ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರದುರ್ಗದಿಂದ ನಟ ದೊಡ್ಡಣ್ಣ ಅಳಿಯ ಚುನಾವಣೆಗೆ ಸ್ಪರ್ಧೆ?

|
Google Oneindia Kannada News

Recommended Video

ನಟ ದೊಡ್ಡಣ್ಣ ಅಳಿಯ ಕೆ ಸಿ ವೀರೇಂದ್ರ ( ಪಪ್ಪಿ ) ಮುಂಬರುವ ಚುನಾವಣೇಲಿ ಸ್ಪರ್ಧೆ | Oneindia Kannada

ಚಿತ್ರದುರ್ಗ, ಜನವರಿ 15 : ಚಿತ್ರದುರ್ಗ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆ ಕಾವು ನಿಧಾನವಾಗಿ ಏರುತ್ತಿದೆ. ನಟ ದೊಡ್ಡಣ್ಣ ಅಳಿಯ ಮತ್ತು ಉದ್ಯಮಿ ಕೆ.ಸಿ.ವೀರೇಂದ್ರ ಅವರು ಚಿತ್ರದುರ್ಗ ನಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.

ಕೆ.ಸಿ.ವೀರೇಂದ್ರ (ಪಪ್ಪಿ) ಅವರು ಮೂಲತಃ ಚಳ್ಳಕೆರೆಯವರು. ಆದರೆ, ಚಿತ್ರದುರ್ಗ ನಗರ ಕ್ಷೇತ್ರದಿಂದ ಅವರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಉದ್ಯಮಿಯಾಗಿದ್ದು ಹಲವು ಸಮಾಜಮುಖಿ ಕಾರ್ಯದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಆದ್ದರಿಂದ, ಜಿಲ್ಲೆಯ ಜನಗರಿಗೆ ಅವರು ಚಿರಪರಿಚಿತರು.

ನಾನು ಬುರುಜನಹಟ್ಟಿಯ ಹುಡುಗಿ, ದುರ್ಗದಿಂದ ಸ್ಪರ್ಧಿಸುವ ಆಸೆ: ಭಾವನಾನಾನು ಬುರುಜನಹಟ್ಟಿಯ ಹುಡುಗಿ, ದುರ್ಗದಿಂದ ಸ್ಪರ್ಧಿಸುವ ಆಸೆ: ಭಾವನಾ

2016ರ ಡಿಸೆಂಬರ್‌ನಲ್ಲಿ ಕೆ.ಸಿ.ವೀರೇಂದ್ರ ಅವರ ನಿವಾಸದ ಮೇಲೆ ಸಿಬಿಐ ದಾಳಿ ನಡೆದಿತ್ತು. 500 ಮತ್ತು 1000 ರೂ. ನೋಟುಗಳು ನಿಷೇಧಗೊಂಡ ಬಳಿಕ ನಡೆದ ದಾಳಿಯ ವೇಳೆ ಅವರ ನಿವಾಸದಲ್ಲಿ ಲಕ್ಷಾಂತರ ರೂ. ಹೊಸ ನೋಟುಗಳು ಪತ್ತೆಯಾಗಿತ್ತು.

ಚಿತ್ರದುರ್ಗದಲ್ಲಿ ಅಮಿತ್ ಶಾ ಹೇಳಿದ್ದೇನು?ಚಿತ್ರದುರ್ಗದಲ್ಲಿ ಅಮಿತ್ ಶಾ ಹೇಳಿದ್ದೇನು?

ಚಿತ್ರದುರ್ಗ ನಗರ ಕ್ಷೇತ್ರ ಸದ್ಯ ಬಿಜೆಪಿ ವಶದಲ್ಲಿದ್ದು ಜಿ.ಎಚ್.ತಿಪ್ಪಾರೆಡ್ಡಿ ಅವರು ಶಾಸಕರು. ಜಿ.ಎಸ್.ಮಂಜುನಾಥ್ ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಕೆ.ಸಿ.ವೀರೇಂದ್ರ ಅವರು ಚುನಾವಣೆ ಕಣಕ್ಕಿಳಿದರೆ ಬಿಜೆಪಿ ಮತ್ತು ಕಾಂಗ್ರೆಸ್ ಚುನಾವಣಾ ತಂತ್ರ ಬದಲಾವಣೆ ಮಾಡಬೇಕಾಗಬಹುದು...

