Get Updates
Get notified of breaking news, exclusive insights, and must-see stories!

ಡಿ.ಕೆ. ಶಿವಕುಮಾರ್ ವಿರುದ್ಧ ದೂರು ಕೊಟ್ಟಿದ್ದ ಸಂಸದರಿಗೆ ರಾಜೀವ್ ಗಾಂಧಿ ಏನು ಹೇಳಿದ್ದರು?

ಬೆಂಗಳೂರು, ಆ. 20: "1982 ರ ಸಮಯದಲ್ಲಿ ನಮ್ಮ ಊರಲ್ಲಿ ಟೆಲಿಫೋನ್ ಇರಲಿಲ್ಲ. ಆಗ ಸಂಸದರಿಗೆ 10 ಫೋನ್ ನೀಡುವ ಕೋಟಾ ಇತ್ತು. ರಾಜೀವ್ ಗಾಂಧಿ ಅವರು ಪ್ರಧಾನಿಯಾದ ನಂತರ ಟೆಲಿಫೋನ್ ಕ್ರಾಂತಿ, ಕಂಪ್ಯೂಟರ್ ಕ್ರಾಂತಿ ಆಯಿತು. ಇಂದು ನಮ್ಮ ಬಳಿ ಎರಡು ಮೂರು ಫೋನ್ ಗಳು ಇವೆ ಎಂದರೆ ಅದಕ್ಕೆ ಮೂಲ ಕಾರಣ ರಾಜೀವ್ ಗಾಂಧಿ ಅವರು. ಆಗ ಅವರ ವಿರುದ್ಧ ಅನೇಕರು ವಿರೋಧ ವ್ಯಕ್ತಪಡಿಸಿದರು. ದೇಶವನ್ನು ಹೊಸ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಲು ಹೊಸ ಶಿಕ್ಷಣ ನೀತಿ ಜಾರಿಗೆ ತಂದರು. ದೇಶಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ನಂತರ ದೇಶದ, ಐಕ್ಯತೆ, ಸಮಗ್ರತೆ, ಶಾಂತಿಗಾಗಿ ತಮ್ಮ ಪ್ರಾಣ ತ್ಯಾಗ ಮಾಡಿದರು" ಎಂದು ನೆನಪಿಸಿಕೊಂಡರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್.

ಇಂದು ಶುಕ್ರವಾರ ಕಾಂಗ್ರೆಸ್ ಪಕ್ಷದ ಇಬ್ಬರು ನಾಯಕರ ಜನ್ಮದಿನ. ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಹಾಗೂ ಮಾಜಿ ಸಿಎಂ ದಿ. ದೇವರಾಜ ಅರಸು ಅವರ ಜನ್ಮದಿನ. ನಾಡು ಹಾಗೂ ದೇಶಕ್ಕಾಗಿ ವಿನೂತನ ಯೋಜನೆಗಳನ್ನು ಇಬ್ಬರೂ ನಾಯಕರು ತಂದಿದ್ದರು. ಜೊತೆಗೆ ಈಗಿನ ರಾಜ್ಯ ಕಾಂಗ್ರೆಸ್ ನಾಯಕರಿಗೆ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಮಾರ್ಗದರ್ಶನ ಮಾಡಿದ್ದರು. ಹೀಗಾಗಿ ರಾಜ್ಯ ಕಾಂಗ್ರೆಸ್ ನಾಯಕರು ಇಬ್ಬರೂ ನಾಯಕರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡರು. ಅದರಲ್ಲೂ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಹಲವು ವಿಚಾರಗಳನ್ನು ಹಂಚಿಕೊಂಡರು.

ನಾವೆಲ್ಲ ರಾಜೀವ್ ಗಾಂಧಿ ದೂರದೃಷ್ಟಿಯ ಫಲಾನುಭವಿಗಳು!

ನಾವೆಲ್ಲ ರಾಜೀವ್ ಗಾಂಧಿ ದೂರದೃಷ್ಟಿಯ ಫಲಾನುಭವಿಗಳು!

