Dr Rajkumar ಚೇತನ್ ಅಹಿಂಸಾ ಪ್ರಶ್ನೆ ಕೇಳಿರುವುದು ತಪ್ಪಲ್ಲ, ಆದರೆ...: ದಿನೇಶ್ ಅಮಿನ್ ಮಟ್ಟು ವೈರಲ್ ಪೋಸ್ಟ್‌

Dr Rajkumar: ಡಾ.ರಾಜ್‌ಕುಮಾರ್ ಅವರ ಸಮಾಧಿ ನಿರ್ಮಾಣಕ್ಕೆ ಸರ್ಕಾರದಿಂದ 2.5 ಎಕರೆ ಜಾಗ ನೀಡಿರುವುದನ್ನು ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಅವರು ಪ್ರಶ್ನೆ ಮಾಡಿದ್ದರು. ಈ ವಿಚಾರವು ಭಾರೀ ವಿವಾದಕ್ಕೆ ಕಾರಣವಾಗಿದ್ದು, ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಮೊದಲು ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದ ಚೇತನ್ ಅಹಿಂಸಾ ಅವರು ಆ ಮೇಲೆ ಯೂಟರ್ನ್ ತೆಗೆದುಕೊಂಡಿದ್ದಾರೆ. ಚೇತನ್ ಅಹಿಂಸಾ ಪ್ರಶ್ನೆ ಕೇಳಿರುವುದು ತಪ್ಪಲ್ಲ, ಆದರೆ ಇದನ್ನು ಕೇವಲ ಡಾ.ರಾಜ್ ಕುಮಾರ್ ಅವರೊಬ್ಬರಿಗೆ ಮಾತ್ರ ಸೀಮಿತಗೊಳಿಸಿ ಪ್ರಶ್ನಿಸಿರುವುದು ಮತ್ತು ಜಮೀನನ್ನು ಯಾರು ಯಾರಿಗೆ ಕೊಟ್ಟಿದ್ದಾರೆ ಎನ್ನುವುದನ್ನು ವಿವರಿಸಿ ಹೇಳದೆ ಇದ್ದದ್ದು ತಪ್ಪು ಎಂದು ಹಿರಿಯ ಪತ್ರಕರ್ತರಾದ ದಿನೇಶ್ ಅಮಿನ್ ಮಟ್ಟು ಅವರು ಹೇಳಿದ್ದಾರೆ. ಅವರ ಫೇಸ್‌ಬುಕ್ ಬರಹ ಇಲ್ಲಿದೆ.

ಮೊದಲನೆಯದಾಗಿ ಸತ್ಯ ಗೊತ್ತಿಲ್ಲದವರು ಸ್ಮಾರಕಕ್ಕೆ ಜಮೀನನ್ನು ಡಾ.ರಾಜ್ ಕುಮಾರ್ ಅವರಿಗೆ ಮಾತ್ರ ಕೊಟ್ಟಿರಬಹುದು ಎಂದು ತಿಳಿದುಕೊಳ್ಳುವ ಸಾಧ್ಯತೆ ಇದೆ. ಅದು ಸತ್ಯ ಅಲ್ಲ, ಕುವೆಂಪು ಅವರಿಂದ ಹಿಡಿದು ದಾರಾ ಬೇಂದ್ರೆ ವರೆಗೆ ಬಹಳಷ್ಟು ಸಾಹಿತಿಗಳ ಸ್ಮಾರಕಕ್ಕಾಗಿ ದೊಡ್ಡ ಮತ್ತು ಸಣ್ಣ ವಿಸ್ತೀರ್ಣದ ಜಮೀನನ್ನು ರಾಜ್ಯಸರ್ಕಾರ ಕೊಟ್ಟಿದೆ.

