Kodi Mutt Seer Prediction: 2026ರ ಹೊಸ ವರ್ಷದ ಬಗ್ಗೆ ಕೋಡಿಮಠ ಶ್ರೀಗಳ ಭವಿಷ್ಯವಾಣಿ
Kodi Mutt Seer Prediction: ಕೋಡಿಮಠ ಶ್ರೀಗಳು ರಾಜ್ಯ, ರಾಷ್ಟ್ರ ರಾಜಕೀಯ, ಸಮಾಜದಲ್ಲಿನ ಹಾಗೂ ಹೋಗುಗಳ ಬಗ್ಗೆ ಭವಿಷ್ಯ ನುಡಿಯುತ್ತಲಿರುತ್ತಾರೆ. ಇವುಗಳಲ್ಲಿ ಹಲವು ನಿಜ ಕೂಡ ಆಗಿವೆ ಹಾಗೂ ಆಗುತ್ತವೆ ಎನ್ನುವ ನಂಬಿಕೆ ಭಕ್ತಗಣದ್ದಾಗಿದೆ. ಇದೀಗ 2026ರ ಹೊಸ ವರ್ಷದ ಬಗ್ಗೆ ಸ್ಫೋಟಕ ಭವಿಷ್ಯವಾಣಿಯನ್ನು ಹೇಳಿದ್ದಾರೆ. ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ನುಡಿಯುವ ಭವಿಷ್ಯಗಳು ನಿಜವಾಗುತ್ತವೆ ಎನ್ನುವ ನಂಬಿಕೆ ಭಕ್ತರಾದ್ದಾಗಿದೆ. ಆದ್ದರಿಂದ ಅವರ ಹೇಳಿಕೆಗಳಿಗಾಗಿಯೇ ಕಾದು ಕುಳಿತಿರುತ್ತಾರೆ. ಅದರಲ್ಲೂ ಇದೇ ವಿಚಾರಕ್ಕೆ ರಾಜಕೀಯ ನಾಯಕರು ಕೂಡ ಇವರನ್ನು ಆಗಾಗ ಭೇಟಿ ಮಾಡುತ್ತಲಿರುತ್ತಾರೆ. ಇದೀಗ ಮುಂಬರುವ ವರ್ಷದ ಬಗ್ಗೆ ಅಚ್ಚರಿಕೆ ಭವಿಷ್ಯ ನುಡಿದಿದ್ದಾರೆ.

ಈ ಹಿಂದೆ ಹಲವು ಗಂಡಾಂತರಗಳ ಬಗ್ಗೆ ಭವಿಷ್ಯಗಳನ್ನು ನುಡಿದಿದ್ದು, ಇವುಗಳಲ್ಲಿ ಹಲವು ನಿಜವಾಗಿರುವ ಉದಾಹರಣೆಗಳಿವೆ. ಇವರು ಧಾರ್ಮಿಕ ಪ್ರವಚನಗಳನ್ನು ನೀಡುವುದರ ಜೊತೆಗೆ, ರಾಜಕೀಯ, ಸಾಮಾಜದಲ್ಲಿ ನಡೆಯುವ ಘಟನೆಗಳ ಬಗ್ಗೆ ಇವರು ಭವಿಷ್ಯ ನುಡಿಯುತ್ತಾರೆ. ಹೆಚ್ಚಾಗಿ ರಾಜಕೀಯದಲ್ಲಿನ ಬದಲಾವಣೆ ಬಗ್ಗೆ ಭವಿಷ್ಯ ನುಡಿಯುವ ಶ್ರೀಗಳು ಇದೀಗ 2026ರ ಹೊಸ ವರ್ಷ ಸಮೀಪಿಸುತ್ತಿದ್ದು, ಈ ಬಗ್ಗೆ ಭವಿಷ್ಯ ನುಡಿದಿದ್ದಾರೆ.
2026ರ ಹೊಸ ವರ್ಷದ ಬಗ್ಗೆ ಭವಿಷ್ಯ: ಬೆಳಗಾವಿಯಲ್ಲಿ ಮಾತಾಡಿದ ಅವರು, ಜ್ಯೋತಿಷ್ಯ ಭವಿಷ್ಯದಲ್ಲಿ ಒಂದು ಸಂಕ್ರಾಂತಿ ಫಲ. ಮತ್ತೊಂದು ಯಗಾದಿ ಫಲ ಅಂತಾ ಇರುತ್ತದೆ ಎಂದು ಹೇಳಿದ್ದಾರೆ. ಸಂಕ್ರಾಂತಿ ಫಲದಲ್ಲಿ ಸೂರ್ಯ ಉತ್ತರಾಯಣ ಕಡೆ ಚಲಿಸುತ್ತಾನೆ. ಇದು ವಿಶೇಷವಾಗಿ ರಾಜರು, ಮಹಾರಾಜರು ವ್ಯಾಪಾರಸ್ಥರಿಗೆ ಹಾಗೂ ಉದ್ಯೋಗಿಗಳಿಗೆ ಬರುತ್ತದೆ. 14ರ ನಂತರ ಸಂಕ್ರಾಂತಿ ಕಳೆದ ಮೇಲೆ ಅಂದರೆ, ವರ್ಷದ ಭವಿಷ್ಯವನ್ನ ನಿಖರವಾಗಿ ಹೇಳಬಹುದು. ಜೊತೆಗೆ 2025ಕ್ಕಿಂತ 2026ರಲ್ಲಿ ಕಷ್ಟಗಳು, ಸವಾಲುಗಳು ಹೆಚ್ಚಿವೆ ಎಂದು ಭವಿಷ್ಯ ನುಡಿದಿದ್ದಾರೆ.