"ಇಲ್ಲಿ ಪಕ್ಷದ ಹಲವು ನಾಯಕರು ಇದ್ದಾರೆ. ನಾವೆಲ್ಲರೂ ರಾಜೀವ್ ಗಾಂಧಿ ಅವರ ಚಿಂತನೆಯ, ದೂರದೃಷ್ಟಿಯ ಫಲಾನುಭವಿಗಳು. ರಾಜೀವ್ ಗಾಂಧಿ ಅವರು ಪ್ರಧಾನಿಯಾದ ಮೇಲೆ ರಾಮಲಿಂಗಾರೆಡ್ಡಿ, ನಜೀರ್, ನಾಡಗೌಡರು ಸೇರಿದಂತೆ 63 ಮಂದಿ ಯುವಕರಿಗೆ ಟಿಕೆಟ್ ನೀಡಿದರು."

"ಪ್ರತಿ ಸನ್ನಿವೇಶದಲ್ಲೂ ಯುವಕರ ಪಾಲುದಾರಿಕೆ ಇದೆ ಎಂದು ತೋರಿಸಿಕೊಟ್ಟದ್ದೇ ರಾಜೀವ್ ಗಾಂಧಿ ಅವರು. ಮತದಾನದ ವಯಸ್ಸು 18ಕ್ಕೆ ಇಳಿಸುವ ವಿಚಾರವಾಗಿ ಸಂಸತ್ತಿನಲ್ಲಿ ಚರ್ಚೆ ನಡೆಯುವಾಗ ಗಲಾಟೆ ಆಯಿತು. ಬಿಜೆಪಿ, ಜನಸಂಘ ಸೇರಿದಂತೆ ಅನೇಕ ಪಕ್ಷಗಳು ಇದನ್ನು ವಿರೋಧಿಸಿದ್ದವು" ಎಂದು ಡಿಕೆಶಿ ರಾಜೀವ್ ಗಾಂಧಿ ಕುರಿತು ತಮ್ಮ ಅನುಭವ ಹಂಚಿಕೊಂಡರು. ಜೊತೆಗೆ ಅವರ ದೂರದೃಷ್ಟಿಗೆ ಮತ್ತೊಂದು ಸಂಗತಿಯನ್ನು ಹಂಚಿಕೊಂಡರು.

ಗಡಿ ಕಾಯಲು ಓಕೆ, ಅಧಿಕಾರ ನಡೆಸಲು ಯಾಕೆ ಬೇಡ?

ಗಡಿ ಕಾಯಲು ಓಕೆ, ಅಧಿಕಾರ ನಡೆಸಲು ಯಾಕೆ ಬೇಡ?

ಅದೇನೆಂದರೆ, "16 ವರ್ಷದವರನ್ನು ಸೇನೆಗೆ ಸೇರಿಸಿಕೊಂಡು ಬಂದೂಕು ಕೊಟ್ಟು ದೇಶ ಕಾಯಲು ನಿಲ್ಲಿಸುತ್ತೇವೆ. ಹೀಗಾಗಿ ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೂ ಮತದಾನ ಹಕ್ಕು ನೀಡುವುದು ಬೇಡ ಎಂದು ಹೇಳಲು ಹೇಗೆ ಸಾಧ್ಯ? ಈ ದೇಶದ ಯುವಕರ ಮೇಲೆ ನಂಬಿಕೆ ಇದೆ ಎಂದು ರಾಜೀವ್ ಗಾಂಧಿ ಅವರು ಹೇಳಿದರು."

"ಈ ದೇಶದಲ್ಲಿ ಕಾಲೇಜು ಚುನಾವಣೆ ಮೂಲಕ ವಿದ್ಯಾರ್ಥಿ ನಾಯಕರನ್ನು ಬೆಳೆಸಲಾಗುತ್ತಿತ್ತು. ಈಗ ಅದು ಇಲ್ಲ. ಈ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯ ಹಾಕಿ ಕಾಪಾಡಬೇಕಾದರೆ ಸಂವಿಧಾನಕ್ಕೆ 73, 74ನೇ ತಿದ್ದುಪಡಿ ತಂದು ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ನಾಯಕರನ್ನು ತಯಾರು ಮಾಡಬೇಕು. ಅದಕ್ಕಾಗಿ ಈ ತಿದ್ದುಪಡಿ ತರಲಾಗುತ್ತಿದೆ ಎಂದು ರಾಜೀವ್ ಗಾಂಧಿ ಅವರು ಹೇಳಿದ್ದರು" ಎಂದು ಶಿವಕುಮಾರ್ ತಮ್ಮ ನೆನಪು ಬಿಚ್ಚಿಟ್ಟರು.

