UGCET 2026 ಅಭ್ಯರ್ಥಿಗಳೇ ಗಮನಿಸಿ; ಇಂದು ಅಣಕು ಫಲಿತಾಂಶ ಬಿಡುಗಡೆ, ಅಂತಿಮ ಫಲಿತಾಂಶ ಪ್ರಕಟ ಯಾವಾಗ?

ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ ಕೋರ್ಸಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಯುಜಿ ಸಾಮಾನ್ಯ ಪ್ರವೇಶ ಪರೀಕ್ಷೆ-2026 (UGCET) ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಸುದ್ದಿ ನೀಡಿದೆ. ಇಂದು ಸೋಮವಾರ (ಜುಲೈ 6) ಅಣಕು ಸೀಟು ಹಂಚಿಕೆಯ (mockresult) ಫಲಿತಾಂಶವನ್ನು ಬಿಡುಗಡೆ ಮಾಡಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಾರ್ಯ ನಿರ್ವಾಹಕ ನಿರ್ದೇಶಕ ಎಚ್‌.ಪ್ರಸನ್ನ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಯುಜಿಸಿಟಿಗೆ ಸಂಬಂಧಿಸಿದಂತೆ ಕೃಷಿ ವಿಜ್ಞಾನ, ಪಶು ವೈದ್ಯಕೀಯ, ಬಿಎಸ್ ಸಿ ನರ್ಸಿಂಗ್, ಬಿಪಿಟಿ, ಬಿಪಿಒ, ಬಿಎಸ್ಸಿ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್ ಗಳ ಅಣಕು ಫಲಿತಾಂಶ ಪ್ರಕಟಿಸಲಾಗಿದೆ. ಇದನ್ನು ಜೂನ್ 30ರಂದು ಬೆಳಗ್ಗೆ‌ 10ಗಂಟೆವರೆಗೆ ದಾಖಲಿಸಿರುವ ಆಪ್ಷನ್ಸ್ ಮೇಲೆ ಮೆರಿಟ್ ಮತ್ತು ರೋಸ್ಟರ್ ಪ್ರಕಾರ ಸೀಟು ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.

KEA

ಜುಲೈ 15ರಂದು ಅಂತಿಮ ಫಲಿತಾಂಶ

ಅಣಕು ಫಲಿತಾಂಶವೇ ಅಂತಿಮ ಫಲಿತಾಂಶವಲ್ಲ. ಅಭ್ಯರ್ಥಿಗಳು ಜುಲೈ 9ರಂದು ಬೆಳಿಗ್ಗೆ 10 ಗಂಟೆವರೆಗೆ ತಮ್ಮ ಇಚ್ಛೆ/ಆಯ್ಕೆಗಳನ್ನು ಹೊಸದಾಗಿ ದಾಖಲಿಸಲು/ಬದಲಿಸಿಕೊಳ್ಳಲು ಹಾಗೂ ತೆಗೆದುಹಾಕಲು/ಕ್ರಮಾಂಕ ಬದಲಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಮೊದಲ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಜುಲೈ 14ರಂದು ಪ್ರಕಟಿಸಲಾಗುವುದು. ಜುಲೈ 15ರಂದು ಬೆಳಿಗ್ಗೆ 11 ಗಂಟೆಗೆ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.

ಪದವಿ-ಸ್ನಾತಕೋತ್ತರದಲ್ಲಿ ಭಾಷಾ ಸಾಹಿತ್ಯ ಅಧ್ಯಯನ, ಕನ್ನಡ ಬೋಧಕರಿಗೆ ಆದ್ಯತೆ ನೀಡಿ: ಪುರುಷೋತ್ತಮ ಬಿಳಿಮಲೆ
ಪದವಿ-ಸ್ನಾತಕೋತ್ತರದಲ್ಲಿ ಭಾಷಾ ಸಾಹಿತ್ಯ ಅಧ್ಯಯನ, ಕನ್ನಡ ಬೋಧಕರಿಗೆ ಆದ್ಯತೆ ನೀಡಿ: ಪುರುಷೋತ್ತಮ ಬಿಳಿಮಲೆ

