KEA AO-AAO: ಕೃಷಿ ಇಲಾಖೆ ನೇಮಕಾತಿ ಅಭ್ಯರ್ಥಿಗಳೇ ಗಮನಿಸಿ, ಪ್ರವೇಶ ಪತ್ರ ಬಿಡುಗಡೆ; ಡೌನ್‌ಲೋಡ್ ಲಿಂಕ್ ಇಲ್ಲಿದೆ

ಬೆಂಗಳೂರು: ಕರ್ನಾಟಕ ರಾಜ್ಯ ಕೃಷಿ ಇಲಾಖೆ ಸಂಬಂಧಿಸಿದ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಕೃಷಿ ಅಧಿಕಾರಿ (AO) ಮತ್ತು ಸಹಾಯಕ ಕೃಷಿ ಅಧಿಕಾರಿ (AAO) ನೇಮಕಾತಿ ಪರೀಕ್ಷೆ ದಿನಾಂಕ ಪ್ರಕಟವಾಗಿದ್ದು, ಇದೀಗ ಪ್ರವೇಶ ಪತ್ರ ಬಿಡುಗಡೆಯಾಗಿದೆ. ಅಭ್ಯರ್ಥಿಗಳು ಕೆಇಎ ಅಧಿಕೃತ ಜಾಲತಾಣ ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಾರ್ಯ ನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ತಿಳಿಸಿದ್ದಾರೆ.

ಕೃಷಿ ಅಧಿಕಾರಿ (AO) ಮತ್ತು ಸಹಾಯಕ ಕೃಷಿ ಅಧಿಕಾರಿ (AAO) ಹುದ್ದೆಗೆ ಸೇರಬಯಸುವವರು ಲಿಖಿತ ಪರೀಕ್ಷೆ ಬರೆಯಬೇಕು. ಈ ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬ ಅಭ್ಯರ್ಥಿಗೂ ಪ್ರವೇಶಪತ್ರ ಪ್ರಮುಖ ದಾಖಲೆಯಾಗಿದ್ದು, ಅದಿಲ್ಲದೇ ಪರೀಕ್ಷೆಗೆ ಅವಕಾಶ ಸಿಗುವುದಿಲ್ಲ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ https://www.cetonline.karnataka.gov.in/KEA_EXAM_PORTAL/Forms/Candidates/Login ನೀಡಿರುವ ಅಧಿಕೃತ ಲಿಂಕ್ ಮೂಲಕ ಲಾಗಿನ್ ಆಗಿ ಆಡ್ಮಿಟ್ ಕಾರ್ಡ್ (ಪ್ರವೇಶ ಪತ್ರ) ಡೌನ್‌ಲೋಡ್ ಮಾಡಿಕೊಳ್ಳಬೇಕು.

AO AAO Admit Cards 2026

ಈ ಪ್ರವೇಶ ಪತ್ರದಲ್ಲಿ ಪರೀಕ್ಷೆಗೆ ಹಾಜರಾಗುವ ಸೂಕ್ತ ಅಭ್ಯರ್ಥಿಯ ಹೆಸರು, ರೋಲ್ ಸಂಖ್ಯೆ, ಭಾವಚಿತ್ರ, ಸಹಿ, ಪರೀಕ್ಷಾ ಕೇಂದ್ರದ ಹೆಸರು, ವಿಳಾಸ, ಪರೀಕ್ಷೆಯ ದಿನಾಂಕ ಮತ್ತು ನಿಖರವಾದ ಸಮಯ ಸೇರಿದಂತೆ ಅತ್ಯಗತ್ಯ ಸೂಚನೆಗಳು ಇರುತ್ತವೆ. ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುವ ಮೊದಲು ಅದರಲ್ಲಿರುವ ಎಲ್ಲ ಮಾಹಿತಿ ಸರಿಯಾಗಿದೆಯೇ ಎಂದು ಪರಿಶೀಲಿಸಿಕೊಳ್ಳುವಂತೆ ಕೆಇಎ ಹೇಳಿದೆ.