ದೂರು ಕೊಟ್ಟಿದ್ದ ಸಂಸದರಿಗೆ ಡಿಕೆಶಿ ಕುರಿತು ರಾಜೀವ್ ಹೇಳಿದ್ದೇನು?

ದೂರು ಕೊಟ್ಟಿದ್ದ ಸಂಸದರಿಗೆ ಡಿಕೆಶಿ ಕುರಿತು ರಾಜೀವ್ ಹೇಳಿದ್ದೇನು?

"ಬಂಗಾರಪ್ಪ ಅವರು ಮುಖ್ಯಮಂತ್ರಿ ಆದಾಗ ಎಲ್ಲ ವರ್ಗದ ಯುವಕರನ್ನು ಸಂಪುಟದಲ್ಲಿ ಸೇರಿಸಿಕೊಳ್ಳಬೇಕು ಎಂದು ಸೂಚಿಸಿದರು. ನಾನು, ನಜೀರ್ ಸೇರಿದಂತೆ ಎಲ್ಲ ವರ್ಗದವರನ್ನು ಸಂಪುಟಕ್ಕೆ ಸೇರಿಸಿಕೊಂಡರು. ದೇಶದುದ್ದಗಲಕ್ಕೂ ಯುವಕರಿಗೆ ಆದ್ಯತೆ ನೀಡಿದರು."

"ಒಮ್ಮೆ ಯುವ ನಾಯಕರನ್ನು ಪ್ಯಾಂಗ್ಯಾಂಗ್‌ಗೆ ಕಳುಹಿಸಿಕೊಟ್ಟರು. ಆಗ ನನ್ನ ವಿರುದ್ಧ ಐವರು ಸಂಸದರು ಹೋಗಿ ದೂರು ಹೇಳಿದರು. ಯಾಕೆ ದೂರು ಕೊಟ್ಟರೋ ಗೊತ್ತಿಲ್ಲ. ಆಗ ನಾವು ಹೊರಡುವ ಮುನ್ನ ನನ್ನ ಮೇಲಿನ ದೂರಿನ ಬಗ್ಗೆ ವಿಚಾರಿಸಿದರು. ಆಗ ಅವರು ಐದು ಜನ ಸಂಸದರಿಗೆ ಒಂದು ಮಾತು ಹೇಳಿದರು. Controversial leaders are beneficial, controversial leaders are successful ಎಂದಿದ್ದರು. ವಿವಾದಾತ್ಮಕರಾಗಿದ್ದಾರೆ ಎಂದು ಅವರನ್ನು ನಿರ್ಲಕ್ಷಿಸಬೇಡಿ. ಪಕ್ಷ ಸಂಘಟಿಸುವ ಶಕ್ತಿ ಶಿವಕುಮಾರ್ ಅವರಲ್ಲಿದೆ, ಆತನಿಂದ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ಹೇಳಿದ್ದರು ಎಂದು ರಾಜೀವ್ ಗಾಂಧಿ ತಮ್ಮ ಮೇಳೆ ಇಟ್ಟಿದ್ದ ಭರವಸೆಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಂಚಿಕೊಂಡರು.

ಕುಸಿದಿದೆ ಪ್ರಧಾನಿ ನರೇಂದ್ರ ಮೋದಿ ಖ್ಯಾತಿ!

ಕುಸಿದಿದೆ ಪ್ರಧಾನಿ ನರೇಂದ್ರ ಮೋದಿ ಖ್ಯಾತಿ!

