Karnataka weather: ಮುನಿಸಿಕೊಂಡಿರುವ ಮಳೆರಾಯ ಏಪ್ರಿಲ್‌ 29ರ ಬಳಿಕ ಮತ್ತೆ ಅಬ್ಬರಿಸಲಿದ್ದಾನಾ? ಹವಾಮಾನ ಇಲಾಖೆ ಮುನ್ಸೂಚನೆ ಏನು?

Karnataka weather: ಕಳೆದ ವಾರ ರಾಜ್ಯದ ಬಹುತೇಕ ಕಡೆ ಹಾಗೂ ಈ ವಾರದ ಒಂದೆರಡು ದಿನಗಳ ಕಾಲ ಕೆಲವೆಡೆ ಮಾತ್ರ ವರುಣ ಕೃಪೆ ತೋರಿದ್ದಾನೆ. ಇದನ್ನು ಬಿಟ್ಟರೆ ಮತ್ತೆ ಎಲ್ಲಿಯೂ ಮಳೆಯಾಗಿಲ್ಲ ಎನ್ನುವ ಮಾಹಿತಿ ಇದೆ. ಆದರೆ ತಾಪಮಾನ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ. ಇದರ ನಡುವೆಯೂ ಏಪ್ರಿಲ್‌ 29ರ ಬಳಿಕ ಹಲವು ಭಾಗಗಳಲ್ಲಿ ಮಳೆರಾಯ ಮತ್ತೆ ಕರುಣೆ ತೋರಲಿದ್ದಾನೆ ಎನ್ನುವ ಮುನ್ಸೂಚನೆ ಇದೆ.

ರಾಜ್ಯದ ಬಹುತೇಕ ಭಾಗಗಳಲ್ಲಿ ದಿನದಿಂದ ದಿನಕ್ಕೆ ತಾಪಮಾನ ಪ್ರಮಾಣದಲ್ಲಿ ಏರುತ್ತಲೇ ಸಾಗಿದೆ. ಇಂದಿನಿಂದ (ಏಪ್ರಿಲ್‌ 27) ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ಮುಂದಿನ 3 ದಿನಗಳ ಕಾಲ ಬಿಸಿಲಿನ ವಾತಾವರಣವೇ ಒಣಹವೆ ಮುಂದುವರೆಯಲಿದ್ದು, ತಾಪಮಾನದಲ್ಲಿ ಸಾಮಾನ್ಯ ದಿನಗಳಿಗಿಂತ 5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶ ರವಾನಿಸಿದೆ.

Karnataka weather Heavy rainfall forecast in state after April 29

ಇನ್ನು ಬೆಂಗಳೂರಿನಲ್ಲಿ ನಿನ್ನೆ (ಏಪ್ರಿಲ್‌ 26) ಬಿಸಿಲಿನ ವಾತಾವರಣವೇ ಮುಂದುವರೆದಿತ್ತು. ಹಾಗೆಯೇ ಇಂದು ಸಹ ನಗರದಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದ್ದು, ಕನಿಷ್ಠ ತಾಪಮಾನದಲ್ಲಿ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮತ್ತೊಂದೆಡೆ ಮಕ್ಕಳು, ವೃದ್ಧರು ಬಿಸಿಲಿನ ಪ್ರಮಾಣ ಹೆಚ್ಚಿರುವುದರಿಂದ ಮೆನೆಯಿಂದ ಹೊರಬರದಂತೆ ಆರೋಗ್ಯ ಇಲಾಖೆಯು ಮಹತ್ವದ ಸಂದೇಶವನ್ನು ರವಾನಿಸಿದೆ.

ಈಗಾಗಲೇ ಬಿಸಿಲಿನ ಬೇಗೆಯಿಂದ ಬೇಸತ್ತು ಹೋಗಿದ್ದಾರೆ. ಇದರ ನಡುವೆಯೂ ಹವಾಮಾನ ಇಲಾಖೆ ಏಪ್ರಿಲ್ 29ರಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ಮಳೆ ಸುರಿಯಲಿದೆ ಎಂದು ಮುನ್ಸೂಚನೆ ನೀಡಿದೆ. ಹಾಸನ, ಗದಗ, ಕೊಡಗು, ದಾವಣಗೆರೆ, ತುಮಕೂರು, ಮೈಸೂರು, ಮಂಡ್ಯ, ಕಲಬುರಗಿ, ಬಾಗಲಕೋಟೆ, ವಿಜಯಪುರ, ಯಾದಗಿರಿ, ಬೀದರ್, ಕೊಪ್ಪಳ, ಚಿತ್ರದುರ್ಗ, ರಾಯಚೂರು ಜಿಲ್ಲೆಗಳಲ್ಲೂ ಮಳೆ ಬೀಳಲಿದೆ ಎಂದು ತಿಳಿಸಿದೆ.

ಇನ್ನು ರಾಜ್ಯ ರಾಜಧಾನಿಯ ಕೆಲವೆಡೆ ಮಾತ್ರ ಕಳೆದ ವಾರ ಮಳೆಯಾಗುತ್ತು. ಇದನ್ನು ಹರತುಪಡಿಸಿದರೆ ಪ್ರತಿದಿನವೂ ತಾಪಮಾನ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು, ಇದರಿಂದ ನಗರದ ಜನರು ಮನೆಯಿಂದ ಹೊರಬರಲು ಯೋಚನೆ ಮಾಡುವಂತಹ ಪರಿಸ್ಥತಿ ನಿರ್ಮಾಣವಾಗಿದೆ. ಇನ್ನು ಮಾರ್ಚ್ 29ರಂದು 36.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದ್ದು, ನಂತರ, ನಗರದಲ್ಲಿ ಗರಿಷ್ಠ ತಾಪಮಾನ 37.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಒಟ್ಟಿನಲ್ಲಿ ಬಿಸಿಲಿನ ಬೇಗೆಯಿಂದ ಬೆಂದಿರುವ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಇನ್ನುಳಿದ ಜಿಲ್ಲೆಗಳಿಗೆ ಏಪ್ರಿಲ್‌ 29ರ ನಂತರವಾದ್ರೂ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಮಳೆರಾಯ ತಂಪೆರೆಯಲಿದ್ದಾನಾ ಎಂದು ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+