ಮನೆಗೆ ಬಂದ ಅಪರೂಪದ ಅತಿಥಿ ಬುಲ್ ಬುಲ್ ಹಕ್ಕಿ!

By: ಬಿ.ಎಂ.ಲವಕುಮಾರ್
Subscribe to Oneindia Kannada

ಕೊಡಗು, ಮೇ 26 : ಸಾಮಾನ್ಯವಾಗಿ ಮನೆಗಳಲ್ಲಿ ಗುಬ್ಬಿ, ಪಾರಿವಾಳ ಗೂಡುಕಟ್ಟಿ ಮರಿ ಮಾಡುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಆದರೆ, ಬುಲ್‍ ಬುಲ್ ಪಕ್ಷಿಯೊಂದು ಮನೆಯೊಳಗೆ ಗೂಡುಕಟ್ಟಿ ಮೊಟ್ಟೆಯಿಡುವುದನ್ನು ನೋಡಿದವರು ವಿರಳ.

ಮನುಷ್ಯನನ್ನು ಕಂಡ ತಕ್ಷಣ ಹಾರಿಹೋಗುವ ಈ ಹಕ್ಕಿಗಳು ಮನೆಯೊಳಗೆ ಗೂಡು ಕಟ್ಟಿ ಮೊಟ್ಟೆಯಿಡುತ್ತಿರುವುದು ನಿಜಕ್ಕೂ ಅಚ್ಚರಿ ತಂದಿದೆ. ಇಷ್ಟಕ್ಕೂ ಬುಲ್‍ ಬುಲ್ ಹಕ್ಕಿ ಗೂಡುಕಟ್ಟಿರುವುದು ಕೊಡಗಿನ ಕುಶಾಲನಗರ ಬಳಿಯ ಬೊಳ್ಳೂರು ಗ್ರಾಮದ ನಿವಾಸಿ ನಿವೃತ್ತ ಸೈನಿಕ ಕೋಡಿ ಮಾಚಯ್ಯ ಅವರ ಮನೆಯಲ್ಲಿ. [ಬುಲ್ ಬುಲ್ ಹಕ್ಕಿ ಬಗ್ಗೆ ಓದಿ]

bulbul bird

ಬುಲ್‍ ಬುಲ್ ಹಕ್ಕಿ ಮನೆಯಲ್ಲಿ ಗೂಡು ಕಟ್ಟಿದೆ ಎಂಬುದನ್ನು ಕೇಳಿಯೇ ಜನರು ಅದನ್ನು ನೋಡಲು ಆಗಮಿಸುತ್ತಿದ್ದಾರೆ. ಆದರೆ, ಇದ್ಯಾವುದರ ಪರಿವೇ ಇಲ್ಲದಂತೆ ಹಕ್ಕಿ ಮಾತ್ರ ಗೂಡಿನಲ್ಲಿ ಕೂತು ಮೊಟ್ಟೆಗೆ ಕಾವುಕೊಡುತ್ತಿದೆ. [ಹೊಸ ವರ್ಷದ ಸಂಭ್ರಮದಲ್ಲಿ ಪುರ್ರನೇ ಬಂದ ಅನಿರೀಕ್ಷಿತ ಅತಿಥಿ!]

ಕೊಡಗಿನಲ್ಲಿ ಬುಲ್‍ ಬುಲ್ ಹಕ್ಕಿಗಳು ಹೆಚ್ಚಾಗಿ ವಾಸಿಸುತ್ತವೆ. ಇಲ್ಲಿನವರು ಇದನ್ನು 'ಕೊಟ್ರುಮುಡ್ಚ' ಎಂದು ಕರೆಯುತ್ತಾರೆ. ಬೇಸಿಗೆಯ ಸಮಯದಲ್ಲಿ ಗದ್ದೆಗಳ ಏರಿ ಸಂದಿಯ ಪೊದೆಯಲ್ಲಿ, ಕುರುಚಲು ಕಾಡಿನಲ್ಲಿ, ಪುಟ್ಟ ಗಿಡಗಳಲ್ಲಿ ಈ ಹಕ್ಕಿಗಳು ಗೂಡುಕಟ್ಟುತ್ತವೆ. [ಗುಬ್ಬಚ್ಚಿ : ಬದುಕಿದೆಯಾ ಬಡಜೀವವೆ]

