ಕರ್ನಾಟಕದ 17 ಕೆರೆಗಳನ್ನು ಸ್ವಚ್ಛಗೊಳಿಸಲು ಇನ್ನೂ 559 ಕೋಟಿ ಬೇಕಂತೆ!
ಬೆಂಗಳೂರು, ಫೆಬ್ರವರಿ 1: ರಾಜ್ಯದಲ್ಲಿರುವ ಅತಿ ಹೆಚ್ಚು ಮಲಿನವಾಗಿರುವ 17 ನದಿಗಳನ್ನು ಸ್ವಚ್ಛಗೊಳಿಸಲು ಒಟ್ಟು 599 ಕೋಟಿ ರೂ ಹೆಚ್ಚುವರಿ ಹಣ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಬೆಂಗಳೂರಿನ ಅರ್ಕಾವತಿ ನದಿಯನ್ನೂ ಸೇರಿ ಒಟ್ಟು 17 ಕೆರೆಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಈಗಾಗಲೇ 829 ಕೋಟಿ ವೆಚ್ಚದಲ್ಲಿ ಯೋಜನೆ ಆರಂಭವಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ.
ಲಯನ್ಸ್ ಕ್ಲಬ್ ಸಹಯೋಗದಲ್ಲಿ ಅರ್ಕಾವತಿ ನದಿ ಸ್ವಚ್ಛಗೊಳಸುವ ಕಾರ್ಯ ಆರಂಭವಾಗಿದೆ ಇದಕ್ಕೆ ಹೆಚ್ಚುವರಿಯಾಗಿ 9ಕೋಟಿ ರೂ ಅಗತ್ಯವಿದೆ. ಮಲಪ್ರಭ ಹಾಗೂ ಯುಗಚಿ ನದಿ ಪುನರುಜ್ಜೀವನಕ್ಕೆ 97 ಹಾಗೂ 117 ಕೋಟಿ ರೂ ನೀಡಲಾಗಿದೆ.
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ 2018ರ ಸೆಪ್ಟೆಂಬರ್ ತಿಂಗಳಿನಲ್ಲಿ ನೀಡಿರುವ ವರದಿ ಪ್ರಕಾರ ದೇಶದಲ್ಲಿ ಒಟ್ಟು 351 ಮಲಿನಯುಕ್ತ ನದಿಗಳಿವೆ. ಅದರಲ್ಲಿ 17 ಕೆರೆಗಳ ಕರ್ನಾಟಕದಲ್ಲಿವೆ.

ವಿವಿಧ ಕಾರ್ಖಾನೆಗಳಿಂದ ಬರುವ ಮಲಿನಕಾರಕ ನೀರುಗಳು ನದಿಗೆ ಸೇರಿಕೊಂಡು ಇನ್ನಷ್ಟು ಮಲಿನಗೊಳಿಸುತ್ತಿವೆ ಹಾಗಾಗಿ 599 ಕೋಟಿ ರೂ ವನ್ನು ಒಳಚರಂಡಿ ಪೈಪ್‌ಗಳನ್ನು ಅಳವಡಿಸಲು ವ್ಯಯಿಸಲಾಗುತ್ತದೆ. ಒಟ್ಟು 6 ರಿಂದ 24 ತಿಂಗಳೊಳಗಾಗಿ ಕೆಲವನ್ನು ಮುಗಿಸಬೇಕಾಗುತ್ತದೆ.
ಕಳೆದ ಎರಡು ವರ್ಷದೀಮದೀಚೆಗೆ ಪದೇ ಪದೇ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಅಷ್ಟೇ ಅಲ್ಲದೆ ನೊರೆ ವಿಪರೀತವಾಗಿದೆ ಇದಕ್ಕೆ ಪರಿಹಾರ ಕಂಡು ಹಿಡಿಯಬೇಕಿದ್ದರ ಮೊದಲು ನೊರೆಯನ್ನು ಕಡಿಮೆ ಮಾಡಬೇಕಾಗಿದೆ. ನೊರೆ ಕಡಿಮೆ ಮಾಡಬೇಕಾದರೆ ಸುತ್ತಮುತ್ತಲಿನ ಕಾರ್ಖಾನೆಗಳಿಂದ ಬರುವ ಮಲಿನ ನೀರನ್ನು ತಡೆಯಬೇಕಿದೆ. ಇದಕ್ಕೆ ಕೆರೆಯ ಹೂಳು ತೆಗೆದು ಅದರ ಪುನರುಜ್ಜೀವನ ಮಾಡಲೇ ಬೇಕಾಗಿದೆ.
ಕೆರೆಯನ್ನು ಸ್ವಚ್ಛಗೊಳಿಸಲು ಬಿಡಿಎ 2020ರ ಗುರಿ ಇಟ್ಟುಕೊಂಡಿದೆ. ಒಳಚರಂಡಿ ಪೈಪ್ ಗಳ ನಿರ್ಮಾಣವಾದ ಬಳಿಕ ಕಾರ್ಯ ಮುಗಿಯಲಿದೆ.
ಈ ಮೊದಲು ಬಿಡಿಎ ಅಧಿಕಾರಿಗಳು ಬೆಳ್ಳಂದೂರು ಕೆರೆಯನ್ನು ಸ್ವಚ್ಛಗೊಳಿಸಲು 800-1000 ಕೋಟಿ ವೆಚ್ಚ ತಗುಲಬಹುದು ಎಂದು ಹೇಳಿದ್ದರು ಆದರೆ ಏಜೆನ್ಸಿ ಹೇಳುವ ಪ್ರಕಾರ 665 ಕೋಟಿ ರೂ ವೆಚ್ಚವಾಗಲಿದೆ. 42.3 ಕೋಟಿ ವೆಚ್ಚದಲ್ಲಿ ಬೇಲಿ ಹಾಕುವುದು, ಸ್ಪ್ರಿಂಕ್ಲರ್ ಅವಡಿಸಲಾಗುತ್ತದೆ.












Click it and Unblock the Notifications