ಕೆಐಸಿ ಬೆಳಗಾವಿ, ಕಲಬುರಗಿ ಪೀಠ ನಿಷ್ಕ್ರಿಯ: ಸರ್ಕಾರಕ್ಕೆ ನೋಟಿಸ್

ಬೆಂಗಳೂರು, ಆಗಸ್ಟ್‌ 23: ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಬೆಳಗಾವಿ ಮತ್ತು ಕಲಬುರಗಿ ಪೀಠಗಳು ಇದ್ದೂ ಇಲ್ಲದಂತಾಗಿದೆ. ಏಕೆಂದರೆ ಬೆಳಗಾವಿ ಪೀಠದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಮಾಹಿತಿ ಆಯುಕ್ತರ ಹುದ್ದೆ ಖಾಲಿ ಇದ್ದರೆ, 4 ವರ್ಷಗಳಿಂದ ಸ್ಥಗಿತಗೊಂಡಿರುವ ಕಲಬುರಗಿ ಪೀಠದ ಕಾರ್ಯಾರಂಭವೇ ಮಾಡಿಲ್ಲ.

ಈ ಎರಡೂ ಪೀಠಗಳನ್ನು ಕಾರ್ಯಾರಂಭಗೊಳಿಸಲು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

KIC Belagavi Kalburgi Bench Inactive HC Ordered Notice To Government

ನ್ಯಾಯವಾದಿ ಸುಧಾ ಕಾಟ್ವ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ. ನ್ಯಾಯಪೀಠ, 4 ವಾರಗಳಲ್ಲಿ ಉತ್ತರಿಸುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿದೆ.

ಅರ್ಜಿದಾರರ ವಾದ; ಅರ್ಜಿದಾರರ ಪರ ವಾದಿಸಿದ ವಕೀಲರು, 'ರಾಜ್ಯ ಸರ್ಕಾರ 2019ರಲ್ಲಿ ಬೆಳಗಾವಿ ಮತ್ತು ಕಲಬುರಗಿಯಲ್ಲಿ ಮಾಹಿತಿ ಆಯೋಗದ ಪೀಠಗಳನ್ನು ರಚನೆ ಮಾಡಿದೆ. ಆದರೆ, ಕಲಬುರಗಿ ಪೀಠ ಇನ್ನೂ ಕಾರ್ಯಾರಂಭ ಮಾಡಿಲ್ಲ. ಈ ಪೀಠಕ್ಕೆ 2022ರ ಏಪ್ರಿಲ್‌ನಲ್ಲಿ ರವೀಂದ್ರ ಢಾಕಪ್ಪ ಅವರನ್ನು ಆಯುಕ್ತರನ್ನಾಗಿ ನೇಮಕ ಮಾಡಲಾಯಿತು. ಆದರೆ, ಅವರು ಕಲಬುರಗಿ ಬದಲಿಗೆ ಬೆಂಗಳೂರಿನಲ್ಲೇ ಕಲಾಪ ನಡೆಸುತ್ತಿದ್ದಾರೆ' ಎಂದರು.

'ಬೆಳಗಾವಿ ಪೀಠದಲ್ಲಿದ್ದ ಗೀತಾ ಅವರ ರಾಜೀನಾಮೆ ಬಳಿಕ 2022ರ ಏಪ್ರಿಲ್‌ನಿಂದ ಆಯುಕ್ತರ ನೇಮಕ ಆಗಿಲ್ಲ. ಇಲ್ಲಿ 7,783 ಪ್ರಕರಣ ಬಾಕಿ ಇವೆ. ಪ್ರತಿ ತಿಂಗಳೂ ಈ ಪೀಠದಲ್ಲಿ ಏಳು ಜಿಲ್ಲೆಗಳ ದೂರು ಮತ್ತು ಮೇಲ್ಮನವಿ ವಿಚಾರಣೆ ನಡೆಸಲಾಗುತ್ತದೆ. ಇಲ್ಲಿ 500 ರಿಂದ 700ವರೆಗೆ ಮೇಲ್ಮನವಿ ದಾಖಲಾಗುತ್ತವೆ. ಈತನಕ ಇಲ್ಲಿ ಆಯುಕ್ತರ ನೇಮಕ ಆಗಿಲ್ಲವಾದ ಕಾರಣ ಸಾರ್ವಜನಿಕರು ಸಾಕಷ್ಟು ಸಮಸ್ಯೆ ಎದುರಿಸಬೇಕಾಗಿದೆ' ಎಂದು ವಾದ ಮಂಡಿಸಿದರು.

'ಮಾಹಿತಿ ಆಯೋಗದಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾದ ಸರಿಸುಮಾರು 31 ಸಾವಿರ ಆರ್‌ಟಿಐ ಮನವಿಗಳು ಬಾಕಿ ಇವೆ. ಇವುಗಳಲ್ಲಿ 19,131 ಮನವಿಗಳು ಬೆಳಗಾವಿ ಹಾಗೂ ಕಲಬುರಗಿ ಪೀಠಕ್ಕೆ ಸಂಬಂಧಿಸಿವೆ ಎಂದು ಅರ್ಜಿದಾರರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+