ಆಗಸ್ಟ್ 8 ಮತ್ತು 9ರಂದು ಪರೀಕ್ಷೆ

ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳಿಗೆ ಆಗಸ್ಟ್ 8ರಂದು ಹಾಗೂ ಉಳಿಕೆ ಮೂಲ ವೃಂದದ ಅಭ್ಯರ್ಥಿಗಳಿಗೆ ಆಗಸ್ಟ್ 9ರಂದು ಲಿಖಿತ ಪರೀಕ್ಷೆ ನಡೆಸಲಾಗುತ್ತಿದೆ. ಆಯಾ ಭಾಗದ ಅಭ್ಯರ್ಥಿಗಳು ತಪ್ಪದೇ ಪ್ರವೇಶ ಪತ್ರ ಸಹಿತ ಲಿಖಿತ ಪರೀಕ್ಷೆಗೆ ಹಾಜರಾಗಬೇಕು. ಈ ವೇಳೆ ಪ್ರವೇಶ ಪತ್ರದ ಪ್ರತಿ, ಭಾವಚಿತ್ರ ಇರುವ ಆಧಾರ್, ಓಟರ್ (ಐಡಿ) ಅಥವಾ ಪ್ಯಾನ್ ಇಲ್ಲವೇ ಡ್ರೈವಿಂಗ್ ಲೈಸೆನ್ಸ್‌ ನಂತಹ ಗುರುತಿನ ಚೀಟಿಯಲ್ಲಿ ಯಾವುದಾದರೂ ಒಂದನ್ನು ಒಯ್ಯುವುದು ಕಡ್ಡಾಯ.

ಪರೀಕ್ಷಾ ಹಾಲ್‌ನಲ್ಲಿ ಸ್ಮಾರ್ಟ್ ವಾಚ್‌, ಮೊಬೈಲ್ ಇನ್ನಿತರ ಗ್ಯಾಡ್ಜೆಟ್ಸ್, ಎಲೆಕ್ಟ್ರಿಕ್ ಉಪಕರಣ, ಬ್ಲೂಟೂತ್, ಇನ್ನಿತರ ಸಾಧನ ತೆಗೆದುಕೊಂಡು ಹೋಗುವಂತಿಲ್ಲ. ನಿಯಮ ಉಲ್ಲಂಘಿಸಿದರೆ ಪರೀಕ್ಷೆ ವೇಳೆ ಗೊಂದಲ ಉಂಟಾಗುವ ಸಾಧ್ಯತೆ ಇದೆ.

ಪ್ರವೇಶ ಪತ್ರ ಡೌನ್‌ಲೋಡ್ ಮಾಡೋದು ಹೇಗೆ?

* AO, AAO ಅಭ್ಯರ್ಥಿಗಳು ಮೊದಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ ಲಾಗಿನ್ ಲಿಂಕ್‌ https://www.cetonline.karnataka.gov.in/KEA_EXAM_PORTAL/Forms/Candidates/Login ಮೂಲಕ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.

* ಇಲ್ಲಿ AO, AAO (ಆರ್ ಪಿಸಿ) 2026 ಅಥವಾ AO, AAO (ಹೈದರಾಬಾದ್ ಕರ್ನಾಟಕ) 2026 ಎಂಬ ಎರಡು ಆಯ್ಕೆಗಳು ಇರುತ್ತವೆ. ನಿಮಗೆ ಸಂಬಂಧಿಸಿದ ಲಿಂಕ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು.

* ಅಭ್ಯರ್ಥಿಯ ಅರ್ಜಿ ಸಂಖ್ಯೆ ನಮೂದಿಸಬೇಕು.

* ಬಳಿಕ ಅಭ್ಯರ್ಥಿಯ ಹೆಸರು ಹಾಗೂ ಮುಂದೆ ಕೇಳಲಾಗುವ ಇಂಗ್ಲಿಷ್ ಕ್ಯಾಪ್ಚಾ ಹಾಕಬೇಕು.

* ಅಗತ್ಯ ವಿವರ ಹಾಕಿದ ಮೇಲೆ ಎಲ್ಲವು ಸರಿಯಾಗಿದೆಯೇ ಎಂದು ಒಮ್ಮೆ ಗಮನಿಸಿ ಸಲ್ಲಿಕೆ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಪ್ರವೇಶ ಪತ್ರ ಕಾಣಿಸುತ್ತದೆ.

* ಪರದೆ ಮೇಲಿರುವ ಡೌನ್‌ಲೋಡ್ ಮೇಲೆ ಕ್ಲಿಕ್ ಮಾಡಿದರೆ ಪ್ರವೇಶ ಪತ್ರ ಡೌನ್‌ಲೋಡ್ ಆಗುತ್ತದೆ.

* ಈ ಪ್ರವೇಶ ಪತ್ರ ಪರೀಕ್ಷೆ/ಭವಿಷ್ಯದ ಅನುಕೂಲಕ್ಕಾಗಿ ಒಂದು ಪ್ರತಿ ನಿಮ್ಮಲ್ಲಿಟ್ಟುಕೊಳ್ಳಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+