KAS Recruitment: 384 ಕೆಎಎಸ್ ಪರೀಕ್ಷೆ ಪ್ರಕ್ರಿಯೆ ಮುಂದುವರೆಸಲು ಕೆಎಟಿ ಆದೇಶ..
ಬೆಂಗಳೂರು, ಫೆಬ್ರವರಿ 04: ಕರ್ನಾಟಕದಲ್ಲಿ ಎರಡು ಭಾರಿ ಪರೀಕ್ಷೆ ನಡೆದರೂ ಲೋಪದೋಷಗಳಿಂದ ಸುದ್ದಿಯಾಗಿದ್ದ KAS 2024 ಪರೀಕ್ಷೆ ನೇಮಕಾತಿಗೆ ಅಂತಿಮ ಮುದ್ರೆ ಶೀಘ್ರವೇ ಬೀಳಲಿದೆ. ಕನ್ನಡ ಪ್ರಶ್ನೆ ಪ್ರತಿಕೆಯಲ್ಲಿ ಲೋಪದೋಷ ಹಿನ್ನೆಲೆಯಲ್ಲಿ ಕೆಲವು ಆರೋಪಿ ಎದುರಿಸಿದ್ದ ಕರ್ನಾಟಕ ಲೋಕಸೇವಾ ಆಯೋಗ (KPSC)ಕ್ಕೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (KAT) ನೇಮಕಾತಿ ಪ್ರಕ್ರಿಯೆ ಮುಂದುವರೆಸುವಂತೆ ತಿಳಿಸಿದೆ.
ಕೆಪಿಎಸ್‌ಸಿ 2024ರ ಆಗಸ್ಟ್‌ನಲ್ಲಿ ನಡೆಸಿದ್ದ ಕರ್ನಾಟಕ ಆಡಳಿತ ಸೇವೆಯ (KAS) 384 ಗೆಜೆಟೆಡ್ ಪ್ರೊಬೆಷನರ್ ಹುದ್ದೆಗಳ ನೇಮಕಕ್ಕೆ ಪರೀಕ್ಷೆ ನಡೆದಿತ್ತು. ನಂತರ ಲೋಪದೋಷನ ಹಿನ್ನೆಯಲ್ಲಿ ನಂತರ ಡಿಸೆಂಬರ್ ಅಂತ್ಯಕ್ಕೆ ಪೂರ್ವಭಾವಿ ಮರುಪರೀಕ್ಷೆ ನಡೆಯಿತು. ಈ ವೇಳೆ ಕನ್ನಡ ಪತ್ರಿಕೆಯಲ್ಲಿನ ದೋಷಗಳು ಕಂಡು ಬಂದಿದ್ದವು. ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದರು.

ಈ ಕುರಿತು ಪರಿಶೀಲನೆಗೆ ತಜ್ಞರ ಸಮಿತಿ ರಚಿಸಲಾಗಿತ್ತು. ಇದೀಗ ಕೆಎಎಸ್ ನೇಮಕಾತಿ ಪ್ರಕ್ರಿಯೆ ಮುಂದುವರೆಸಬಹುದು ಎಂದು ಕರ್ನಾಟಕ ಆಡಳಿತ ನ್ಯಾಯಮಂಡಳಿ ಕೆಪಿಎಸ್‌ಸಿಗೆ ನಿರ್ದೇಶನ ಕೊಟ್ಟಿದೆ.
ಮರುಪರೀಕ್ಷೆಯಲ್ಲೂ ಲೋಪಗಳಾಗಿರುವುದರಿಂದ ಕನ್ನಡ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಕೋರಿ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೆಎಟಿ ಈ ಆದೇಶ ನೀಡಿದೆ. ಕೆಪಿಎಸ್‌ಸಿ ಪರ ಹಾಜರಾದ ಹಿರಿಯ ಯೂಬೆನ್ ಜಾಕೋಬ್ ಅವರು, ಪ್ರಶ್ನೆ ಪತ್ರಿಕೆಯ ಕುರಿತು ಆಕ್ಷೇಪಿಸಿದರು.
ಕೆಪಿಎಸ್‌ಸಿ ನೇಮಕಾತಿ, ಲೋಪದೋಷ ಆರೋಪ ಸಂಬಂಧ ಅನೇಕ ಮನವಿ ಪತ್ರಗಳು ಕೆಪಿಎಸ್‌ಸಿ ಮತ್ತು ಸರ್ಕಾರಕ್ಕೆ ಸಲ್ಲಿಕೆಯಾಗಿವೆ. ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಪತ್ರಗಳ ಪರಿಗಣನೆಗೆ ಕೆಪಿಎಸ್‌ಸಿಗೆ ರವಾನಿಸಲಾಗಿದೆ. ಎಲ್ಲವನ್ನೂ ಪರಿಶೀಲಿಸಿ ವರದಿ ಸಲ್ಲಿಸಲು ತಜ್ಞರ ಸಮಿತಿ ರಚಿಸಲಾಗಿದೆ. ಬರಲಿರುವ ವರದಿಯನ್ನು ಕೆಪಿಎಸ್‌ಸಿ ಪರಿಶೀಲಿಸುತ್ತದೆ. ಅಲ್ಲದೇ, ಪರೀಕ್ಷೆಯ ಫಲಿತಾಂಶ ಪ್ರಕಟಗೊಳ್ಳುವುದು ಇನ್ನೂ ಕೆಲ ಸಮಯ ಹಿಡಿಯಬಹದು ಎನ್ನಲಾಗುತ್ತಿದೆ.
ಸದ್ಯ ಪರೀಕ್ಷಾ ಪ್ರಕ್ರಿಯೆ ಮುಂದುವರಿಸಲು ಅನುಮತಿ ಕೋರಲಾಗಿತ್ತು. ಇದಲ್ಲದೇ ಪರೀಕ್ಷೆ ಬರೆದ ಅಭ್ಯರ್ಥಿಗಳು ದೂರುಗಳು ಇದಲ್ಲಿ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಬಹುದು. ಮುಂದಿನ ದಿನಗಳಲ್ಲಿ ಅವುಗಳನ್ನು ಪರಿಗಣಿಸಲಾಗುತ್ತದೆ ನ್ಯಾಯಮಂಡಳಿ ಎದುರು ಅರ್ಜಿದಾರರು ಮಾಹಿತಿ ನೀಡಿದರು.












Click it and Unblock the Notifications