ಪ್ಲಾಸ್ಮಾ ದಾನ ಮಾಡಿ ಜೀವ ಉಳಿಸಿ; ಯಾರು ದಾನ ಮಾಡಬಹುದು?
ಬೆಂಗಳೂರು, ಆಗಸ್ಟ್ 16 : ಕೋವಿಡ್ ಸೋಂಕಿನಿಂದ ಗುಣಮುಖರಾದವರು ಪ್ಲಾಸ್ಮಾ ದಾನ ಮಾಡುವ ಮೂಲಕ ಜೀವ ಉಳಿಸಲು ಸಹಾಯ ಮಾಡಬಹುದು. ಪ್ಲಾಸ್ಮಾ ದಾನ ಸುರಕ್ಷಿತ ಮತ್ತು ಸರಳ ವಿಧಾನವಾಗಿದೆ.
ಕರ್ನಾಟಕ ಸರ್ಕಾರ ಪ್ಮಾಸ್ಮಾ ದಾನ ಮಾಡುವವರನ್ನು ಪ್ರೋತ್ಸಾಹಿಸುವ ಸಲುವಾಗಿ, ದಾನಿಗಳ ಪೋಷಣೆ ಮತ್ತು ಆರೈಕೆಗಾಗಿ 5 ಸಾವಿರ ರೂ.ಗಳನ್ನು ನೀಡುತ್ತಿದೆ.
ಕೊರೊನಾ ವೈರಸ್ ಸೋಂಕಿನ ವಿರುದ್ದ ಹೋರಾಡಲುಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ಒಂದು ಹೊಸ ಚಿಕಿತ್ಸೆಯಾಗಿದೆ. ತೀವ್ರವಾದ ವೈರಸ್ ಸೋಂಕಿಗೆ ಒಳಗಾದ ವ್ಯಕ್ತಿಗೆ ಕೋವಿಡ್‌ನಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತದಿಂದ ಪ್ರತಿಕಾಯಗಳನ್ನು ಬಳಸುವುದು ಈ ಚಿಕಿತ್ಸೆಯಾಗಿದೆ.

ಯಾರು ಪ್ಲಾಸ್ಮಾ ದಾನ ಮಾಡಬಹುದು? : 18 ರಿಂದ 60 ವರ್ಷ ಎಲ್ಲಾ ಪುರುಷರು, ಗರ್ಭ ಧರಿಸದೇ ಇರುವ ಮಹಿಳೆಯರು ಪ್ಲಾಸ್ಮಾ ದಾನವನ್ನು ಮಾಡಬಹುದಾಗಿದೆ.
ಪ್ಲಾಸ್ಮಾ ದಾನ ಮಾಡುವ ವ್ಯಕ್ತಿಯ ದೇಹದ ತೂಕ 50 ಕೆಜಿಗಿಂತ ಹೆಚ್ಚಿರಬೇಕು. ಕೋವಿಡ್ ಸೋಂಕು ತಗುಲಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ 28 ದಿನಗಳ ನಂತರ ಪ್ಲಾಸ್ಮಾ ದಾನ ಮಾಡಬಹುದು.
ಯಾರನ್ನು ಸಂಪರ್ಕಿಸಬೇಕು? : ಪ್ಲಾಸ್ಮಾ ದಾನ ಮಾಡುವವರು ಟ್ರಾನ್ಸ್‌ಫ್ಯೂಷನ್ ಮೆಡಿಸನ್ ವಿಭಾಗ (ರಕ್ತನಿಧಿ ಕೇಂದ್ರ), ಪ್ಲಾಸ್ಮಾ ದಾನ ಕೇಂದ್ರ, ವಿಕ್ಟೋರಿಯಾ ಆಸ್ಪತ್ರೆ ಕ್ಯಾಂಪಸ್, ಕೆ. ಆರ್. ಮಾರುಕಟ್ಟೆ, ಬೆಂಗಳೂರು ಇವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 080-47190606











Click it and Unblock the Notifications