ಕೆಪಿಸಿಸಿ ಅಧ್ಯಕ್ಷ ಸ್ಥಾನ: ರಾಜ್ಯ ನಾಯಕರ ಎಲ್ಲಾ ಲೆಕ್ಕಾಚಾರ ಉಲ್ಟಾಪಲ್ಟ ಮಾಡಿದ ಹೈಕಮಾಂಡ್?

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜ್ಯ ನಾಯಕರು ತೀವ್ರ ಲಾಬಿ ಮುಂದುವರಿಸುತ್ತಿದ್ದರೆ, ಹೈಕಮಾಂಡ್ ಮಾತ್ರ ದಿವ್ಯಮೌನಕ್ಕೆ ಶರಣಾಗಿದೆ. ಸೋನಿಯಾ ಅಥವಾ ರಾಹುಲ್ ಗಾಂಧಿ, ಈ ವಿಚಾರದಲ್ಲಿ ಏನೂ ಹೇಳಿಕೆಯನ್ನು ನೀಡುತ್ತಿಲ್ಲ.

ಅಧ್ಯಕ್ಷ ಸ್ಥಾನಕ್ಕೆ ಮಂಚೂಣಿಯಲ್ಲಿ ಕೇಳಿಬರುತ್ತಿದ್ದ ಹೆಸರು ಡಿ.ಕೆ.ಶಿವಕುಮಾರ್ ಅವರದ್ದು. ಆದರೆ, ಅವರನ್ನೇ ಆಯ್ಕೆಮಾಡಲು ಹೈಕಮಾಂಡ್ ಒಲವು ತೋರಿದ್ದರೂ, ರಾಹುಲ್ ಗಾಂಧಿ ಸದ್ಯಕ್ಕೆ ತಡೆಹಿಡಿದಿದ್ದಾರೆ ಎಂದು ಹೇಳಲಾಗುತ್ತಿತ್ತು.

ತನ್ನನ್ನು ಆಯ್ಕೆ ಮಾಡಿದರೆ ಮತ್ತೆ ಇಡಿ/ಸಿಬಿಐನಿಂದ ತೊಂದರೆ ಬಂದರೆ, ಕಾನೂನಾತ್ಮಕವಾಗಿ ಹೇಗೆ ಹೋರಾಡಬೇಕು ಎನ್ನುವ ವಿಚಾರದಲ್ಲಿ ಡಿಕೆಶಿ, ವಕೀಲರ ಬಳಿ ಚರ್ಚೆ ನಡೆಸಿದ್ದಾರೆ.

ದೆಹಲಿಯಲ್ಲಿ ಬೀಡು ಬಿಟ್ಟಿರುವ ಡಿಕೆಶಿ, ವಕೀಲರ ಜೊತೆ ಹಲವು ಆಯಾಮಗಳಲ್ಲಿ ಚರ್ಚಿಸುತ್ತಿದ್ದಾರೆಂದು ತಿಳಿದುಬಂದಿದೆ. ಈ ನಡುವೆ, ದಿನೇಶ್ ಗುಂಡೂರಾವ್ ಮತ್ತೆ ದೆಹಲಿಗೆ ತೆರಳಿರುವುದು ರಾಜ್ಯ ನಾಯಕರ ಎದೆಬಡಿತ ಹೆಚ್ಚಾಗುವಂತೆ ಮಾಡಿದೆ.

ಹದಿನೈದು ದಿನಗಳಲ್ಲಿ ದಿನೇಶ್, ದೆಹಲಿಗೆ ಭೇಟಿ ನೀಡುತ್ತಿರುವುದು ಇದು ಎರಡನೆಯ ಬಾರಿ

ಹದಿನೈದು ದಿನಗಳಲ್ಲಿ ದಿನೇಶ್, ದೆಹಲಿಗೆ ಭೇಟಿ ನೀಡುತ್ತಿರುವುದು ಇದು ಎರಡನೆಯ ಬಾರಿ

ಕಳೆದ ಹದಿನೈದು ದಿನಗಳಲ್ಲಿ ದಿನೇಶ್ ಗುಂಡೂರಾವ್, ದೆಹಲಿಗೆ ಭೇಟಿ ನೀಡುತ್ತಿರುವುದು ಇದು ಎರಡನೆಯ ಬಾರಿ. ಕಳೆದ ಭೇಟಿಯ ವೇಳೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿದ್ದ ದಿನೇಶ್, ಈ ಬಾರಿ ರಾಹುಲ್ ಗಾಂಧಿ ಭೇಟಿಗಾಗಿ ದೆಹಲಿಗೆ ತೆರಳಿದ್ದಾರೆ. ಶನಿವಾರ (ಮಾ 7) ದಿನೇಶ್, ರಾಹುಲ್ ಗಾಂಧಿಯವರನ್ನು ಭೇಟಿಯಾಗುವ ಸಾಧ್ಯತೆಯಿದೆ.

