KEA 2026: ಕಲ್ಯಾಣ ಕರ್ನಾಟಕ ನೇಮಕಾತಿ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ; ನವೆಂಬರ್‌ನಲ್ಲಿ ಪರೀಕ್ಷೆ

KEA Recruitment 2026: ಪೌರಾಡಳಿತ ನಿರ್ದೇಶನಾಲಯ, ಇಎಸ್ಐ, ವಸತಿ ಶಿಕ್ಷಣ ಸಂಸ್ಥೆಗಳ ಸಂಘಕ್ಕೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ವೃಂದದ ವಿವಿಧ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆಗಳನ್ನು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಇಂದು ಭಾನುವಾರ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಈ ಕುರಿತು ಅಧಿಕೃತ ಮಾಹಿತಿ ನೀಡಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು, ಕಲ್ಯಾಣ ಕರ್ನಾಟಕ ವೃಂದದ ವಿವಿಧ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆಗಳನ್ನು ಮುಂದಿನ ತಿಂಗಳ ನವೆಂಬರ್‍‌ನಲ್ಲಿ ನಡೆಸಲು ಉದ್ದೇಶಿಸಲಾಗಿದೆ.

KEA Recruitment Exam Schedule

ನವೆಂಬರ್ ತಿಂಗಳಲ್ಲಿ ಪರೀಕ್ಷೆ, ವೇಳಾಪಟ್ಟಿ ಹೀಗಿದೆ

ನವೆಂಬರ್ 6, 7 ಮತ್ತು ನವೆಂಬರ್ 14ರಂದು ನಿರ್ದಿಷ್ಟ ಹಾಗೂ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಪೌರಾಡಳಿತ ನಿರ್ದೇಶನಾಲಯದ ಎಲೆಕ್ಟ್ರೀಷಿಯನ್ ಗ್ರೇಡ್- 1 (3 ಹುದ್ದೆ) ಮತ್ರು ಗ್ರೇಡ್- 2 (5 ಹುದ್ದೆ) ಹುದ್ದೆಗಳಿಗೆ ನವೆಂಬರ್ 6ರಂದು ಲಿಖಿತ ಪರೀಕ್ಷೆ ಇರಲಿದೆ ಎಂದು ಅವರು ಹೇಳಿದರು.

ಇಎಸ್ಐ ನ ಫಾರ್ಮಸಿ ಅಧಿಕಾರಿ (11 ಹುದ್ದೆ) ಹಾಗೂ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ನರ್ಸಿಂಗ್ ಅಧಿಕಾರಿ (ಶುಶ್ರೂಷಾಧಿಕಾರಿ- 23 ಹುದ್ದೆ) ಹಾಗೂ ನರ್ಸಿಂಗ್ ಅಧಿಕಾರಿ (11) ಹುದ್ದೆಗಳಿಗೆ ನ.7ರಂದು ಪರೀಕ್ಷೆ ನಡೆಯಲಿದೆ.

ಪೌರಾಡಳಿತ ನಿರ್ದೇಶನಾಲಯದ ನೀರು ಸರಬರಾಜು ಆಪರೇಟರ್ (122 ಹುದ್ದೆ) ಹಾಗೂ ಸಹಾಯಕ ನೀರು ಸರಬರಾಜು ಆಪರೇಟರ್ (80 ಹುದ್ದೆ) ಹುದ್ದಗಳಿಗೆ ನಿರ್ದಿಷ್ಟ ಪತ್ರಿಕೆಯ ಪರೀಕ್ಷೆ ನವೆಂಬರ್ 14ರಂದು ನಡೆಯಲಿದೆ. ಅದೇ ದಿನ (ನವೆಂಬರ್ 14) ರಂದು ಮಧ್ಯಾಹ್ನದ ನಂತರ ಈ ಎಲ್ಲ ಹುದ್ದೆಗಳಿಗೆ ಸಾಮಾನ್ಯ ಜ್ಞಾನ ಪರೀಕ್ಷೆ ನಡೆಯಲಿವೆ ಎಂದು ಅವರು ಹೇಳಿದರು.

ಈ ಪರೀಕ್ಷೆ ಹಾಗೂ ಪರೀಕ್ಷಾ ಸಮಯಗಳು, ವೇಳಾಪಟ್ಟಿಯನ್ನು ನೀವು ಕೆಇಎ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪರಿಶೀಲಿಸಬೇಕು.

ಪರೀಕ್ಷೆಗೆ ತೆರಳುವ ಮುನ್ನ ಗಮನಿಸಿ

* ಪರೀಕ್ಷಾ ಕೇಂದ್ರದಲ್ಲಿ Frisking ಮತ್ತು ಮುಖಚಹರೆ ಪರಿಶೀಲಿಸಿ ಪ್ರವೇಶ ನೀಡುವುದರಿಂದ ಎರಡು ಘಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರದೊಳಗೆ ಹಾಜರಿರತಕ್ಕದ್ದು.

* ಋಣಾತ್ಮಕ ಮೌಲ್ಯಮಾಪನವಿದ್ದು, ಪ್ರತಿ ತಪ್ಪು ಉತ್ತರಕ್ಕೆ 1/4 ರಷ್ಟು (0.25) ಅಂಕಗಳನ್ನು ಕಡಿತಗೊಳಿಸಲಾಗುವುದು.

* ಉತ್ತರಿಸದೇ ಇರುವ ಪ್ರಶ್ನೆಗಳಿಗೆ ಐದನೇ ಆಯ್ಕೆ/ವೃತ್ತವನ್ನು ಶೇಡ್ ಮಾಡಲು ಕೊನೆಯ ಬೆಲ್ ಆದ ನಂತರ ಹೆಚ್ಚುವರಿಯಾಗಿ ಐದು ನಿಮಿಷಗಳನ್ನು ನೀಡಲಾಗುವುದು. ಯಾವುದೇ ಆಯ್ಕೆಯನ್ನು / ವೃತ್ತವನ್ನು ಶೇಡ್ ಮಾಡಿಲ್ಲದಿದ್ದರೆ, ಪ್ರಶ್ನೆಗೆ 1/4 ರಷ್ಟು (0.25) ಅಂಕಗಳನ್ನು ಕಡಿತಗೊಳಿಸಲಾಗುತ್ತದೆ ಎಂದು ಕೆಇಎ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+