3 ರಾಶಿಯವರಿಗೆ ವರದಾನವಾಗಲಿದೆ ಶನಿ ಜಯಂತಿ : ಕಷ್ಟ ಕಳೆದು ಹೆಚ್ಚಾಗುವುದು ಸುಖ ಸಮೃದ್ಧಿ
ಹಿಂದೂ ಧರ್ಮದ ಪ್ರಕಾರ ಜ್ಯೇಷ್ಠ ಮಾಸದ ಅಮಾವಾಸ್ಯೆಯ ದಿನಕ್ಕೆ ಬಹಳ ಮಹತ್ವವಿದೆ. ಈ ದಿನವನ್ನು ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಪೌರಣಿಕ ಹಿನ್ನೆಲೆಯನ್ನು ನೋಡುವುದಾದರೆ ಸೂರ್ಯ ಪುತ್ರ ಶನಿ ಮಹಾರಾಜ ಇದೇ ದಿನದಂದು ಜನಿಸಿರುವುದು. ಇಧೆ ಕಾರಣಕ್ಕೆ ಪ್ರತಿ ವರ್ಷ ಈ ದಿನವನ್ನು ಶನಿ ಜಯಂತಿಯಾಗಿ ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ವರ್ಷದ ಶನಿ ಜಯಂತಿಯನ್ನು ಮೇ 16 ರಂದು ಶನಿ ಜಯಂತಿ ಬರುತ್ತದೆ. ಈ ವರ್ಷದ ಶನಿ ಜಯಂತಿ ಮೂರು ರಾಶಿಯಬರಿಗೆ ಅತ್ಯಂತ ಶುಭವಾಗಿರಲಿದೆ.
ಶನಿ ದೇವರನ್ನು ಕರ್ಮಫಲದಾತ ಎಂದೇ ಕರೆಯುತ್ತಾರೆ. ಅಂದರೆ ನಾವು ಮಾಡುವ ಕರ್ಮಕ್ಕೆ ಅನುಗುಣವಾಗಿ ಫಲವನ್ನು ಶನಿದೇವರು ನಮಗೆ ಕರುಣಿಸುತ್ತಾರೆ. ಶನಿ ದೇವರ ಆಶೀರ್ವಾದವು ಜೀವನದಲ್ಲಿ ಸ್ಥಿರತೆ, ಯಶಸ್ಸು ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಶನಿ ದೇವರ ವಕ್ರ ದೃಷ್ಟಿಯು ಜೀವನದಲ್ಲಿನ ನಿರಂತರ ಹೋರಾಟ, ಕೆಲಸಗಳಿಗೆ ಅಡೆತಡೆ, ಆರ್ಥಿಕ ಮತ್ತು ಮಾನಸಿಕ ಸಂಕಷ್ಟಗಳಿಗೆ ಕಾರಣವಾಗುತ್ತದೆ.

ಶನಿಯ ಕೃಪೆಯ ಫಲ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ಜಯಂತಿಯಿಂದ ಶನಿದೇವರು ಕೆಲವು ರಾಶಿಯವರ ಮೇಲೆ ಕೃಪಾ ದೃಷ್ಟಿ ಬೀರುತ್ತಾರೆಯಂತೆ. ಶನಿ ದೇವರ ಆಶೀರ್ವಾದದಿಂದ, ಈ ರಾಶಿಯವರ ಜೀವನದಲ್ಲಿ ಸಂಪತ್ತು, ಯಶಸ್ಸು ಮತ್ತು ವ್ಯವಹಾರದಲ್ಲಿ ಅಭಿವೃದ್ಧಿಯಾಗುವುದು.
ಮಕರ ರಾಶಿ:
ಮಕರ ರಾಶಿಯ ಅಧಿಪತಿ ಗ್ರಹ ಶನಿ.ಈ ವರ್ಷದ ಶನಿ ಜಯಂತಿಯಂದು, ಶನಿದೇವರ ಆಶೀರ್ವಾದದಿಂದ, ಆರ್ಥಿಕ ಸಮೃದ್ಧಿ ಮತ್ತು ವ್ಯವಹಾರದಲ್ಲಿ ಗಮನಾರ್ಹ ಅಭುವೃದ್ಧಿ ಒಲಿದು ಬರುವುದು. ಹೊಸ ಮನೆ ಅಥವಾ ವಾಹನವನ್ನು ಖರೀದಿಸುವ ಯೋಚನೆಯಿದ್ದರೆ ಈ ಸಮಯ ಅನುಕೂಲಕರವಾಗಿರುತ್ತದೆ. ವೃತ್ತಿಜೀವನವು ಸ್ಥಿರವಾಗಿರುತ್ತದೆ. ವ್ಯವಹಾರದಲ್ಲಿ ಗಮನಾರ್ಹ ಲಾಭವಾಗುವುದು.
ಕುಂಭ ರಾಶಿ:
ಕುಂಭ ರಾಶಿಯ ಅಧಿಪತಿಯೂ ಶನಿದೇವರೇ ಆಗಿರುವುದರಿಂದ ಈ ರಾಶಿಯವರ ಮೇಲೆ ವಿಶೇಷ ಆಶೀರ್ವಾದವಿರುತ್ತದೆ. ಇದು ನಿಮ್ಮ ಆತ್ಮವಿಶ್ವಾಸ ಮತ್ತು ಸಾಮಾಜಿಕ ಸ್ಥಾನಮಾನವನ್ನು ಹೆಚ್ಚಿಸುತ್ತದೆ. ಮದುವೆಗೆ ಇರುವ ಅಡೆತಡೆಗಳು ದೂರವಾಗುತ್ತವೆ. ಪ್ರಮುಖ ನಿರ್ಧಾರದ ತೆಗೆದುಕೊಲ್ಳುವ ಸಮಯ ಇದು. ನಿಮ್ಮ ನಿರ್ಧಾರದ ಬಗ್ಗೆ ನಿಮಗೊಂದು ಸ್ಪಷ್ಟತೆ ಸಿಗುವುದು.ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಸದೃಢವಾಗುವುದು.
ಮೀನ ರಾಶಿ:
ಶನಿ ಜಯಂತಿಯ ನಂತರದ ಅವಧಿಯು ಮೀನ ರಾಶಿಯವರಿಗೆ ಶುಭವಾಗಿರುತ್ತದೆ. ಶನಿ ದೇವರ ಆಶೀರ್ವಾದದಿಂದ, ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುವುದು. ಬಹಳ ಸಮಯದಿಂದ ಕಾಡುತ್ತಿದ್ದ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುವುದು. ನಿಂತು ಹೋಗಿದ್ದ ಕೆಲಸ ಕಾರ್ಯಗಳು ಮತ್ತೆ ಚುರುಕು ಪಡೆಯುವುದು.ಹೊಸ ವಾಹನ ಖರೀದಿ ಯೋಗವಿದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications