Chetan Ahimsa: ಮೂರು ಬಾರಿ ಸೋತವರಿಗೆ ಯೋಗ್ಯತೆ ಇದೆಯೇ: ಚೇತನ್ ಅಹಿಂಸಾ ಮಾತಿಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು

Chetan Ahimsa: ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಅವರು ಒಂದು ವಿವಾದ ಮುಗಿಯುವ ಮುನ್ನವೇ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿರುವಂತಿದೆ ಎಂದು ಜನ ಅಭಿಪ್ರಾಯಪಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಡಾ ರಾಜ್ ಕುಮಾರ್ ಅವರ ಜನ್ಮದಿನದಂದೇ ನಟ ಚೇತನ್ ಅಹಿಂಸಾ ಅವರು ಪ್ರಸ್ತಾಪಿಸಿದ್ದ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿತ್ತು.

ಇದೀಗ ರಾಜಕೀಯ ವಾಕ್ಸಮರ ಪ್ರಾರಂಭವಾಗಿದೆ. ನಟ ಚೇತನ್ ಅಹಿಂಸಾ ಅವರು ಜೆಡಿಎಸ್ ಪಕ್ಷದ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಅವರ ಸೋಲಿನ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಅಲ್ಲದೆ ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರು ಕನ್ನಡಿಗರಿಗೆ ಮನವಿ ಮಾಡಿದ್ದ ವಿಚಾರದಲ್ಲೂ ವ್ಯಂಗ್ಯವಾಡಿದ್ದಾರೆ. ಈ ಎರಡೂ ವಿಚಾರದಿಂದ ನಟ ಚೇತನ್ ಅಹಿಂಸಾ ಹಾಗೂ ನಿಖಿಲ್ ಕುಮಾರಸ್ವಾಮಿ ಅವರ ನಡುವೆ ಟ್ವೀಟ್ ವಾರ್ ಶುರುವಾಗಿದೆ.

Chetan Ahimsa

ಪ್ರಜಾಪ್ರಭುತ್ವದಲ್ಲಿ ಯಾರು ಮಾತನಾಡಲು 'ಯೋಗ್ಯ'? ಮಾಜಿ ಪ್ರಧಾನಿಯ ಮಗ-2006ರಲ್ಲಿ ಅವಕಾಶವಾದಿ 'ಸ್ಮಾರಕ ಪಾಲಿಟಿಕ್ಸ್' ಶುರು ಮಾಡಿ ಕನ್ನಡ ಚಲನಚಿತ್ರರಂಗದ ಅಭಿಮಾನಿಗಳ ನಡುವೆ ಅದಕ್ಕೆ ಸಂಬಂಧಪಟ್ಟ 'ಫ್ಯಾನ್ ವಾರ್ಸ್' ಪ್ರೇರೇಪಿಸಿದವರಾ? ಅಥವಾ ಅವರ ಮಗ ಮೂರು ಬಾರಿ ಸೋತವರು ಸ್ವಜನಪಕ್ಷಪಾತ ಹೊರತುಪಡಿಸಿ ಮತ್ತೇನು ಸಾಧನೆ ಇಲ್ಲದವರಾ? ಪ್ರಜಾಪ್ರಭುತ್ವದಲ್ಲಿ ನಾವು ಎಲ್ಲರೂ ಮಾತನಾಡಲು ಯೋಗ್ಯರೇ. ಆದರೆ ಯಾರ ಮಾತಿಗೆ ನಿಜವಾದ ತೂಕ ಇದೆ ಅನ್ನುವುದನ್ನು ಜನರೇ ತೀರ್ಮಾನಿಸುತ್ತಾರೆ ಎಂದು ನಟ ಚೇತನ್ ಅಹಿಂಸಾ ಅವರು ಹೇಳಿದ್ದರು.

ಇದಕ್ಕೆ ನಿಖಿಲ್ ಕುಮಾರಸ್ವಾಮಿ ಅವರು, ರಾಜ್‌ಕುಮಾರ್ ಎಂದರೆ ಕೇವಲ ಒಬ್ಬ ನಟರಲ್ಲ, ಅವರು ಆರು ಕೋಟಿ ಕನ್ನಡಿಗರ ಭಾವನೆ. ಕೋಟಿ ಕನ್ನಡಿಗರ ಆರಾಧ್ಯ ದೈವ ಅಣ್ಣಾವ್ರ ಬಗ್ಗೆ ಹಗುರವಾಗಿ ಮಾತನಾಡುವುದು ನಿಮ್ಮ ಅಹಂಕಾರದ ಪರಮಾವಧಿ. ಗೋಕಾಕ್ ಚಳವಳಿಯ ಮೂಲಕ ಕನ್ನಡಕ್ಕೆ ಅಸ್ಮಿತೆ ತಂದುಕೊಟ್ಟ ಧೀಮಂತ ವ್ಯಕ್ತಿತ್ವದ ಬಗ್ಗೆ ಟೀಕಿಸುವ ಮೊದಲು ಇತಿಹಾಸ ತಿಳಿದುಕೊಳ್ಳಿ.

