KEA: ಪರೀಕ್ಷೆಗೆ ನೋಂದಣಿ ಆಗುವವರಿಗೆ ಇವೆಲ್ಲ ಕಡ್ಡಾಯ: ಕೆಇಎ ಹೊಸ ವ್ಯವಸ್ಥೆ ಜಾರಿ
ಬೆಂಗಳೂರು, ಜನವರಿ 29: ಇಂಜಿನಿಯರ್ ಕೋರ್ಸ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಬಯಸುವವರು ಮೊದಲ ಸಾಮಾನ್ಯ ಪ್ರವೇಶ ಪರೀಕ್ಷೆ (CET) ಬರೆಯಬೇಕು. ಈ ಪರೀಕ್ಷೆ ನೋಂದಣಿ ವೇಳೆ ಆಧಾರ್ ಕಾರ್ಡ್ ಆಧಾರದಲ್ಲಿ ನೋಂದಣಿ ಆಗುವ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ. ಈ ವ್ಯವಸ್ಥೆ ಜಾರಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ (UIDAI) ಅನುಮತಿ ಪಡೆದಿದೆ.
ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಬಯಸುವ ಅಭ್ಯರ್ಥಿಗಳು CET ಪರೀಕ್ಷೆ ನೋಂದಣಿಗೆ ಆಧಾರ್ ಆಧಾರಿತ ದೃಢೀಕರಣ ಸೇರಿದಂತೆ ಮೂರು ಕ್ರಮಗಳನ್ನು ಅನುಸರಿಸಲಾಗುತ್ತದೆ. ಆಧಾರ್ ಕಾರ್ಡ್ ಜೊತೆಗೆ ಅಭ್ಯರ್ಥಿಗಳ ಮುಖವನ್ನು ಬುದ್ಧಿಮತ್ತೆ (AI) ಸಹಾದಿಂದ ಮುಖ ಗುರುತಿಸುವಿಕೆ, ಒಟಿಪಿ ಕ್ರಮವನ್ನು ಅನುಸರಿಸಲಾಗುತ್ತದೆ. ಒಟ್ಟು ಮೂರು ಕ್ರಮಗಳು ಈ ವ್ಯವಸ್ಥೆಯಲ್ಲಿರಲಿವೆ ಎಂದು 'ದಿ ಹಿಂದೂ' ವರದಿ ಮಾಡಿದೆ.

ಕೆಇಎ ಪ್ರಾಧಿಕಾರಿಂದ ಸೀಟು ಹಂಚಿಕೆಗೆ ವೇಳೆ ಇತ್ತೀಚೆಗೆ ಸೀಟ್ ಬ್ಲಾಕಿಂಗ್ ದಂಧೆ ಭಾರೀ ಸದ್ದು ಮಾಡಿತ್ತು. ಇಂತಹ ಅಕ್ರಮ ತಡೆಯಲು, ವಿದ್ಯಾರ್ಥಿಗಳ ಮಾಹಿತಿ ಸೋರಿಕೆ ಆಗದಂತೆ ತಡೆಯುವ ಉದ್ದೇಶಿದಂದ ಸಿಇಟಿ, ರಾಷ್ಟ್ರೀಯ ಅರ್ಹತಾ-ಪ್ರವೇಶ ಪರೀಕ್ಷೆ (ನೀಟ್) ಮತ್ತು ನೇಮಕಾತಿ ಪರೀಕ್ಷೆಗಳಲ್ಲಿ ಹೊಸ ವ್ಯವಸ್ಥೆ ತರಲಾಗುತ್ತಿದೆ ಎಂದು KEA ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ.
