Ration Card: ರಾಜ್ಯದಲ್ಲಿ ನೀಡಲಾಗುವ ಪಡಿತರ ಚೀಟಿಗಳು ಹಾಗೂ ಪ್ರಯೋಜನಗಳು
Ration Card: ಪಡಿತರ ಚೀಟಿ ಪ್ರಮುಖ ದಾಖಲೆಗಲ್ಲಿ ಒಂದಾಗಿದ್ದು, ಯಾವುದೇ ಅರ್ಜಿ ಸಲ್ಲಿಸಬೇಕೆಂದರೆ ಇದು ಬೇಕೆ ಬೇಕಾಗುತ್ತದೆ. ಇದರಲ್ಲಿ ಹಲವು ವಿಧಗಳಿವೆ. ಹಾಗಾದ್ರೆ ಯಾರಿಗೆ ಯಾವ ರೀತಿಯ ಕಾರ್ಡ್ ನೀಡಲಾಗುತ್ತದೆ ಹಾಗೂ ಇವುಗಳಿಂದ ಸಿಗುವ ಪ್ರಯೋಜನೆಗಳು ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕುಟುಂಗಬಗಳ ಸ್ಥಿತಿಯನ್ನು ನೋಡಿ ಅದಕ್ಕೆ ತಕ್ಕಂತೆ ಪಡಿತರ ಚೀಟಿಗಳನ್ನು ನೀಡಲಾಗುತ್ತದೆ. ಇಲ್ಲಿ ಆದಾಯ ಕೂಡ ಮ್ಯಾಟರ್ ಆಗುತ್ತದೆ. ಇದನ್ನು ಇಟ್ಟುಕೊಂಡು ಕಾರ್ಡ್‌ಗಳನ್ನು ವಿತರಣೆ ಮಾಡಲಾಗುತ್ತದೆ. ಅದರಲ್ಲೂ ಕಡುಬಡವರಿಗೆ ಉಚಿತ ಅಥವಾ ಕಡಿಮೆ ದರದಲ್ಲಿ ಪಡಿತರ ಹಾಗೂ ಆರೋಗ್ಯ ಸೌಲಭ್ಯಗಳು ಸಿಗಲಿ ಎನ್ನುವ ಉದ್ದೇಶದಿಂದ ಬಿಪಿಎಲ್ ಕಾರ್ಡ್ ಅನ್ನು ನೀಡಲಾಗುತ್ತದೆ. ಇನ್ನೂ ಯಾರಿಗೆಲ್ಲಾ ಯಾವ ರೀತಿಯ ಪಡಿತರ ಚೀಟಿ ವಿತರಣೆ ಮಾಡಲಾಗುತ್ತದೆ ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ.

ಅಲ್ಲದೆ, ಯಾವುದೇ ಅರ್ಜಿ ಸಲ್ಲಿಸಲು ಕೂಡ ಈಗ ಪಡಿತರ ಚೀಟಿ ಬೇಕೇ ಬೇಕಾಗುತ್ತದೆ. ಈ ಪಡಿತರ ಚೀಟಿಗಳು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿಯಲ್ಲಿ ಸಬ್ಸಿಡಿ ದರದಲ್ಲಿ ಪಡಿತರ ಪಡೆಯಲು ಅಗತ್ಯವಾದ ದಾಖಲೆಗಳಾಗಿವೆ ಮತ್ತು ರಾಜ್ಯದಲ್ಲಿ ಗುರುತಿನ ಚೀಟಿಯಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಇಂತಹ ಕುಟುಂಬಗಳಿಗೆ ಸಬ್ಸಿಡಿ ಆಹಾರ ಧಾನ್ಯಗಳು ಸೇರಿದಂತೆ ಇತರ ಸೌಲಭ್ಯಗಳನ್ನು ಪಡೆಯಬಹುದು.
ರಾಜ್ಯದಲ್ಲಿ ಪಡಿತರ ಚೀಟಿ ವಿಧಗಳು
* ಎಪಿಎಲ್
* ಬಿಪಿಎಲ್
* ಪಿಎಚ್ಎಚ್
* ಅಂತ್ಯೋದಯ
* ಎವೈ
ಯಾವ ಪಡಿತರ ಚೀಟಿಯನ್ನು ಯಾರಿಗೆ ನೀಡಲಾಗುತ್ತದೆ?
* ಎಪಿಎಲ್: ಈ ಪಡಿತರ ಚೀಟಿಯನ್ನು ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳಿಗೆ ನೀಡಲಾಗುತ್ತದೆ. ಇದರಿಂದ ಉಚಿತ ಹಾಗೂ ಕಡಿಮೆ ದರದಲ್ಲಿ ಪಡಿತರ ಪಡೆಬಹುದು.
* ಬಿಪಿಎಲ್: ಈ ಪಡಿತರ ಚೀಟಿಯನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡಲಾಗುತ್ತದೆ. ಉಚಿತ ಅಥವಾ ಕಡಿಮೆ ದರಲ್ಲಿ ಪಡಿತರ ಪಡೆಯಲು ಅಷ್ಟೇ ಅಲ್ಲದೆ, ಉಚಿತ ಆರೋಗ್ಯ ಸೇವೆ ಸೇರಿದಂತೆ ಹಲವು ಸರ್ಕಾರಿ ಸೌಲಭ್ಯಗಳನ್ನು ಸಹ ಪಡೆಯಲು ಬಳಕೆ ಮಾಡಬಹುದಾಗಿದೆ.
