಮಿ ಪಕ್ಷ ಗಣನೀಯವಾಗಿ 'ಜಾತ್ಯತೀತ ಮತಗಳನ್ನು' ಗಳಿಸುವ ಸಾಧ್ಯತೆ ಇದೆ. ಇದರಿಂದ ಮುಂಬರಲಿರುವ (2023) ವಿಧಾನಸಭಾ ಚುನಾವಣೆಯ ಬಳಿಕ ಬಿಜೆಪಿ ಮತ್ತ ಸರ್ಕಾರ ರಚನೆ ಮಾಡುವ ಸಾಧ್ಯತೆ ಇದೆ ಎಂದು ಸರ್ಕಾರ ರಚಿಸಲು ಬಿಜೆಪಿಗೆ ಅವಕಾಶವಿದೆ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+