ಪ್ರಚಾರ ಕಾರ್ಯ ಆರಂಭ

ಪ್ರಚಾರ ಕಾರ್ಯ ಆರಂಭ

ಕೆ.ಸಿ.ವೀರೇಂದ್ರ ಅವರು 2018ರ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಹಬ್ಬಿತ್ತು. ಈಗ ಅವರು ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಈ ಬೆಳವಣಿಗೆ ಬಗ್ಗೆ ಗಮನವಿಟ್ಟಿದ್ದಾರೆ.

ಮೂರು ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿದ್ದಾರೆ

ಮೂರು ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿದ್ದಾರೆ

ಕೆ.ಸಿ.ವೀರೇಂದ್ರ ಅವರು ಚಳ್ಳಕೆರೆ, ಹಿರಿಯೂರು ಹಾಗೂ ಹೊಸದುರ್ಗ ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿದ್ದಾರೆ. ಆದ್ದರಿಂದ, ಜಿಲ್ಲೆಯಲ್ಲಿ ಪಕ್ಷದ ಬಲ ಹೆಚ್ಚಾಗಲಿದೆ. ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲು ಸಹಕಾರಿಯಾಗಲಿದೆ ಎಂಬ ಲೆಕ್ಕಾಚಾರವಿದೆ.

ಸಿಬಿಐ ಬಂಧಿಸಿತ್ತು

ಸಿಬಿಐ ಬಂಧಿಸಿತ್ತು

ಕೆ.ಸಿ.ವೀರೇಂದ್ರ ಅವರು ನಟ ದೊಡ್ಡಣ್ಣ ಅಳಿಯ. ನೋಟುಗಳು ನಿಷೇಧವಾದ ಸಂದರ್ಭದಲ್ಲಿ ಸಿಬಿಐ ವೀರೇಂದ್ರ ಅವರ ಚಳ್ಳಕೆರೆ ನಿವಾಸದ ಮೇಲೆ ದಾಳಿ ಮಾಡಿತ್ತು. ನಂತರ ಅವರನ್ನು ಬಂಧಿಸಿತ್ತು.

2013ರ ಫಲಿತಾಂಶ

2013ರ ಫಲಿತಾಂಶ

2013ರ ಚುನಾವಣೆಯಲ್ಲಿ ಚಿತ್ರದುರ್ಗ ನಗರ ಕ್ಷೇತ್ರದಲ್ಲಿ ಬಿಜೆಪಿಯ ಜಿ.ಎಚ್.ತಿಪ್ಪಾರೆಡ್ಡಿ ಅವರು 62,228 ಮತಗಳನ್ನು ಪಡೆದು ಜಯಗಳಿಸಿದ್ದರು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಬಸವರಾಜನ್ ಅವರು 35,510 ಮತ ಪಡೆದು 2ನೇ ಸ್ಥಾನಗಳಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್.ಮಂಜುನಾಥ್ ಅವರು 30,729 ಮತ ಪಡೆದಿದ್ದರು.

ಅಮಿತ್ ಶಾ ಆಗಮಿಸಿದ್ದರು

ಅಮಿತ್ ಶಾ ಆಗಮಿಸಿದ್ದರು

ಚಿತ್ರದುರ್ಗ ಜಿಲ್ಲೆಯಲ್ಲಿ ಬಿಜೆಪಿ ಶಾಸಕರು ಇರುವ ಏಕೈಕ ಕ್ಷೇತ್ರ ಚಿತ್ರದುರ್ಗ ನಗರ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಜ.10ರಂದು ಹೊಳಲ್ಕೆರೆಗೆ ಭೇಟಿ ನೀಡಿ ಸಮಾವೇಶ ಉದ್ದೇಶಿಸಿ ಮಾತನಾಡಿದ್ದರು. ಜಿಲ್ಲೆಯಲ್ಲಿ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಲು ಬಿಜೆಪಿಯೂ ತಂತ್ರ ರೂಪಿಸುತ್ತಿದೆ.

English summary
K.C.Veerendra may contest for Karnataka assembly elections 2018 from Chitradurga city assembly constituency as JDS candidate. K.C.Veerendra is businessmen and son-in-law of veteran actor Doddanna. G.H.Thippareddy (BJP) sitting MLA of the constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X