ಕರ್ನಾಟಕ; 10 ಸಾವಿರ ಗಡಿ ದಾಟಿದ ಕೋವಿಡ್ ಸಾವಿನ ಸಂಖ್ಯೆ

ಬೆಂಗಳೂರು, ಅಕ್ಟೋಬರ್ 22 : ಭಾರತದಲ್ಲಿಯೇ ಹೆಚ್ಚು ಕೋವಿಡ್ ಸೋಂಕಿತರು ಇರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 7,82,773. ಒಟ್ಟು ಸಾವಿನ ಸಂಖ್ಯೆ 10 ಸಾವಿರದ ಗಡಿ ದಾಟಿದೆ.

ಅಕ್ಟೋಬರ್ 21ರಂದು ಕರ್ನಾಟಕದಲ್ಲಿ 88 ಜನರು ಮೃತಪಟ್ಟಿದ್ದಾರೆ ಈ ಮೂಲಕ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ 10,696ಕ್ಕೆ ಏರಿಕೆಯಾಗಿದೆ. ಇದರಲ್ಲಿ 3,631 ಜನರು ಬೆಂಗಳೂರು ನಗರದಲ್ಲಿ ಮೃತಪಟ್ಟಿದ್ದಾರೆ.

ಕರ್ನಾಟಕದಲ್ಲಿ ಹೊಸ ಕೋವಿಡ್ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಕಳೆದ 7 ದಿನಗಳಲ್ಲಿ 47,402 ಹೊಸ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ. ರಾಜ್ಯದಲ್ಲಿ ಇದುವರೆಗೂ 69.52 ಲಕ್ಷ ಮಾದರಿಗಳ ಕೋವಿಡ್ ಪರೀಕ್ಷೆ ನಡೆಸಲಾಗಿದೆ.

Karnatakas Covid Death Toll Crossed 10 Thousand

ಬುಧವಾರ ಒಂದೇ ದಿನ ಕರ್ನಾಟಕದಲ್ಲಿ 9,289 ಜನರು ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇದುವರೆಗೂ ಗುಣಮುಖರಾದವರ ಸಂಖ್ಯೆ 6,71,618. ಕರ್ನಾಟಕದ ಸಕ್ರಿಯ ಪ್ರಕರಣಗಳ ಸಂಖ್ಯೆ 100440. 947 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್‌ನಿಂದ ಸಾವು : ಕಲಬುರಗಿಯಲ್ಲಿ ಕೋವಿಡ್‌ನಿಂದ ವೃದ್ಧ ಸಾವನ್ನಪ್ಪಿದ್ದು ಮೊದಲ ಪ್ರಕರಣವಾಗಿತ್ತು. ಈಗ ಸಾವಿನ ಸಂಖ್ಯೆ 10 ಸಾವಿರದ ಗಡಿ ದಾಟಿದೆ. ಹೆಚ್ಚು ಸೋಂಕಿತರು ಇರುವ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ ಹೆಚ್ಚಿದೆ.

ಉಳಿದಂತೆ ಬಳ್ಳಾರಿಯಲ್ಲಿ 515, ಬೆಳಗಾವಿಯಲ್ಲಿ 327, ದಕ್ಷಿಣ ಕನ್ನಡದಲ್ಲಿ 650, ಧಾರವಾಡದಲ್ಲಿ 544, ಹಾಸನದಲ್ಲಿ 361, ಕಲಬುರಗಿಯಲ್ಲಿ 304, ಮೈಸೂರಿನಲ್ಲಿ 932, ಶಿವಮೊಗ್ಗದಲ್ಲಿ 337, ತುಮಕೂರಿನಲ್ಲಿ 322 ಸಾವಿನ ಪ್ರಕರಣಗಳು ದಾಖಲಾಗಿವೆ.

ಉಡುಪಿ 176, ಉತ್ತರ ಕನ್ನಡ 151, ವಿಜಯಪುರ 188, ರಾಯಚೂರು 146, ಹಾವೇರಿ 181, ಬೀದರ್‌ನಲ್ಲಿ 163 ಜನರು ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+