ಯುಜಿಸಿಇಟಿ ಅಭ್ಯರ್ಥಿಗಳ ಪೈಕಿ ಯಾರೆಲ್ಲ ಇದುವರೆಗೂ ಇಚ್ಛೆ/ಆಯ್ಕೆ ದಾಖಲಿಸದೇ ಇರುವ ಅಭ್ಯರ್ಥಿಗಳು 750 ರೂಪಾಯಿ ಪಾವತಿಸಿ, ಆಯ್ಕೆ ನಮೂದಿಸಬಹುದು. ಯೋಗ ಮತ್ತು ನ್ಯಾಚುರೋಪತಿ ಕೋರ್ಸ್ ಗಳ ಕರಡು ಸೀಟ್ ಮ್ಯಾಟ್ರಿಕ್ಸ್ ಸರ್ಕಾರದಿಂದ ಬಂದಿದ್ದು, ಅದರ ಆಧಾರದ ಮೇಲೆ ಇಚ್ಛೆ/ಆಯ್ಕೆ ದಾಖಲಿಸಲು ಅವಕಾಶ ನೀಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PGCET: ಜುಲೈ 10ರಂದು ದಾಖಲೆ ಪರಿಶೀಲನೆ

ಪಿಜಿಸಿಟಿ 2026ಗೆ ಸಂಬಂಧಿಸಿದಂತೆ ಎಂಬಿಎ, ಎಂಸಿಎ, ಎಂಇ, ಎಂ.ಟೆಕ್, ಎಂ.ಆರ್ಕಿಟೆಕ್ಚರ್ ಕೋರ್ಸುಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮು ಅರ್ಜಿಯಲ್ಲಿನ‌ ಮಾಹಿತಿ ತಿದ್ದುಪಡಿಗೆ ಅವಕಾಶ ನೀಡಲಾಗಿತ್ತು. ಇದರ ಬೆನ್ನಲ್ಲೇ ದಾಖಲೆ ಪರಿಶೀಲನೆಯ ಅಪ್ಡೇಟ್ ನೀಡಿದೆ.

ಪ್ರಸಕ್ತ ಸಾಲಿನಲಿ ಎಂ.ಇ./ಎಂ.ಟೆಕ್. ಆಯ್ದ ಕೋರ್ಸುಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಜುಲೈ 10ರ ಬೆಳಗ್ಗೆ 10.30ರಿಂದ ಸಂಜೆ 4ರೊಳಗೆ ಮೂಲ ದಾಖಲೆಗಳ ಪರಿಶೀಲನೆಗೆ ಖುದ್ದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಗೆ ಬರಲು ಸೂಚನೆ ನೀಡಲಾಗಿದೆ. ಜೈವಿಕ ತಂತ್ರಜ್ಞಾನ, ಕೆಮಿಕಲ್ ಎಂಜಿನಿಯರಿಂಗ್, ಎನ್ವಿರಾನ್ ಮೆಂಟಲ್ ಎಂಜಿನಿಯರಿಂಗ್, ಪಾಲಿಮರ್ ಸೈನ್ಸ್, ಜವಳಿ ತಂತ್ರಜ್ಞಾನ, ಆರ್ಕಿಟೆಕ್ಚರ್ ಕೋರ್ಸುಗಳಿಗೆ ಇದು ಅನ್ವಯವಾಗುತ್ತದೆ ಎಂದು ಎಚ್‌.ಪ್ರಸನ್ನ ಅವರು ವಿವರಿಸಿದ್ದಾರೆ.

ಪದವಿ ಪರೀಕ್ಷೆಯ ಎಲ್ಲ ಸೆಮಿಸ್ಟರ್/ವರ್ಷಗಳ ಅಂಕಪಟ್ಟಿಗಳು, ಕೆಇಎ ಆನ್ ಲೈನ್ ಅರ್ಜಿಯ ಪ್ರತಿ, ಗುರುತು ಚೀಟಿ ಹಾಗೂ ಇತರೆ ಅಗತ್ಯ ದಾಖಲೆಗಳನ್ನು ತರಬೇಕು. ಪರಿಶೀಲನೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮಾತ್ರ ಪದವಿ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ನಿಯಮಾನುಸಾರ ರಾಂಕಿಂಗ್ ನೀಡಲಾಗುವುದು.

ಇನ್ನೂ ಎಂ.ಆರ್ಕಿಟೆಕ್ಚರ್ ಕೋರ್ಸಿಗೆ ಅರ್ಜಿ ಸಲ್ಲಿಸಿರುವವರು ಈ ಮೇಲಿನ ಪ್ರಮಾಣ ಪತ್ರಗಳ ಜೊತೆಗೆ ಪಿಜಿಇಟಿಎ-26ರಲ್ಲಿ ಪಡೆದಿರುವ ಅಂಕಪಟ್ಟಿಯನ್ನು ಸಹ ಸಲ್ಲಿಸಬೇಕೆಂದು ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+