ಈಗಲೂ ಕೊಡಗಿಗೊಂದು ಸುತ್ತು ಹೊಡೆದರೆ ಮೊಟ್ಟೆಯಿಟ್ಟು ಮರಿಮಾಡಿ, ಮರಿಯನ್ನು ಪೋಷಿಸಿ ಹಾರಿಸಿದ ಖಾಲಿ ಗೂಡುಗಳು ಅಲ್ಲಲ್ಲಿ ಕಾಣಸಿಗುತ್ತವೆ. ಸಾಮಾನ್ಯವಾಗಿ ಗೂಡುಕಟ್ಟಲು ಪೊದೆಯಂತಹ ಸ್ಥಳವನ್ನೇ ಆಯ್ಕೆ ಮಾಡುವ ಈ ಹಕ್ಕಿಗಳು ಗೂಡು ಕಟ್ಟಲು ಮನೆಯನ್ನು ಆಯ್ಕೆ ಮಾಡಿರುವುದು ಮಾತ್ರ ಅಚ್ಚರಿ ಮೂಡಿಸಿದೆ. [ಗುಬ್ಬಚ್ಚಿಯೇ ಇಲ್ಲದ ಬೆಂಗಳೂರಿನಂತಾದರೆ ಬದುಕು]

bird

ಮಾಚಯ್ಯ ಅವರು ಮನೆಯ ಕೊಠಡಿಯ ಕಿಟಕಿಯನ್ನು ಸದಾ ತೆಗೆದಿರುತ್ತಿದ್ದರು. ಕಿಟಕಿ ಮೂಲಕ ಒಳ ನುಗ್ಗಿದ ಹಕ್ಕಿಗೆ ಕೊಠಡಿಯ ಟ್ಯೂಬ್‍ಲೈಟ್ ಇರುವ ಜಾಗವೇ ಸೂಕ್ತ ಎಂದು ಕೊಂಡು ಅಲ್ಲಿ ಗೂಡು ಕಟ್ಟಿಲು ಆರಂಭಿಸಿದೆ. ಹಕ್ಕಿ ಹೊರಗಿನಿಂದ ಕಸ ಕಡ್ಡಿ ತಂದು ಗೂಡು ಕಟ್ಟವುದನ್ನು ನೋಡಿ ಮನೆಯವರಿಗೆ ಅಚ್ಚರಿಯಾಗಿದೆ.

ಅವರು ಸಹ ಹಕ್ಕಿಯ ಆಸೆಗೆ ತಣ್ಣೀರು ಎರಚುವ ಯತ್ನ ಮಾಡದೆ ಅವಕಾಶ ಮಾಡಿಕೊಟ್ಟಿದ್ದಾರೆ. ಟ್ಯೂಬ್ ಲೈಟ್ ಉರಿಸಿದರೆ ಹಕ್ಕಿಯ ಏಕಾನತೆಗೆ ತೊಂದರೆಯಾಗಬಹುದೆಂದು ಅದನ್ನು ಆಫ್ ಮಾಡಿರುತ್ತಾರೆ. ಕೊಠಡಿಯಲ್ಲಿನ ಫ್ಯಾನ್ ಕೂಡ ಹಾಕುತ್ತಿಲ್ಲ. ಕಿಟಿಕಿ ಬಾಗಿಲನ್ನು ಸದಾ ತೆರೆದಿಟ್ಟಿದ್ದಾರೆ. ಇದರಿಂದಾಗಿ ಹಕ್ಕಿ ಯಾವುದೇ ಭಯವಿಲ್ಲದೆ ನಿರ್ಭಯವಾಗಿ ಗೂಡುಕಟ್ಟಿ ಮೊಟ್ಟೆಯಿಟ್ಟು ಮರಿ ಮಾಡಲು ಮುಂದಾಗಿದೆ.

ಬುಲ್‌ಬುಲ್ ಹಕ್ಕಿಗೂ ಈಗ ಮನೆಯವರ ಪರಿಚಯವಾಗಿದೆ. ಆದ್ದರಿಂದ, ಅದು ಜನರನ್ನು ನೋಡಿದ ತಕ್ಷಣ ಹಾರಿ ಹೋಗುವುದಿಲ್ಲ. ಮನೆಗೆ ಬಂದ ಅಪರೂಪದ ಅತಿಥಿಯನ್ನು ಜತನದಿಂದ ನೋಡುವ ಕಾರ್ಯವನ್ನು ಮಾಚಯ್ಯ ಅವರ ಮನೆಯವರು ಚಾಚೂ ತಪ್ಪದೆ ಮಾಡುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
An unexpected guest at Koadu Kodi Machaiah house. Bulbul bird was built nest at house. Bulbuls a medium-sized songbirds.
Please Wait while comments are loading...