ಕಾಂಗ್ರೆಸ್ ಅಧ್ಯಕ್ಷರ ಜೊತೆ ಎಲ್ಲಾ ಚರ್ಚೆಯನ್ನು ಮಾಡಿದ್ದೇನೆ

ಕಾಂಗ್ರೆಸ್ ಅಧ್ಯಕ್ಷರ ಜೊತೆ ಎಲ್ಲಾ ಚರ್ಚೆಯನ್ನು ಮಾಡಿದ್ದೇನೆ

"ಹೋದ ಬಾರಿ ದೆಹಲಿಗೆ ಬಂದಾಗ ಕಾಂಗ್ರೆಸ್ ಅಧ್ಯಕ್ಷರ ಜೊತೆ ಎಲ್ಲಾ ಚರ್ಚೆಯನ್ನು ಮಾಡಿದ್ದೇನೆ. ಈ ಬಾರಿ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ರಾಜ್ಯದ ವಿಚಾರವನ್ನು ಸವಿಸ್ತಾರವಾಗಿ ವಿವರಿಸಲಿದ್ದೇನೆ. ರಾಜ್ಯ ನಾಯಕರ ಅಭಿಪ್ರಾಯ ಏನೇ ಇದ್ದರೂ, ಅಂತಿಮವಾಗಿ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಬೇಕು" ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಅಧಿವೇಶನ ನಡೆಯುತ್ತಿದೆ

ಅಧಿವೇಶನ ನಡೆಯುತ್ತಿದೆ

"ಅಧ್ಯಕ್ಷರ ವಿಚಾರ ಅಂತಿಮವಾಗಲೇ ಬೇಕು. ಅಧಿವೇಶನ ನಡೆಯುತ್ತಿದೆ, ಇದಾದ ನಂತರ, ರಾಜ್ಯ ಪ್ರವಾಸಕ್ಕೆ ಹೋಗಬೇಕಾಗಿದೆ. ಒಂದೋ ನಾನು ನೀಡಿದ ರಾಜೀನಾಮೆಯನ್ನು ಆಂಗೀಕರಿಸಲಿ, ಇಲ್ಲವೇ ನನ್ನನ್ನೇ ಅಧ್ಯಕ್ಷರನ್ನಾಗಿ ಮುಂದುವರಿಸಲಿ" ಎಂದು ದಿನೇಶ್ ಗುಂಡೂರಾವ್ ಬಹಿರಂಗವಾಗಿಯೇ ಹೇಳಿದ್ದಾರೆ.

ದಿನೇಶ್ ಗುಂಡೂರಾವ್ ಅವರನ್ನೇ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮುಂದುವರಿಸುವ ತೀರ್ಮಾನ

ದಿನೇಶ್ ಗುಂಡೂರಾವ್ ಅವರನ್ನೇ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮುಂದುವರಿಸುವ ತೀರ್ಮಾನ

ಸದ್ಯದ ಮಾಹಿತಿಯ ಪ್ರಕಾರ, ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿ ದಿನೇಶ್ ಗುಂಡೂರಾವ್ ಅವರನ್ನೇ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮುಂದುವರಿಸುವ ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಳ್ಲಬಹುದು ಎಂದು ಹೇಳಲಾಗುತ್ತಿದೆ. ದಿನೇಶ್ ಅವರನ್ನೇ ಮುಂದುವರಿಸಿದರೆ, ಇದಕ್ಕೆ ಯಾವ ಬಣಗಳಿಂದಲೂ ವಿರೋಧ ಎದುರಾಗುವುದಿಲ್ಲ ಎನ್ನುವುದು ಹೈಕಮಾಂಡ್ ಗಮನಕ್ಕೆ ಬಂದಿದೆ ಎನ್ನುವ ಸುದ್ದಿಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+