'ಕೃಷ್ಣ ಸಂಧಾನ': ಮಾಜಿ ಸಿಎಂ ಮಕ್ಕಳಿಗೆ ಟಿಕೆಟ್ ನೀಡಲು ಮುಂದಾದ ಬಿಜೆಪಿ

Subscribe to Oneindia Kannada
   ಕೃಷ್ಣ ಸಂಧಾನ : ಎಸ್ ಎಂ ಕೃಷ್ಣಾಗೆ ಆಫರ್ ಕೊಟ್ಟ ಬಿಜೆಪಿ | Oneindia Kannada

   ಬೆಂಗಳೂರು, ಏಪ್ರಿಲ್ 11: ಕಾಂಗ್ರೆಸ್ ಪಕ್ಷದಲ್ಲಿ ಜೀವಮಾನವನ್ನೆಲ್ಲಾ ಕಳೆದು ಕಡೆಗೆ ಬಿಜೆಪಿ ಸೇರಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಇದೀಗ ಮೂಲೆಗುಂಪಾಗಿದ್ದಾರೆ. ಈ ಹಿನ್ನಲೆಯಲ್ಲಿ ಕಮಲ ಪಕ್ಷದ ಬಗ್ಗೆ ಬೇಸರಗೊಂಡಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದರ ಮಧ್ಯೆ ಅವರ ಮನವೊಲಿಸಲು ಕುಟುಂಬಸ್ಥರಿಗೆ ಟಿಕೆಟ್ ನೀಡುವ ಆಯ್ಕೆಯನ್ನು ಬಿಜೆಪಿ ಮುಂದಿಟ್ಟಿದೆ.

   ಹಾಗೆ ನೋಡಿದರೆ ಬಿಜೆಪಿ ಸೇರಿದ್ದ 85ರ ಹರೆಯದ ಕೃಷ್ಣ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ತುಂಬಾ ಕಡಿಮೆ. ಜನವರಿಯಲ್ಲಿ ಮಂಡ್ಯದಲ್ಲಿ ನಡೆದ ಪರಿವರ್ತನಾ ಯಾತ್ರೆ ಮತ್ತು ಬೆಂಗಳೂರಿನಲ್ಲಿ ಫೆಬ್ರವರಿ ತಿಂಗಳಲ್ಲಿ ನರೇಂದ್ರ ಮೋದಿ ಭಾಗವಹಿಸಿದ್ದ ಸಮಾವೇಶದಲ್ಲಿ ಅವರು ಕಾಣಿಸಿಕೊಂಡಿದ್ದರು. ಮತ್ತೆಂದೂ ಅವರು ಯಾರ ಕಣ್ಣಿಗೂ ಬಿಜೆಪಿ ನಾಯಕರ ಜತೆ ಕಾಣಿಸಿಕೊಂಡಿಲ್ಲ.

   ಕೃಷ್ಣ ಕಾಂಗ್ರೆಸ್ಸಿಗೆ:'ಗೊತ್ತಿಲ್ಲ' ಎಂದ ಸಿದ್ದು,ಸುಳ್ಳು ಎಂದ ಬಿಜೆಪಿ

   ಇವೆಲ್ಲದರ ನಡುವೆ ಎಸ್.ಎಂ. ಕೃಷ್ಣ ಪಕ್ಷ ತೊರೆಯುವ ಬೆದರಿಕೆ ಹಾಕಿದ್ದಾರೆ ಎಂಬ ವರದಿಗಳ ಕೇಳಿ ಬರುತ್ತಿವೆ. ಇದೇ ಸಂದರ್ಭದಲ್ಲಿ ಅವರ ಕುಟುಂಬಸ್ಥರಿಗೆ ಟಿಕೆಟ್ ನೀಡುವ ಆಫರ್ ನ್ನು ಬಿಜೆಪಿ ಕೃಷ್ಣ ಮುಂದಿಟ್ಟಿದೆ.

   Krishna Sandhan, BJP offers ticket to his kin

   "ಒಂದೊಮ್ಮೆ ಎಸ್.ಎಂ. ಕೃಷ್ಣ ಕುಟುಂಬಸ್ಥರು ಯಾರಾದರೂ ಸ್ಪರ್ಧಿಸಬೇಕು ಎಂದು ಬಯಸಿದಲ್ಲಿ ಬಿಜೆಪಿ ಮಂಡ್ಯ ಅಥವಾ ಬೆಂಗಳೂರಿನ ಯಾವುದಾದರೂ ಕ್ಷೇತ್ರದಲ್ಲಿ ಟಿಕೆಟ್ ನೀಡಲು ಸಿದ್ದವಿದೆ," ಎಂದು ಬಿಜೆಪಿ ನಾಯಕ ಆರ್. ಅಶೋಕ್ ಮಾಧ್ಯವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

   ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

   ಕೃಷ್ಣಾಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಶಾಂಭಾವಿ ಮತ್ತು ಮಾಳವಿಕಾ ಅವರ ಮಕ್ಕಳಾಗಿದ್ದಾರೆ. ಇದರಲ್ಲಿ ಶಾಂಭವಿಯವರನ್ನು 2009ರಲ್ಲಿ ಲೋಕಸಭೆ ಚುನಾವಣೆಗೆ ನಿಲ್ಲಿಸಲು ಕೃಷ್ಣಾ ಹೊರಟಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

   ಇದೇನಿದು..? ಮತ್ತೆ ಕಾಂಗ್ರೆಸ್ಸಿಗೆ ಬರುತ್ತಾರಾ ಎಸ್ ಎಂ ಕೃಷ್ಣ..?!

   ಇನ್ನು ಕೃಷ್ಣ ಪಕ್ಷ ತೊರೆಯುವ ತೀರ್ಮಾನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಶೋಕ್, "ಅವರು ಸದ್ಯ ಭಾರತದಲ್ಲಿಲ್ಲ. ಆದರೆ ನಾನು ಅವರ ಗೆಳೆಯರೊಬ್ಬರ ಜೊತೆ ಮಾನತಾಡಿದೆ. ಏಪ್ರಿಲ್ 13ರಂದು ಅವರು ಭಾರತಕ್ಕೆ ವಾಪಾಸಾಗಲಿದ್ದಾರೆ. ನಂತರ ಅವರ ಜೊತೆಗೆ ನಾವು ಚುನಾವಣೆಗೆ ಸಂಬಂಧ ಚರ್ಚೆ ನಡೆಸಲಿದ್ದೇವೆ. ಅವರು ನೂರಕ್ಕೆ ನೂರರಷ್ಟು ಪಕ್ಷ ಬಿಡುವುದಿಲ್ಲ. ಅವರು ಪಕ್ಷ ಬೆಳೆಸಲು ಬದ್ಧರಾಗಿದ್ದಾರೆ," ಎಂದಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   The Karnataka BJP on Tuesday offered to field a member of veteran politician SM Krishna's family in the polls, in an effort to placate the former chief minister who is said to have threatened to quit the party for neglecting him.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