ಸಿಇಟಿ ಆಪ್ಷನ್ ಎಂಟ್ರಿ ಗಡುವು 2 ಗಂಟೆ ತನಕ ವಿಸ್ತರಣೆ
ಬೆಂಗಳೂರು, ಜೂ. 22 : ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಆಪ್ಷನ್ ಎಂಟ್ರಿ ಪ್ರಕ್ರಿಯೆಯ ಗಡುವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿಸ್ತರಣೆ ಮಾಡಿದೆ. ಜೂ.22ರ ಸೋಮವಾರ ಮಧ್ಯಾಹ್ನ 2 ಗಂಟೆಯ ತನಕ ಅಭ್ಯರ್ಥಿಗಳು ಎಂಟ್ರಿ ಮಾಡಬಹುದಾಗಿದೆ. ಮೊದಲು ಬೆಳಗ್ಗೆ 10 ಗಂಟೆ ತನಕ ಕಾಲಾವಕಾಶ ನೀಡಲಾಗಿತ್ತು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅಭ್ಯರ್ಥಿಗಳು ಆಪ್ಷನ್ ಎಂಟ್ರಿ ಪ್ರಕ್ರಿಯೆ ನಡೆಸಬೇಕಿತ್ತು. ಆದರೆ, ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ತಾಂತ್ರಿಕ ತೊಂದರೆಯಿಂದಾಗಿ ಭಾನುವಾರ ರಾತ್ರಿ ಆಪ್ಷನ್ ಎಂಟ್ರಿ ಮಾಡಲು ಸಾಧ್ಯವಾಗಿರಲಿಲ್ಲ. [2015ರ ಸಿಇಟಿ ಫಲಿತಾಂಶ ಪ್ರಕಟ]

ಸಾವಿರಾರು ವಿದ್ಯಾರ್ಥಿಗಳು ಇನ್ನೂ ಆಪ್ಷನ್ ಎಂಟ್ರಿ ಮಾಡಬೇಕಾಗಿದ್ದು, ಅದಕ್ಕಾಗಿ ಅಂತಿಮ ಗಡುವನ್ನು ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಆದ್ದರಿಂದ, ಅವಧಿಯನ್ನು ಮಧ್ಯಾಹ್ನ 2ಗಂಟೆಯ ತನಕ ವಿಸ್ತರಣೆ ಮಾಡಲಾಗಿದೆ.[ಇಂಜಿನಿಯರಿಂಗ್, ವೈದ್ಯ ಶಿಕ್ಷಣ ಶುಲ್ಕ ದುಬಾರಿ]
ಆಪ್ಷನ್ ಎಂಟ್ರಿ ಮೂಲಕ ತಮ್ಮಿಚ್ಛೆಯ ಕಾಲೇಜು ಆಯ್ಕೆ ಮಾಡುವ ಅವಕಾಶ ಪಡೆಯಲು 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಎಂಟ್ರಿ ಮಾಡಬೇಕಾಗಿದೆ. ಆದ್ದರಿಂದ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಪ್ರಾಧಿಕಾರದ ಆಡಳಿತಾಧಿಕಾರಿ ಎಸ್.ಎನ್.ಗಂಗಾಧರಯ್ಯ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. [ಕೆಇಎ ವೆಬ್ ಸೈಟ್]












Click it and Unblock the Notifications