CET ಎಲ್ಲ ಹಂತಗಳಲ್ಲೂ ಆಧಾರ್ ಬೇಸ್ ದೃಢೀಕರಣ
ಕೆಇಎ ನೇಮಕಾತಿ ಮಾಹಿತಿ ತಡೆಯಲು, ವಿದ್ಯಾರ್ಥಿಗಳು/ಅಭ್ಯರ್ಥಿಗಳು ಹಿತಾಸಕ್ತಿ ರಕ್ಷಣೆ, ಮಾಹಿತಿ ದುರ್ಬಳಕೆ ಆಗದಂತೆ ನಿರ್ವಹಿಸಲು ನೋಂದಣಿಯ ಹೊಸ ವ್ಯವಸ್ಥೆ ಪೂರಕವಾಗಿದೆ. ನೋಂದಣಿ ಪ್ರಕ್ರಿಯೆ ಈಗಾಗಲೇ ಪುನಾರಂಭವಾಗಿದೆ. ಸಿಇಟಿ ಪರೀಕ್ಷೆಯ ಮುಂದಿನ ಹಂತದಿಂದ ಆಧಾರ್ ಲಿಂಕ್ಡ್ ಆಧಾರಿತ ದೃಢೀಕರಣ ಮಾಡಲಾಗುತ್ತದೆ.
ಸದ್ಯ ಪ್ರಾಧಿಕಾರವು ಸಿಇಟಿ ಅಭ್ಯರ್ಥಿಗಳಿಗೆ ಅರ್ಜಿ ಲಾಗಿನ್‌ಗೆ OTP ಮೂಲಕ ಪರಿಶೀಲನೆ ಹಾಗೂ ಎಐನಿಂದ ಮುಖ ಗುರುತಿಸುವಿಕೆ ಪ್ರಕ್ರಿಯೆ ಆರಂಭಿಸಿದ್ದೇವೆ. ವಿದ್ಯಾರ್ಥಿಗಳು ಈ ಬಗ್ಗೆ ಗಮನಿಸಿ ನೋಂದಣಿ ಮಾಡಿಕೊಳ್ಳವುದು ಕಡ್ಡಾಯಗೊಳಿಸಲಾಗಿದೆ.
ಆಧಾರ್ ಜೊತೆಗೆ ಲಿಂಕ್ ಆದ ಮೊಬೈಲ್ ಸಂಖ್ಯೆ ಬಳಸಿ
ಅಭ್ಯರ್ಥಿಗಳು ಸಿಇಟಿಗೆ ಅರ್ಜಿ ಸಲ್ಲಿಕೆ ವೇಳೆ ಅಥವಾ ಸೀಟು ಆಯ್ಕೆ ಮಾಡಿಕೊಳ್ಳುವಾಗ ಆಧಾರ್ ಸಂಖ್ಯೆ ವಿವರ ನೀಡಬೇಕು. ಕೂಡಲೇ ಅವರಿಗೆ ಆಧಾರ್ ಸಂಖ್ಯೆಯ ಜೊತೆಗೆ ಲಿಂಕ್ ಆದ ಮೊಬೈಲ್ ಸಂಖ್ಯೆ ಒಂದು ಒಟಿಪಿ ಬರುತ್ತದೆ. ಅದನ್ನು ಹಾಕಿದ ಕೂಡಲೇ ಅರ್ಜಿ ಪರಿಶೀಲನೆ, ಡೌನಲೋಡ್‌ನಂತರ ಮುಂದಿನ ಹಂತಕ್ಕೆ ನೀವು ಹೋಗಲು ಸಾಧ್ಯವಾಗುತ್ತದೆ.
ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಸೇರಬಯಸುವ ಅಭ್ಯರ್ಥಿಗಳು CETಗೆ ನೋಂದಣಿ ಆಗುವ ಆರಂಭದಿಂದ ಆಯ್ಕೆ ಮಾಡಿಕೊಂಡ ಕಾಲೇಜಿಗೆ ವರದಿ ಆಗುವವರೆಗೆ ಸಂಪೂರ್ಣ ಪ್ರಕ್ರಿಯೆಯು ದೃಢೀಕರಣದ ಮೇಲೆ ನಡೆಯುತ್ತಿದೆ. ಪ್ರತಿ ಹಂತದಲ್ಲಿಯೂ ದೃಢೀಕರಣ ಮಾಡಲಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಆದ ಮೊಬೈಲ್ ಸಂಖ್ಯೆಯನ್ನೇ ಕಡ್ಡಾಯವಾಗಿ ನೀಡಬೇಕಾಗುತ್ತದೆ. ಮೊಬೈಲ್ ಸಂಖ್ಯೆ ಬದಲಾವಣೆ ಮಾಡುವಂತಿಲ್ಲ ಎಂದು ತಿಳಿಸಿದೆ.












Click it and Unblock the Notifications