ಈ ರಾಜ್ಯಕ್ಕೆ ದೇವರಾಜ ಅರಸು ಅವರು ಕೊಟ್ಟಿರುವ ಕೊಡುಗೆಗಳು, ಕಾರ್ಯಕ್ರಮ, ಭೂಸುಧಾರಣೆ ಕಾನೂನು. ಬಡವರಿಗಾಗಿ ಕಾರ್ಯಕ್ರಮ ರೂಪಿಸಿದ್ದರೆ ಅದು ಕಾಂಗ್ರೆಸ್ ಸಾಧ್ಯ. ಕಳೆದ ಎರಡು ವರ್ಷಗಳಿಂದ ಬಿಜೆಪಿ ಸರ್ಕಾರ ಯಾವುದಾದರೂ ಒಂದು ಕಾರ್ಯಕ್ರಮ ಕೊಟ್ಟಿದ್ದೆಯಾ ಹೇಳಲಿ. ಬಿಜೆಪಿ ಸರ್ಕಾರ ಜನರಿಗೆ ಕೊಟ್ಟಿದ್ದು ಏನೆಂದರೇ ಬೂದಿ. ನರಕ ಸೃಷ್ಟಿಸಿರುವುದೇ ಅವರ ಸಾಧನೆ. ಅವರ ಕೈಯಲ್ಲಿ ಆಕ್ಸಿಜನ್, ಔಷಧಿ, ಹಾಸಿಗೆ ವ್ಯವಸ್ಥೆ ಕೊಡಲು ಆಗಲಿಲ್ಲ. ಈ ಸರ್ಕಾರ ಕಿತ್ತೊಗೆಯುವಂತೆ ಮಾಡೋಣ.

"ಇತ್ತೀಚಿನ ಸಮೀಕ್ಷೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಜನಪ್ರೀಯತೆ ಶೇ. 66ರಿಂದ ಶೇ. 24ಕ್ಕೆ ಕುಸಿದಿದೆ. ಇದು ನಿಮ್ಮ ಮನೆ ಬಾಗಿಲಿಗೆ ಬಂದಿರುವ ಅವಕಾಶ. ಒಂದು ಕಡೆ ಯುವಕರು, ವಿದ್ಯಾರ್ಥಿಗಳು, ಮಹಿಳಾ ಕಾಂಗ್ರೆಸ್, ಮತ್ತೊಂದು ಕಡೆ ಒಬಿಸಿ, ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತ ಘಟಕಗಳು. ನೀವು ಪ್ರತಿ ಪಂಚಾಯ್ತಿ ಹಾಗೂ ವಾರ್ಡ್ ಮಟ್ಟದಲ್ಲಿ ಸಮಿತಿ ಮಾಡಿ ಅಲ್ಲಿನವರಿಗೆ ಅಧಿಕಾರ ಹಂಚಿಕೆ ಮಾಡಬೇಕು. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರಿಗೂ ಒಂದು ಸ್ಥಾನಮಾನ ಇದೆ" ಎಂದು ಕಾಂಗ್ರೆಸ್ ಕಾರ್ಯರ್ತರಿಗೆ ಡಿಕೆಶಿ ಸಲಹೆ ನೀಡಿದರು.

Recommended Video

    MS ಧೋನಿ ಕಷ್ಟದಲ್ಲಿದ್ದಾಗ 2 ಲಕ್ಷ ರೂಪಾಯಿ ಕೊಟ್ರು ಅಂಬರೀಶ್ | Oneindia Kannada
    ಸಿಎಂ ಬೊಮ್ಮಾಯಿ ಕಾರ್ಯಕ್ಷಮತೆಗೆ ಚಪ್ಪಾಳೆ!

    ಸಿಎಂ ಬೊಮ್ಮಾಯಿ ಕಾರ್ಯಕ್ಷಮತೆಗೆ ಚಪ್ಪಾಳೆ!

