Karnataka Weather: ನಾಳೆಯಿಂದ ಏಪ್ರಿಲ್ 8ರವರೆಗೆ ರಾಜ್ಯದ ಈ ಪ್ರದೇಶದಲ್ಲಿ ಮಳೆ, ಎಲ್ಲೆಲ್ಲೆ? ತಾಪಮಾನ ಎಷ್ಟು? ತಿಳಿಯಿರಿ

ಬೆಂಗಳೂರು, ಏಪ್ರೀಲ್ 03: ಒಣ ಹವೆ ಮುಂದುವರೆದಿರುವ ಕರ್ನಾಟಕದ ಉತ್ತರ ಒಳನಾಡು ಮತ್ತು ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಸೇರಿದಂತೆ ರಾಜ್ಯದ ವಿವಿಧೆಡೆ ನಾಳೆ ಮಂಗಳವಾರ ಏಪ್ರಿಲ್ 4ರಿಂದ ಐದು ದಿನ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕಕ್ಕೆ ತುಸು ವಿರಾಮ ನೀಡಿದ್ದ ಮಳೆರಾಯ ಮತ್ತೆ ಅಬ್ಬರಿಸಲು ಸಜ್ಜಾಗಿದ್ದರೆ. ಈ ಸಲ ಉತ್ತರ ಒಳನಾಡು ಸೇರಿದಂತೆ ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ವ್ಯಾಪಕ ಮಳೆ ಆಗಲಿದೆ. ಏಪ್ರಿಲ್ 5ರವರೆಗೆ ಕರಾವಳಿ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ. ಆದರೆ ದಕ್ಷಿಣ ಒಳನಾಡಿಗೂ 05 ದಿನವೂ ಬಿರುಸಿನ ಮಳೆ ಬರಲಿದೆ.

Karnataka Weather: Light To Moderate Rain Expected Till April 8 In Karnataka

ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಾಮರಾಜನಗರ, ರಾಮನಗರ ಮತ್ತು ಕೋಲಾರ, ಕೊಡಗು, ಮೈಸೂರು ಜಿಲ್ಲೆಗಳ ಹಲವೆಡೆ ದಿನ ಬಿಟ್ಟು ದಿನ ಮುಂದಿನ ಏಪ್ರಿಲ್ 8ರವರೆಗೆ ಮಳೆ ಬರಲಿದೆ. ಇಷ್ಟು ಜಿಲ್ಲೆಗಳಲ್ಲಿ ನಿತ್ಯ ಬಿಸಿಲಿನ ದರ್ಶನವಿದ್ದರೂ ಸಹಿತ ಮಬ್ಬು ವಾತಾವರಣವು ಕಂಡು ಬರಲಿದೆ. ಸಂಜೆ ವೇಳೆಗೆ ಬಿಸಿಲು ಮರೆಯಾಗಿ ಗುಡುಗು ಮಿಂಚು ಸಹಿತ ಜೋರು ಮಳೆ ಅಬ್ಬರಿಸಲಿದೆ. ಗಾಳಿಯು ಸಹ ಈ ಅವಧಿಯಲ್ಲಿ ವೇಗವಾಗಿ ಬೀಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಕರ್ನಾಟಕ ಕೇಂದ್ರ ಮಾಹಿತಿ ನೀಡಿದೆ.

ಏಪ್ರಿಲ್ 6 ರಿಂದ ಮೂರು ದಿನ ಉತ್ತರ ಒಳನಾಡಿನ ಬೀದರ್, ಬಾಗಲಕೋಟೆ, ಬೆಳಗಾವಿ, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಹಗುರ ಇಲ್ಲವೇ ಸಾಧಾರಣವಾಗಿ ಮಳೆ ಸುರಿಯಲಿದೆ. ಇನ್ನೂ ಕರಾವಳಿ ಭಾಗದಲ್ಲಿ ಏಪ್ರಿಲ್ 7ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಮಳೆ ಬಂದರೆ, ಮರುದಿನ ಏಪ್ರಿಲ್ 8 ರಂದು ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ವರುಣನ ದರ್ಶನವಾಗಲಿದೆ.

Karnataka Weather: Light To Moderate Rain Expected Till April 8 In Karnataka

ದಕ್ಷಿಣ ಒಳನಾಡಿನ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದ ವಿವಿಧೆಡೆ ಭಾನುವಾರದಿಂದಲೇ ಮಳೆಯ ವಾತಾವರಣ ಭಾಸವಾಗುತ್ತಿದೆ. ಉಷ್ಣಾಂದಲ್ಲಿ ತುಸು ಇಳಿಕೆಯಾಗಿದೆ. ಕಳೆದ 24ಗಂಟೆಯಲ್ಲಿ ರಾಜ್ಯದ ಅತ್ಯಂತ ಗರಿಷ್ಠ ತಾಪಮಾನವು ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್, ರಾಯಚೂರು 38.2 ಡಿಗ್ರಿ ಸೆಲ್ಸಿಯಸ್, ಚಿಕ್ಕನಹಳ್ಳಿ 37 ಡಿಗ್ರಿ ಸೆಲ್ಸಿಯಸ್, ಗದಗ 37.1 ಡಿಗ್ರಿ ಸೆಲ್ಸಿಯಸ್, ವಿಜಯಪುರ 37 ಡಿಗ್ರಿ ಸೆಲ್ಸಿಯಸ್, ಬಳ್ಳಾರಿ 36.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮಡಿಕೇರಿಯಲ್ಲಿ 13.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಬೆಂಗಳೂರು ಮಳೆ ಮುನ್ಸೂಚನೆ ಹೀಗಿದೆ

ಬೆಂಗಳೂರಲ್ಲಿ ಭಾನುವಾರದಿಂದಲೇ ಮೋಡ ಕವಿದ ಮಳೆಯ ವಾತಾವರಣ ಕಂಡು ಬಂದಿದೆ. ನಗರದಲ್ಲಿ ಮುಂದಿನ 48 ಗಂಟೆ ಅಂದರೆ ಏಪ್ರಿಲ್ 5ರವರೆಗೆ ಚದುರಿದಂತೆ, ಕೆಲವೆಡೆ ಗುಡುಗು, ಮಿಂಚು ಗಾಳಿ ಸಹಿತ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ. ನಂತರ ಏಪ್ರಿಲ್ 6 ರಿಂದ ಎಂದಿನಂತೆ ಬಿಸಿಲಿನ ವಾತಾವರಣ ಮುಂದುವರಿಯಲಿದೆ. ಮಳೆ ನಿಗಿದಯಾದ ಎರಡು ದಿನ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇದ್ದರೆ, ನಂತರ 35 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ಕ್ರಮವಾಗಿ 22ಮತ್ತು 23 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆ ಇದೆ. ಇದರ ಹೊರತಾಗಿ ಯಾವುದೇ ಗಂಭೀರ ಮುನ್ಸೂಚನೆಗಳು ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. g

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+