Kodi Mutt Swamiji: ಸ್ಫೋಟಕ ಭವಿಷ್ಯ ನುಡಿದ ಕೋಡಿ ಶ್ರೀ; ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ?
ಧಾರವಾಡ, ಸೆಪ್ಟೆಂಬರ್ 26: ಮುಡಾ ಸೈಟ್ ಹಗರಣ ಹೆಜ್ಜೆ ಹೆಜ್ಜೆಗೂ ಸಿದ್ದರಾಮಯ್ಯಗೆ ಸಂಕಷ್ಟವನ್ನ ತಂದೊಡ್ಡುತ್ತಿದೆ. ಪತ್ನಿ ಹೆಸರಿಗೆ ಹಂಚಿಕೆ ಆಗಿರುವ 14 ಸೈಟ್ಗಳ ಅಕ್ರಮದ ಕೇಸ್, ಹತ್ತಾರು ರೀತಿಯಲ್ಲಿ ಸಿದ್ದರಾಮಯ್ಯಗೆ ಬಿಸಿ ತಟ್ಟಿದ್ದು, ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಾಗಲು ಕೌಂಟ್ಡೌನ್ ಶುರುವಾಗಿದೆ. ಈ ಬೆನ್ನಲ್ಲೇ ಕೋಡಿಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಸ್ಪೋಟಕ ಭವಿಷ್ಯವನ್ನ ನೀಡಿದ್ದಾರೆ.
ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯಯನ್ನು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಿದ್ದರಾಮಯ್ಯ ಅಭಿಮಾನಿಗಳು ತಾಳೆ ಹಾಕುತ್ತಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಆಗುತ್ತಿರುವ ಬದಲಾವಣೆಗಳು ಹಾಗೂ ಸಿಎಂ ಸಿದ್ದರಾಮಯ್ಯ ಅವರ ಮೇಲೆ ರಾಜೀನಾಮೆಯ ಒತ್ತಡ ಹೆಚ್ಚಾಗುತ್ತಿರುವ ಕುರಿತು ಭವಿಷ್ಯ ನುಡಿದಿರುವ ಕೋಡಿ ಶ್ರೀಗಳು ಸ್ಪೋಟಕ ಭವಿಷ್ಯವನ್ನ ನುಡಿದಿದ್ದಾರೆ.

ಧಾರವಾಡ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಅಭಿಮನ್ಯುವಿನ ಬಿಲ್ಲಿನ ದಾರವನ್ನು ಮೋಸದಿಂದ ಕರ್ಣನ ಕೈಯಿಂದ ದಾರ ಕಟ್ ಮಾಡಿಸುತ್ತಾರೆ ಅಂತಾ ಹೇಳಿದ್ದೆ. ಮಹಾಭಾರತದಲ್ಲಿ ಕೃಷ್ಣನಿದ್ದ, ಭೀಮ ಗೆದ್ದ. ಇಲ್ಲಿ ಕೃಷ್ಣ ಇಲ್ಲ ದುರ್ಯೋಧನ ಗೆದ್ದ. ಅಭಿಮನ್ಯವಿನ ಹೆಂಡತಿ ರಣರಂಗ ಪ್ರವೇಶಿಸುತ್ತಾಳೆ ಎಂದಿದ್ದೆ ಈಗ ಏನಾಯ್ತು? ಬಿಲ್ಲಿನ ದಾರ ಕಟ್ ಮಾಡಿಸಿದರು. ಸಿದ್ದರಾಮಯ್ಯ ಜೀವನದಲ್ಲಿ ಎಂದಿಗೂ ಹೆಂಡತಿ ಹೊರಗೆ ಬಂದಿಲ್ಲ. ಪಾವಿತ್ರ್ಯತೆ ಇರುವ ಹೆಣ್ಣು ಮಗಳು. ಈಗ ಎಲ್ಲ ಕಡೆ ಅವರ ಹೆಸರು ಬಂತು ಎಂದಿದ್ದಾರೆ.
ಆಂಧ್ರಪ್ರದೇಶದ ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬಿರೋ ಆರೋಪ ವಿಚಾರವಾಗಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಪ್ರತಿಕ್ರಿಯಿಸಿದ್ದು, ತಿರುಪತಿಯಲ್ಲಿ ಕೃಷ್ಣ-ವೆಂಕಟೇಶ್ವರ ಇದ್ದ. ಈಗ ಸ್ಥಳ ಸ್ವಚ್ಛತೆ ಮಾಡುತ್ತಿದ್ದಾರೆ. ಸ್ಥಳ ಸ್ವಚ್ಛತೆ ಮಾಡುವುದು ಧರ್ಮಶಾಸ್ತ್ರ, ಆದರೆ ತಿಂದವರ ಹೊಟ್ಟೆ ಏನು ಮಾಡುವವರು ಈಗ? ನಾಲ್ಕು ವರ್ಷ ಲಡ್ಡು ತಿಂದು ಬಿಟ್ಟಿದಾರಲ್ಲ? ಅದರ ಬಗ್ಗೆ ಸರ್ಕಾರವೇ ಹೇಳಬೇಕು. ಎಲ್ಲ ಕಡೆ ಅನೈತಿಕತೆ ಹೆಚ್ಚಾಗುತ್ತಿದೆ. ಶ್ರೀಗಳ ಉಪಟಳ ಹೆಚ್ಚಾಗುತ್ತದೆ ಅಂತಾ ಹೇಳಿದ್ದೆ, ಈಗ ಅದೇ ನಡೆಯುತ್ತಿದೆ ಎಂದಿದ್ದಾರೆ.












Click it and Unblock the Notifications