Karnataka Weather: ಕೈಕೊಟ್ಟ ಮುಂಗಾರು, ರಾಜ್ಯದಲ್ಲಿ ನವೆಂಬರ್‌ನಲ್ಲಾದ್ರೂ ಚುರುಕಾಗುತ್ತಾ ಹಿಂಗಾರು?
ಕರ್ನಾಟಕ, ಅಕ್ಟೋಬರ್, 25: ಮುಂಗಾರು ಕೈಕೊಟ್ಟ ಪರಿಣಾಮ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ಧಗೆ ಹೆಚ್ಚಾಗುತ್ತಲೇ ಇದೆ. ಅಲ್ಲದೆ ರೈತರು ಬೆಳೆದ ಬೆಳೆಗಳೆಲ್ಲವೂ ಸೂರ್ಯನ ಶಾಖಕ್ಕೆ ಸುಟ್ಟು ಹೋಗುತ್ತಿವೆ. ಮತ್ತೊಂದೆಡೆ ಇದೀಗ ಹಿಂಗಾರು ಆರಂಭವಾಗಿದ್ದು, ಕೆಲವೇ ಜಿಲ್ಲೆಗಳಲ್ಲಿ ಮಾತ್ರ ಆಗಾಗ ಜಿನುಗು ಮಳೆಯಾಗುತ್ತಿದೆ. ಇನ್ನು ನವೆಂಬರ್ ತಿಂಗಳ ಆರಂಭದಿಂದ ಬಹುತೇಕ ಜಿಲ್ಲೆಗಳಲ್ಲಿ ಮಾತ್ರ ಮಳೆಯಾಗುವ ಮುನ್ಸೂಚನೆ ಇದೆ.
ರಾಜ್ಯ ರಾಜಧಾನಿಯಲ್ಲಿ ಕಳೆದ ಒಂದು ವಾರದಿಂದಲೂ ಬೆಳಗ್ಗೆಯಿಂದಲೂ ಸಂಜೆ ಆದರೂ ಬಿಸಿಲಿನ ವಾತಾವರಣವೇ ಮುಂದುವರೆದಿದೆ. ಇನ್ನು ಇಂದು ಕೂಡ ನಗರದಲ್ಲಿ ತಾಪಮಾನ ಹೆಚ್ಚಿದ್ದು, ಸಂಜೆ ವೇಳೆಗೆ ಮೋಡ ಮುಚ್ಚಿದ ವಾತಾವರಣ ಇರಲಿದ್ದು, ಮಳೆ ಬೀಳುವ ಮುನ್ಸೂಚನೆ ಇದೆ. ಇನ್ನು ಮೈಸೂರು, ಕೊಡಗು, ಮಂಗಳೂರು, ಕಾರವಾರ ಜಿಲ್ಲೆಯ ಒಂದೆರಡು ಕಡೆ ಮಾತ್ರ ಮಳೆ ಬೀಳುವ ಸಾಧ್ಯತೆಯಿದೆ. ಇನ್ನುಳಿದ ಕಡೆಗಳಲ್ಲಿ ತಾಪಮಾನದ ಪ್ರಮಾಣ ನಿನ್ನೆಗಿಂತಲೂ ಹೆಚ್ಚು ದಾಖಲಾಗುವ ಸಾಧ್ಯತೆಯಿದೆ.

ನವೆಂಬರ್ ಆರಂಭದಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ತುಮಕೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ರಾಮನಗರ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಕೋಲಾರ, ಧಾರವಾಡ, ಉಡುಪಿ ಸಾಧಾರಣ ಮಳೆಯಾಗಲಿದ್ದು, ಇನ್ನುಳಿದ ಜಿಲ್ಲೆಗಳಲ್ಲಿ ತಾಪಮಾನ ಪ್ರಮಾಣ ತುಸು ಏರಿಕೆಯಾಗುವ ಮುನ್ಸೂಚನೆ ಇದೆ.
ಒಂದು ವೇಳೆ ಈ ಮುನ್ಸೂಚನೆ ಪ್ರಕಾರ ನವೆಂಬರ್ ಆರಂಭದಿಂದಲಾದ್ರೂ ರಾಜ್ಯದಲ್ಲಿ ಮಳೆಯಾದ್ರೆ, ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಸುಧಾರಿಸಿದಂತಾಗುತ್ತದೆ. ಅಲ್ಲದೆ ಕೆರೆ, ಬಾವಿ ಸೇರಿದಂತೆ ಇನ್ನುಳಿದ ಜಲ ಮೂಲಗಳಿಗೆ ಜೀವಕಳೆ ಬಂದಾಗುತ್ತದೆ. ಇಲ್ಲದಿದ್ರೆ ಸಂಪೂರ್ಣ ಬರದ ವಾತಾವರಣ ನಿರ್ಮಾಣ ಆಗಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಈ ಬಾರಿ ಮಳೆಕೈಕೊಟ್ಟ ಕಾರಣ ಬಹುತೇಕ ಜಿಲ್ಲೆಗಳಲ್ಲಿ ರೈತರ ಪಾಡು ಹೇಳತೀರದಾಗಿದೆ. ಈಗಾಗಲೇ ಕೇಂದ್ರ ಬರ ಅಧ್ಯಯನ ತಂಡವು ಬರ ತಾಲೂಕುಗಳನ್ನು ಘೋಷಿಸಿದಂತೆ ಪರಿಹಾರದ ಹಣವೂ ಕೂಡ ಬೇಗನೇ ರೈತರ ಕೈಸೇರುವಂತೆ ಮಾಡುವ ಕೆಲಸ ಆಗಬೇಕು ಎನ್ನುವ ಒತ್ತಾಯಗಳು ಕೂಡ ಕೇಳಿಬರುತ್ತಿವೆ. ಈಗಾಗಗಲೇ ತಮಿಳುನಾಡು, ಕೇರಣ ಭಾಗದಲ್ಲಿ ಮಳೆ ಚುರುಕಾಗಿದ್ದು, ಇದೇ ಮಳೆ ಕರ್ನಾಕಕ್ಕೂ ತಿರುಗುತ್ತಾ ಕಾದುನೋಡಬೇಕಿದೆ.












Click it and Unblock the Notifications