ಮಾರುಕಟ್ಟೆಗೆ ಬರಲಿದೆ ಕೆಎಂಎಫ್ ಮಿನರಲ್ ವಾಟರ್
ಬೆಂಗಳೂರು, ಜ. 19 : ಇನ್ನುಮುಂದೆ ನಂದಿನಿ ಹಾಲಿನ ಬೂತ್‌ಗಳಲ್ಲಿ ಮಿನರಲ್ ವಾಟರ್ ಜನರಿಗೆ ಲಭ್ಯವಾಗಲಿದೆ. ಹೌದು, ಕರ್ನಾಟಕ ಹಾಲು ಒಕ್ಕೂಟಗಳ ಮಹಾಮಂಡಳ ಮಿನರಲ್ ವಾಟರ್ ಕ್ಷೇತ್ರಕ್ಕೆ ಕಾಲಿಡಲಿದ್ದು, ಇನ್ನಾರು ತಿಂಗಳಿನಲ್ಲಿ ಮಿನರಲ್ ವಾಟರ್ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ.
ಖಾಸಗಿ ಕಂಪನಿಗಳಿಗಿಂತ ಕಡಿಮೆ ದರದಲ್ಲಿ ಮಿನರಲ್ ವಾಟರ್‌ಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕೆಎಂಎಫ್ ಮಿನರಲ್ ವಾಟರ್ ಕ್ಷೇತ್ರಕ್ಕೆ ಕಾಲಿಡುತ್ತಿದೆ. ರಾಜ್ಯದಲ್ಲಿ 1,400 ಮತ್ತು ಬೆಂಗಳೂರಿನಲ್ಲಿ 400 ಹಾಲಿನ ಬೂತ್‌ಗಳನ್ನು ಕೆಎಂಎಫ್ ಹೊಂದಿದೆ ಈ ಬೂತ್‌ಗಳಲ್ಲಿ ಮಿನರಲ್ ವಾಟರ್ ಮಾರಾಟ ಮಾಡಲು ಯೋಜನೆ ರೂಪಿಸಿದೆ. [ಎಂಎಸ್ ಐಎಲ್ ನಿಂದ ಕುಡಿಯುವ ನೀರು]

ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರಾದ ಎ.ಎಸ್.ಪ್ರೇಮನಾಥ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಮೊದಲು ಖಾಸಗಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ನೀರಿನ ಮಾರಾಟ ಮಾಡಲು ಚಿಂತಿಸಲಾಗಿತ್ತು. ಇದಕ್ಕೆ ಟೆಂಡರ್ ಸಹ ಕರೆಯಲಾಗಿತ್ತು. ಆದರೆ, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂದು ಪ್ರೇಮನಾಥ್ ಹೇಳಿದ್ದಾರೆ.[ಹಾಲಿನ ದರ ಏರಿಕೆ ಪ್ರಸ್ತಾಪವಿಲ್ಲ : ಸಚಿವರ ಸ್ಪಷ್ಟನೆ]
ರಾಮನಗರ ಜಿಲ್ಲೆಯ ಬಿಡದಿ ಸುತ್ತ-ಮುತ್ತಾ ನೀರಿನ ಘಟಕವನ್ನು ಆರಂಭಿಸಲು ಕೆಎಂಎಫ್ ನಿರ್ಧರಿಸಿದೆ. ಘಟಕಕ್ಕೆ 5 ಎಕರೆ ಜಮೀನು ಅಗತ್ಯವಿದೆ ಎಂದು ಅಂದಾಜಿಸಲಾಗಿದ್ದು ಸುಮಾರು 15 ಕೋಟಿ ಘಟಕ ನಿರ್ಮಿಸಲು ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯಾದ್ಯಂತ ಇರುವ ನಂದನಿ ಬೂತ್‌ಗಳಲ್ಲಿ ನೀರನ್ನು ಮಾರಾಟ ಮಾಡಲಾಗುತ್ತದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಜೊತೆ ಒಪ್ಪಂದ ಮಾಡಿಕೊಂಡು ಕೆಎಸ್ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಬೂತ್ ತೆರೆಯುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದರು.












Click it and Unblock the Notifications