* ಪಿಎಚ್ಎಚ್: ಈ ಪಡಿತರ ಚೀಟಿ ಸರ್ಕಾರದಿಂದ ನಿಗದಿಪಡಿಸಿದ ಅರ್ಹತಾ ಮಾನದಂಡಗಳನ್ನು ಪೂರೈಸುವ ಕುಟುಂಬಗಳಿಗೆ ನೀಡಲಾಗುತ್ತದೆ. ಇದನ್ನೊಳಗೊಂಡ ಪ್ರತಿ ಕುಟುಂಬದ ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆಜಿ ಸೇರಿದಂತೆ ಆಹಾರ ಧಾನ್ಯಗಳನ್ನು ಪಡೆಯಬಹುದಾಗಿದೆ. ಅರ್ಹ ಗ್ರಾಮೀಣ ಕುಟುಂಬಗಳಿಗೆ ನೀಡಲಾಗುತ್ತದೆ.
* ಅಂತ್ಯೋದಯ: ಈ ಪಡಿತರ ಚೀಟಿಯನ್ನು ಅಂತ್ಯೋದಯ ಎಂದು ಗುರುತಿಸಲಾದ ಕುಟುಂಬಗಳಿಗೆ ವಿತರಣೆ ಮಾಡಲಾಗುತ್ತದೆ. ಇದನ್ನು ವಾರ್ಷಿಕ ಆದಾಯ ₹15,000ಕ್ಕಿಂತ ಕಡಿಮೆ ಇರುವವರಿಗೆ ನೀಡಲಾಗುತ್ತದೆ. ಇದನ್ನೊಳಗೊಂಡ ಪ್ರತಿ ಕುಟುಂಬವು ಪ್ರತಿ ತಿಂಗಳು 35 ಕೆಜಿ ಆಹಾರ ಧಾನ್ಯ ಪಡೆಯಬಹುದು.
* ಎವೈ: ಈ ಪಡಿತರ ಚೀಟಿಯನ್ನು ಅನ್ನು ಬಡವರು ಹಾಗೂ 65 ವರ್ಷಕ್ಕಿಂತ ಮೇಲ್ಪಟ್ಟವರಿ ನಾಗರಿಕರಿಗೆ ಅನ್ನಪೂರ್ಣ ಯೋಜನೆಯಡಿ ನೀಡಲಾಗುತ್ತದೆ. ಇವರು ಮಾಸಿಕ 10 ಕೆಜಿಯ ವರೆಗೆ ಆಹಾರ ಧಾನ್ಯಗಳನ್ನು ಉಚಿತವಾಗಿ ಅಥವಾ ಹೆಚ್ಚಿನ ಸಬ್ಸಿಡಿ ದರದಲ್ಲಿ ಪಡೆಯಲು ಅರ್ಹರಾಗಿರುತ್ತಾರೆ.
ಯಾರೆಲ್ಲಾ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು?
* ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿರಬೇಕು
* ಅರ್ಜಿದಾರರು ಯಾವುದೇ ಪಡಿತರ ಚೀಟಿ ಹೊಂದಿರಬಾರದು
ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ವಿಧಾನ
* ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್ https://ahara.karnataka.gov.inಗೆ ಭೇಟಿ ನೀಡಿ
* ಇ-ಪಡಿತರ ಚೀಟಿ ಸೇವೆ ಆಯ್ಕೆ ಮಾಡಿ.
* ಪಡಿತರ ಚೀಟಿ ಆಯ್ಕೆಮಾಡಿ
* ನಿಮ್ಮ ಮೊಬೈಲ್ ಸಂಖ್ಯೆ ಬಳಸಿಕೊಂಡು ಖಾತೆ ರಚಿಸಿ
* ನಿಮ್ಮ ಮೊಬೈಲ್‌ಗೆ ಕಳುಹಿಸಲಾದ ಒಟಿಸಿ ಮೂಲಕ ಪರಿಶೀಲಿಸಿ
* ಹೊಸ ಪಡಿತರ ಚೀಟಿ ಆಯ್ಕೆ ಮಾಡಿ
* ದಾಖಲೆಗಳನ್ನು ಅಪ್ಲೋಡ್ ಮಾಡಿ
* ಅರ್ಜಿಯನ್ನು ಸಲ್ಲಿಸಿ
ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು
* ಆಧಾರ್ ಕಾರ್ಡ್
* ವಾಸಸ್ಥಳ ಪುರಾವೆ (ವಿದ್ಯುತ್ ಬಿಲ್, ನೀರಿನ ಬಿಲ್, ಇತ್ಯಾದಿ)
* ಕುಟುಂಬದ ಸದಸ್ಯರ ಹೆಸರುಗಳು ಮತ್ತು ಅವರ ಆಧಾರ್ ಕಾರ್ಡ್‌ಗಳು
* ವಾರ್ಷಿಕ ಆದಾಯ ಪ್ರಮಾಣಪತ್ರ
* ಇತ್ತೀಚಿನ ಭಾವಚಿತ್ರ












Click it and Unblock the Notifications