ಮಳೆ, ಬೆಳೆ ಬಗ್ಗೆ ಭವಿಷ್ಯ: ಯುಗಾದಿ ಕಳೆದ ನಂತರ ಮಳೆ, ಬೆಳೆಗಳು ರೈತರು, ಭೂಮಿ ಬಗ್ಗೆ ಹೇಳಬಹುದು. ಈಗ ಎಲ್ಲಾ ಅತಂತ್ರವಾಗಿದೆ. ಆದ್ದರಿಂದ ಈಗ ಭವಿಷ್ಯ ಹೇಳುವುದು ತುಂಬಾ ಕಷ್ಟ. 2026ರ ಹೊಸ ವರ್ಷ ಜಗತ್ತಿನ ಕಷ್ಟಗಳನ್ನು ಹೊತ್ತು ತರಲಿದೆ ತರಲಿದೆ. ಮುಂದಿನ ವರ್ಷ ಭಾರೀ ಪ್ರಮಾಣದ ಮಳೆ ಹಾಗೂ ಪ್ರವಾಹ ಆಗಲಿದ್ದು, ಇದು ಅಪತ್ತಿನ ಸೃಷ್ಟಿಗೆ ಕಾರಣ ಆಗಲಿದೆ. ಜಗತ್ತೇ ಮುಳುಗಡೆಯಾಗುವ ಲಕ್ಷಣ ಗೋಚರವಾಗುತ್ತಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇನ್ನೂ ಇದೇ ಯಗಾದಿ ಬಳಿಕ ಈ ಬಗ್ಗೆ ನಿಖರವಾದ, ವಿಸ್ತೃತವಾದ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.
ಅಧಿಕಾರದ ಬದಲಾವಣೆ ಕುರಿತು ಭವಿಷ್ಯ: ರಾಜ್ಯ ರಾಜಕೀಯದಲ್ಲಿ ಅಧಿಕಾರ ಬದಲಾವಣೆ ಕುರಿತು ಮಾತನಾಡಿ, ಹಾಲುಮತ ಸಮಾಜದವರಿಂದ ಅಧಿಕಾರ ಕಿತ್ತುಕೊಳ್ಳುವುದು ಅಷ್ಟು ಸುಲಭವದ ಮಾತಲ್ಲ. ಅದು ತುಂಬಾ ಕಷ್ಟ. ಸಿದ್ದಾರಾಮಯ್ಯ ಅವರು ತಾನಾಗಿಯೇ ಅಧಿಕಾರದಿಂದ ಕೆಳಗೆ ಇಳಿದರೆ ಮಾತ್ರ ಬೇರೆಯರಿಗೆ ಅವಕಾಶ ಸಿಗಬಹುದು ಎಂದು ಕೋಡಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಈ ಮೂಲಕ ಸಿದ್ದರಾಮಯ್ಯ ತಾನೇ ಅಧಿಕಾರ ಬಿಟ್ಟು ಕೊಡುವವರೆಗೂ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಸಿಗುವುದಿಲ್ಲ ಎಂದು ಪರೋಕ್ಷವಾಗಿಯೇ ಹೇಳಿಕೆ ನೀಡಿದ್ದಾರೆ. ಹಾಗಾದ್ರೆ, ಮುಂದಿನ ದಿನಗಳಲ್ಲಿ ಈ ಬಗ್ಗೆ ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತಿದೆಯೋ ಎಂದು ಕಾದುನೋಡಬೇಕಿದೆ. ಹೀಗೆ ಕೋಡಿಮಠದ ಶ್ರೀಗಳು ಭಯಾನಕ ಭವಿಷ್ಯಗಳನ್ನು ನೊಡಿಯುತ್ತಲೇ ಬಂದಿದ್ದಾರೆ. ಇವರು ನುಡಿಯುವ ಭವಿಷ್ಯಣಿಗಾಗಿಯೇ ಕಾಯುವ ಭಕ್ತಗಣ ಇದೆ.












Click it and Unblock the Notifications