ಸಾರ್ವಜನಿಕ ಜೀವನದಲ್ಲಿ ಟೀಕೆಗಳು ಸಹಜ, ಆದರೆ ಅವುಗಳಿಗೆ ಒಂದು ಘನತೆ ಇರಬೇಕು. ನಮ್ಮ ಕುಟುಂಬದ ಮೇಲಿನ ವೈಯಕ್ತಿಕ ದಾಳಿ ಅಥವಾ ಸೋಲು-ಗೆಲುವಿನ ಮಾತುಗಳನ್ನು ನಾವು ಸದಾ ವಿನಮ್ರತೆಯಿಂದಲೇ ಸ್ವೀಕರಿಸುತ್ತೇವೆ. ಪ್ರಜಾಪ್ರಭುತ್ವದಲ್ಲಿ ಅಂತಿಮ ತೀರ್ಪುಗಾರರು ಜನರೇ ಹೊರತು, ಸಮಾಜದಲ್ಲಿ ದ್ವೇಷ ಬಿತ್ತುವ ವ್ಯಕ್ತಿಗಳಲ್ಲ. ಸಂಸ್ಕಾರ ಮನೆಯಿಂದ ಬರಬೇಕು, ಟೀಕೆಗಳು ಜನರ ಪ್ರೀತಿಯ ಅಡಿಪಾಯದ ಮೇಲಿರಬೇಕು; ಕೇವಲ ಪ್ರಚಾರದ ಹಪಾಹಪಿಯಿಂದಲ್ಲ! ಹೆಸರಿನಲ್ಲಿ ಅಹಿಂಸೆ ಇರಬಹುದು, ಆದರೆ ನಿಮ್ಮ ಪ್ರತಿಯೊಂದು ಮಾತೂ ಕನ್ನಡಿಗರ ಭಾವನೆಗಳಿಗೆ ಮಾಡುವ ಹಿಂಸೆ! ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದರು.

ಎಚ್‌.ಡಿ ಕುಮಾರ್‌ಸ್ವಾಮಿ ಹೇಳಿಕೆಗೂ ಟಾಂಗ್‌ ಕೊಟ್ಟಿದ್ದ ಚೇತನ್‌

ಈ ಬೆಳವಣಿಗೆಗಳಿಗಿಂತಲೂ ಮುಂಚೆ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರ ಹೇಳಿಕೆಯನ್ನೂ ಸಹ ನಟ ಚೇತನ್ ಅಪಹಾಸ್ಯ ಮಾಡಿದ್ದರು. HDK ಮತ್ತೆ CM ಆದ್ರೆ 'ರಾಮರಾಜ್ಯ' ಸ್ಥಾಪನೆ ಅಂತ ಹೇಳ್ತಾರೆ. ವ್ಯಂಗ್ಯ ಏನಂದ್ರೆ... 'ರಾಮರಾಜ್ಯ' ಅಂದ್ರೆ Rama ತನ್ನ ವೈಯಕ್ತಿಕ ಜೀವನವನ್ನೇ ತ್ಯಾಗ ಮಾಡಿ ಆದರ್ಶ ರಾಜ್ಯ ಕಟ್ಟಿದದ್ದು.

Dr Rajkumar ಚೇತನ್ ಅಹಿಂಸಾ ಪ್ರಶ್ನೆ ಕೇಳಿರುವುದು ತಪ್ಪಲ್ಲ, ಆದರೆ...: ದಿನೇಶ್ ಅಮಿನ್ ಮಟ್ಟು ವೈರಲ್ ಪೋಸ್ಟ್‌
Dr Rajkumar ಚೇತನ್ ಅಹಿಂಸಾ ಪ್ರಶ್ನೆ ಕೇಳಿರುವುದು ತಪ್ಪಲ್ಲ, ಆದರೆ...: ದಿನೇಶ್ ಅಮಿನ್ ಮಟ್ಟು ವೈರಲ್ ಪೋಸ್ಟ್‌

ಆದ್ರೆ H. D. Kumaraswamy ಬಗ್ಗೆ ಮಾತಾಡ್ತಾ ಬಂದರೆ, ರಾಜ್ಯದ ಬೆಳವಣಿಗೆಯನ್ನೇ ತನ್ನ ಮತ್ತು ಕುಟುಂಬದ ಲಾಭಕ್ಕೆ ತ್ಯಾಗ ಮಾಡ್ತಾರೆ ಅನ್ನೋ ಆರೋಪ ಇದೆ. ಕರ್ನಾಟಕದ ಜನರಿಗೆ ಈ ಖಾಲಿ ಮಾತುಗಳು ಅರ್ಥವಾಗುತ್ತವೆ ಎಂದಿದ್ದಾರು. ಈ ಟ್ವೀಟ್‌ಗಳ ಕಾರಣಕ್ಕೆ ಇದೀಗ ಜೆಡಿಎಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಕೆಂಗಣ್ಣಿಗೆ ನಟ ಚೇತನ್ ಅಹಿಂಸಾ ಅವರು ಗುರಿಯಾಗಿದ್ದಾರೆ. ಆದರೆ ಹಲವರು ಚೇತನ್ ಅಹಿಂಸಾ ಅವರಿಗೂ ಬೆಂಬಲ ಕೊಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+