    ಅಂಬೇಡ್ಕರ್ ಸಮುದಾಯ ಭವನದಲ್ಲಿ ಈ ಕಾರ್ಯಕ್ರಮ ಮಾಡಲು ನಾವು ನಿರ್ಧರಿಸಿದ್ದೆವು. ಆದರೆ ಅಧಿಕಾರಿಗಳು ಅನುಮತಿ ನೀಡಲಿಲ್ಲ. ಬಿಜೆಪಿ ಕೇಂದ್ರ ಮಂತ್ರಿಗಳು ಜನಾಶೀರ್ವಾದ ಹೆಸರಲ್ಲಿ ಎಲ್ಲ ಕಡೆ ಪ್ರವಾಸ ಮಾಡುತ್ತಿದ್ದಾರೆ. ಕೋವಿಡ್ ಪರಿಸ್ಥಿತಿಯಲ್ಲಿ ರಾಜಕೀಯ ಸಭೆ ಬೇಡ ಎಂದು ಹೇಳಿದ್ದಾರೆ. ಅದನ್ನು ನಾವು ಗೌರವಿಸುತ್ತೇವೆ. ಆದರೆ ಬಿಜೆಪಿಯವರಿಗೊಂದು ಹಾಗೂ ಬೇರೆ ಪಕ್ಷಗಳಿಗೊಂದು ಕಾನೂನು ಇದೆಯಾ? ಎಂದು ಡಿಕೆಶಿ ಪ್ರಶ್ನೆ ಮಾಡಿದ್ದಾರೆ.

    ಈಗ ಆಗಿರುವ ಸಮಾರಂಭಗಳಲ್ಲಿ ಯಾರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಮಂತ್ರಿಗಳು ಹೋದಾಗ ಬಂದೂಕಿನಲ್ಲಿ ಗುಂಡು ಹಾರಿಸಿ ಸ್ವಾಗತಿಸಿದ್ದು, ಆ ಕಾರ್ಯಕ್ರಮದಲ್ಲಿ ಎಲ್ಲ ಅಧಿಕಾರಿಗಳು ಇದ್ದರು. ಆದರೆ ಕೇವಲ ಕಾನ್ಸಟೇಬಲ್ ಮಾತ್ರ ಅಮಾನತು ಮಾಡಲಾಗಿದೆ. ಮುಖ್ಯಮಂತ್ರಿಗಳ ಈ ಪಾರದರ್ಶಕ ಆಡಳಿತಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಅವರ ಕಾರ್ಯಕ್ಷಮತೆಗೆ ಎಲ್ಲರೂ ಚಪ್ಪಾಳೆ ಹೊಡೆಯಬೇಕು ಎಂದು ಸಿಎಂ ಬೊಮ್ಮಾಯಿ ಕಾರ್ಯವೈಖರಿ ಟೀಕಸಿದ್ದಾರೆ.

    ಗೃಹ ಸಚಿವರಾಗಿದ್ದವರು ಮುಖ್ಯಮಂತ್ರಿ ಆದಾಗ ಏನಾದರೂ ಬದಲಾವಣೆ ಮಾಡುತ್ತಾರೆ ಎಂದು ನಿರೀಕ್ಷೆ ಮಾಡಿದ್ದೆ. ಆ ಜಿಲ್ಲೆಯ ಕಾಂಗ್ರೆಸ್ ನಾಯಕರಿಂದ ವರದಿ ಪಡೆಯುತ್ತೇನೆ. ಈ ವಿಚಾರವಾಗಿ ಪೊಲೀಸರ ವಿರುದ್ಧವೇ ಪ್ರತಿಭಟನೆ ಮಾಡಬೇಕು. ಇದೇ ರೀತಿ ಮುಂದುವರಿದರೆ ಅರಾಜಕತೆ ಸೃಷ್ಟಿ ಆಗುತ್ತದೆ. ಇದು ಬಿಜೆಪಿ ಆಡಳಿತದ ವೈಖರಿ. ಇಲ್ಲಿ ಬಿಜೆಪಿ ಸ್ವರ್ಗ ತೋರಿಸಲಿಲ್ಲ, ಬದಲಿಗೆ ನರಕ ತೋರಿಸಿದೆ ಎಂದು ಡಿಕೆಶಿ ಹೇಳಿದ್ದಾರೆ.

    More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+