Dr Rajkumar

ಎರಡನೆಯದಾಗಿ, ಡಾ. ರಾಜ್‌ಕುಮಾರ್ ಸ್ಮಾರಕ, ರಾಜ್ಯ ಸರ್ಕಾರದ ವಾರ್ತಾ ಇಲಾಖೆಯ ಅಧೀನದಲ್ಲಿರುವ ಕಂಠೀರವ ಸ್ಟುಡಿಯೋಗೆ ಸೇರಿದ್ದು, ಅದು ರಾಜ್ ಕುಮಾರ್ ಕುಟುಂಬದ ಆಸ್ತಿ ಅಲ್ಲ. ಹೇಗೆ ಕುವೆಂಪು ಅವರ ನೆನಪಿಗಾಗಿ ಇರುವ ಕವಿಶೈಲ, ರಾಜ್ಯ ಅರಣ್ಯ ಇಲಾಖೆಗೆ ಸೇರಿದ್ದೋ, ಬೇಂದ್ರೆ ಸ್ಮಾರಕ ಹೇಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೇರಿದ್ದೋ ಹಾಗೆಯೇ ರಾಜ್ ಸ್ಮಾರಕ ರಾಜ್ಯದ ವಾರ್ತಾ ಇಲಾಖೆಗೆ ಸೇರಿದ್ದು. ಈ ಜಮೀನು, ಅರಣ್ಯ ಯಾವುದೂ ಸಂಬಂಧಿತ ವ್ಯಕ್ತಿಗಳ ಕುಟುಂಬಕ್ಕೆ ಸೇರಿದ್ದಲ್ಲ, ಅದು ರಾಜ್ಯ ಸರ್ಕಾರಕ್ಕೆ ಸೇರಿದ್ದು.

Dr Rajkumar: ಬೆಂಗಳೂರಲ್ಲಿ ಡಾ.ರಾಜ್‌ಕುಮಾರ್ ಸಮಾಧಿಗೆ 2.5 ಎಕರೆ ಜಾಗ ಕೊಟ್ಟಿದ್ದು ಸರಿಯೇ - ಚೇತನ್ ಅಹಿಂಸಾ ಪ್ರಶ್ನೆ

ಸಾರ್ವಜನಿಕ ಹಿತಾಸಕ್ತಿಯ ರಕ್ಷಣೆಯ ಕಾಳಜಿಯನ್ನು ನಿಜವಾಗಿ ಚೇತನ್ ಹೊಂದಿದ್ದರೆ ರಾಜ್ಯದಲ್ಲಿರುವ ಜಾತಿ ಮಠಗಳಿಗೆ ರಾಜ್ಯ ಸರ್ಕಾರ ನೀಡುವ ಜಮೀನು ಬಗ್ಗೆ ಪ್ರಶ್ನೆ ಎತ್ತಬೇಕು. ಬಹಳಷ್ಟು ಜಾತಿ ಮಠಗಳು ಧಾರ್ಮಿಕ ಚಟುವಟಿಕೆಗಳಿಗೆ ತಮ್ಮನ್ನು ಸೀಮಿತಗೊಳಿಸಿಲ್ಲ. ರಾಜ್ಯ ಸರ್ಕಾರದಿಂದ ಹತ್ತಾರು ಎಕರೆ (ನೂರಾರು?) ಜಮೀನು ಪಡೆದು ಶಿಕ್ಷಣದ ವ್ಯಾಪಾರ ನಡೆಸುತ್ತಿಲ್ಲವೇ? ಪ್ರಶ್ನಿಸಬೇಕಾಗಿರುವುದು ಇದನ್ನು. ಇದನ್ನೆಲ್ಲ ವಿವರಿಸಿ ಸಂಪೂರ್ಣ ಮಾಹಿತಿಯೊಂದಿಗೆ ಯಾವುದಾದರೂ ಪತ್ರಿಕೆಯೋ, ಚಾನೆಲೋ ವರದಿಮಾಡಬೇಕಾಗಿತ್ತು. ಯಾರಾದರೂ ಮಾಡಿದ್ದಾರಾ? ನಿರೀಕ್ಷೆ ಅತಿಯಾಯಿತೇನೋ? ಚೇತನ್ ಅವರಾದರೂ ಈ ಬಗ್ಗೆ ಯೋಚಿಸಲಿ, ಅವರಿಗೆ ಇನ್ನೂ ಹೆಚ್ಚು ಪ್ರಚಾರ ಸಿಗುತ್ತೆ.

Dr Rajkumar: ನಟ ಚೇತನ್ ಅಹಿಂಸಾಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಶುರುವಾಯ್ತು ಹಿಂಸೆ - ಅಣ್ಣಾವ್ರ ವಿಷಯವೇ ಕಾರಣ
Dr Rajkumar: ನಟ ಚೇತನ್ ಅಹಿಂಸಾಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಶುರುವಾಯ್ತು ಹಿಂಸೆ - ಅಣ್ಣಾವ್ರ ವಿಷಯವೇ ಕಾರಣ

ಬರಹ: ದಿನೇಶ್ ಅಮಿನ್ ಮಟ್ಟು, ಹಿರಿಯ ಪತ್ರಕರ್ತರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+