ಏಪ್ರಿಲ್ 01ರಿಂದ ನಂದಿನಿ ಹಾಲು, ಮೊಸರಿನ ದರದಲ್ಲಿ ಏರಿಕೆ
ಏಪ್ರಿಲ್ 01ರಿಂದ ನಂದಿನಿ ಹಾಲು,ಮೊಸರು ದರದಲ್ಲಿ ಹೆಚ್ಚಳವಾಗಲಿದೆ. ಪ್ರತಿ ಲೀಟರ್ ಹಾಲು ಹಾಗೂ ಮೊಸರಿನ ದರದಲ್ಲಿ 2 ರು ಏರಿಕೆಯಾಗಲಿದೆ ಎಂದು ಕೆಎಂಎಫ್ ಪ್ರಕಟಿಸಿದೆ.
ಬ್ಲೆಂಗಳೂರು, ಮಾರ್ಚ್ 30: ಏಪ್ರಿಲ್ 01ರಿಂದ ನಂದಿನಿ ಹಾಲು,ಮೊಸರು ದರದಲ್ಲಿ ಹೆಚ್ಚಳವಾಗಲಿದೆ. ಪ್ರತಿ ಲೀಟರ್ ಹಾಲು ಹಾಗೂ ಮೊಸರಿನ ದರದಲ್ಲಿ 2 ರು ಏರಿಕೆಯಾಗಲಿದೆ ಎಂದು ಕೆಎಂಎಫ್ ಪ್ರಕಟಿಸಿದೆ.ಪ್ರತಿ ಲೀಟರ್ ಗೆ 3 ರಿಂದ 4 ರು ಹೆಚ್ಚಳ ಮಾಡುವಂತೆ ರೈತರು ಬೇಡಿಕೆ ಸಲ್ಲಿಸಿದ್ದರು.
ನಂದಿನಿ ಟೋನ್ಡ್ ಹಾಲಿನ ಬೆಲೆ 34 ರು ನಿಂದ 36 ರು ಗೆ ಹೆಚ್ಚಳ,ನಂದಿನ ಮೊಸರಿನ ದರ 36 ರು ನಿಂದ 38 ರು ಗೆ ಏರಿಕೆಯಾಗಿದೆ. ಇದರಲ್ಲಿ 1.50 ರು ರೈತರಿಗೆ, ಒಕ್ಕೂಟಗಳ ನಿರ್ವಹಣೆಗೆ 50 ಪೈಸೆ ಕೊಡಲು ನಿರ್ಧರಿಸಲಾಗಿದೆ.[ಕೆಎಂಎಫ್ ನಂತೆ ಬ್ರಾಂಡೆಡ್ ಮಟನ್ ಸ್ಟಾಲ್ ಸ್ಥಾಪನೆ]

ಪಶು ಸಂಗೋಪನಾ ಸಚಿವ ಎ ಮಂಜು ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಹಾಲು ಒಕ್ಕೂಟಗಳ ಅಧ್ಯಕ್ಷರ ಸಭೆಯಲ್ಲಿ ಬೆಲೆ ಏರಿಕೆಗೆ ಭಾರಿ ಒತ್ತಡ ಕಂಡು ಬಂದಿತ್ತು. ಸಭೆ ನಂತರ ಮಾತನಾಡಿದ ಮಂಜು, ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಿ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದರು.[ಹಾಲು ಮಾರಾಟದಿಂದ ಬರುವ ಲಾಭ ರೈತರಿಗೆ ಸೇರಿದ್ದು, ಡೇರಿಗಳಿಗಲ್ಲ!]

ತೀವ್ರ ಬರ ಇರುವುದರಿಂದ ಜಾನುವಾರುಗಳ ಸಾಕಣೆ ಸಮಸ್ಯೆ, ಹಿಂಡಿ, ಬೂಸಾ ಮೇವು ಪಶು ಆಹಾರ ದರ ಹೆಚ್ಚಳ, ಸಾಗಣೆ ವೆಚ್ಚ ಸೇರಿದಂತೆ ಹೈನುಗಾರಿಕೆ ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಲಿನ ದರವನ್ನು 2 ರಿಂದ 3 ರುಪಾಯಿ ಹೆಚ್ಚಳ ಮಾಡುವಂತೆ ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳ ರೈತರು ಕೆಎಂಎಫ್ ಗೆ ಮನವಿ ಸಲ್ಲಿಸುತ್ತಾ ಬಂದಿದ್ದರು.












Click it and Unblock the Notifications