ಅಂತರಗಂಗೆ ಚಾರಣಕ್ಕೆ ಬಂದು ಪೊಲೀಸರ ಅತಿಥಿಗಳಾದ್ರು!

ಕೋಲಾರ, ಡಿ.7: ಇಲ್ಲಿನ ಶತಶೃಂಗ ಪರ್ವತಶ್ರೇಣಿಯಲ್ಲಿರುವ ಅಂತರಗಂಗೆ ಬೆಟ್ಟ ಹತ್ತಲು ಬೆಂಗಳೂರಿನಿಂದ ಬಂದಿದ್ದ ಖಾಸಗಿ ಕಂಪನಿಯೊಂದರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಕೋಲಾರಕ್ಕೆಸ್ವಂತ ವಾಹನಗಳ ಮೂಲಕ ಬಂದಿದ್ದರು, ಎಲ್ಲರೂ ಸ್ನೇಹಿತರಾಗಿದ್ದು, ಟ್ರೆಕ್ಕಿಂಗ್ ನಿರ್ಬಂಧ ಹೇರಿರುವ ವಿಷಯ ಗೊತ್ತಿರಲಿಲ್ಲ ಎಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನ ಖಾಸಗಿ ಕಂಪೆನಿಗಳ 30 ಉದ್ಯೋಗಿಗಳು ರಾತ್ರಿ ವೇಳೆ ಚಾರಣ ನಡೆಸಲು ಬಂದಿದ್ದರು. ಅಂತರಗಂಗೆ ಬೆಟ್ಟದ ಬಳಿ ಕಳೆದ ರಾತ್ರಿ ಒಂದು ಮಿನಿಬಸ್, 13 ಬೈಕ್‌ಗಳಲ್ಲಿ 30 ಜನರು ಬಂದಿದ್ದು, ಚಾರಣಕ್ಕೆ ಸಿದ್ದತೆ ನಡೆಸುತ್ತಿದ್ದರು. ಇದನ್ನು ಕಂಡ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದಾವಿಸಿದ ಪೊಲೀಸರು ಅನುಮತಿಯಿಲ್ಲದೆ ನಿಯಮ ಉಲ್ಲಂಘಿಸಿ ರಾತ್ರಿವೇಳೆ ಚಾರಣ ನಡೆಸಲು ಯತ್ನಿಸಿದ ಆರೋಪದ ಮೇಲೆ 30 ಜನರನ್ನು ಬಂಧಿಸಿದ್ದಾರೆ.[ಕಾಣೆಯಾದ ಟೆಕ್ಕಿ ಗೌರವ್ ಬಚಾವ್!]

ಬಂಧಿತರೆಲ್ಲರೂ ಒಬ್ಬರಿಗೊಬ್ಬರು ಪರಿಚಿತರಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿ, ಸಾಫ್ಟ್ ವೇರ್ ಸಂಸ್ಥೆಗಳ ಉದ್ಯೋಗಸ್ಥರಾಗಿದ್ದಾರೆ. ಆರೋಪಿಗಳ ಮೇಲೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ.

Kolar Police detained Trekkers near Antaragange

ಟ್ರೆಕ್ಕಿಂಗ್ ನಿರ್ಬಂಧ ಏಕೆ? : ಶತಶೃಂಗ ಪರ್ವತಶ್ರೇಣಿಯು ರಕ್ಷಿತ ಅರಣ್ಯ ಪ್ರದೇಶವಾಗಿದ್ದು, ಚಿರತೆ ಮತ್ತಿತರ ಕಾಡುಪ್ರಾಣಿಗಳು ಇವೆ. ಹಾಗಾಗಿ ಇಲ್ಲಿ ರಾತ್ರಿ ವೇಳೆ ಚಾರಣ ನಿಷೇಧಿಸಲಾಗಿದೆ. ಹಗಲು ವೇಳೆ ಚಾರಣ ನಡೆಸಲು ಹಾಗೂ ಮತ್ತಿತರ ಕಾರ್ಯಚಟುವಟಿಕೆ ನಡೆಸಲು ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು. [ನಾಪತ್ತೆಯಾಗಿದ್ದ 14 ಟೆಕ್ಕಿಗಳು ಪತ್ತೆ]

ಬೆಟ್ಟದ ಮೇಲೆ ಇತಿಹಾಸ ಪ್ರಸಿದ್ಧ ಕಾಶಿ ವಿಶ್ವನಾಥ ದೇಗುಲ ಕೂಡಾ ಇದೆ. ಸುಮಾರು 500ಕ್ಕೂ ಅಧಿಕ ಮೆಟ್ಟಿಲುಗಳನ್ನೇರಿ ಕೂಡಾ ದೇಗುಲ ತಲುಪಬಹುದು. ಶಿಲಾವೃತ ಪರ್ವತ ಶ್ರೇಣಿಯಲ್ಲಿ ಚಾರಣ ಮಾಡಲು ಪೂರ್ವಾನುಮತಿ ಅತ್ಯಗತ್ಯ.

ಅನುಮತಿ ಪಡೆದಿಲ್ಲ: ವಾರಾಂತ್ಯವಾದ ಶನಿವಾರ ಮತ್ತು ಭಾನುವಾರ ಮೋಜಿನ ಪ್ರವಾಸಕ್ಕೆ ಬಂದಂತೆ ಕಂಡು ಬಂದಿದೆ. ಚಾರಣಕ್ಕೆ ಯುವತಿಯರನ್ನು ಕರೆದೊಯ್ಯುವವರು ಅನುಮತಿ ಪಡೆದುಕೊಂಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆ ಎಂಟು ಜನ ಇಂಜಿನಿಯರ್‌ಗಳು ಅನುಮತಿ ಪಡೆಯದೇ, ಯಾವುದೇ ಮಾಹಿತಿ ನೀಡದೆ ಅಂತರಗಂಗೆ ಬೆಟ್ಟದಲ್ಲಿ ಚಾರಣಕ್ಕೆ ತೆರಳಿ ದಾರಿತಪ್ಪಿ ಕಳೆದು ಹೋಗಿದ್ದರು. ನಂತರ ಸ್ಥಳೀಯ ನೆರವಿನಿಂದ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ್ದರು. ಪೊಲೀಸರು ಎಲ್ಲರ ರಕ್ಷಣೆ ಮಾಡಿ ಕರೆ ತಂದಿದ್ದರು. ಈ ಘಟನೆ ಬಳಿಕ ಈ ಭಾಗದಲ್ಲಿ ಚಾರಣಕ್ಕೆ ನಿರ್ಬಂಧ ಹೇರಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+