Karnataka Weather: ರಾಜ್ಯದ ಅರ್ಧ ಜಿಲ್ಲೆಗಳಲ್ಲಿ 3 ದಿನ ಸಾಧಾರಣ ಮಳೆ, ಉಳಿದೆಡೆ ಬಿಸಿಲು ಸಾಧ್ಯತೆ, ಬೆಂಗಳೂರು ಹವಾಮಾನ
ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ದುರ್ಬಲಗೊಂಡಿದೆ. ಕಳೆದ 24ಗಂಟೆಗಳಲ್ಲಿ ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ 117 ಮಿಲಿ ಮೀಟರ್ ಮಳೆ ಆಗಿದೆ. ಮುಂದಿನ ಮೂರು ದಿನ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಹುಗರದಿಂದ ಸಾಧಾರಣ ಮಳೆ ನಿರೀಕ್ಷೆ ಇದೆ. ಕೆಲವು ಜಿಲ್ಲೆಗಳಲ್ಲಿ ಜೋರು ಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಳೆ ದುರ್ಬಲವಾಗಿದ್ದರೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಕ್ರಿಯವಾಗಿದೆ. ಇದಕ್ಕೆ ಬದಲಾದ ಹವಾಮಾನ ವೈಪರೀತ್ಯ, ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತ ಪ್ರಸರಣ, ಅರಬ್ಬಿ ಸಮುದ್ರ ಮೇಲಿನ ಟ್ರಫ್ ಕಾರಣ ಎನ್ನಲಾಗಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಒಣಹವೆಯ ವಾತಾವರಣ ಕಂಡು ಬರುತ್ತಿದ್ದು, ಹಲವು ಜಿಲ್ಲೆಗಳು ಮಾತ್ರವೇ ಮಳೆ ಕಾಣುತ್ತಿವೆ.

ಇಲ್ಲಿ ಗುಡುಗು, ಗಾಳಿ ಸಹಿತ ಮಳೆ ನಿರೀಕ್ಷೆ
ಐಎಂಡಿ ಪ್ರಕಾರ, ಮುಂದಿನ ಮೂರು ದಿನ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನ, ಚಾಮರಾಜನಗರ, ಮೈಸೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ವ್ಯಾಪ್ತಿಯ ಕೆಲವೆಡೆ ಗಂಟೆಗೆ 30-40 ಕಿಲೋ ಮೀಟರ್ ವೇಗದಲ್ಲಿ ಗಾಳಿ ಸಹಿತ ವ್ಯಾಪಕ ಮಳೆ ಆಗಲಿದೆ.
ಇನ್ನು ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ರಾಯಚೂರು, ಬಾಗಲಕೋಟೆ, ಬೀದರ್ ಜಿಲ್ಲೆಗಳ ಕೆಲವು ಪ್ರತ್ಯೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗಲಿದೆ. ಇಲ್ಲಿಗುಡುಗು, ಮಿಂಚು ಸಹಿತ ಮಳೆ ನಿರೀಕ್ಷೆ ಇದೆ ಹವಾಮಾನ ಇಲಾಖೆಯ ವರದಿಯಲ್ಲಿ ತಿಳಿಸಲಾಗಿದೆ.
ಬೇಸಿಗೆ ಬಿಸಿಲಿನ ಅನುಭವ
ಇದರೊಂದಿಗೆ ವಿವಿಧ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಏರಿಕೆ ಅಗಿದೆ. ಕರಾವಳಿ ಉಡುಪಿ, ಕಾರವಾರ, ಕಲಬುರಗಿ, ಬೀದರ್, ರಾಯಚೂರು, ಹಾವೇರಿ, ಬೆಳಗಾವಿ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಹಗಲು ಹೊತ್ತಿನಲ್ಲಿ ಜನರು ಬೇಸಿಗೆಯ ಬಿಸಿ ವಾತಾವರಣ ಅನುಭವಿಸುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಸಂಜೆ 5 ಗಂಟೆಯಾದರೂ ಬಿಸಿಲಿನ ಚುರುಕು ಕಡಿಮೆ ಆಗುತ್ತಿಲ್ಲ. ಜನರು ಬೇಸಿಗೆ ಮುನ್ನ ಮಳೆಗಾಲ ಬಿಸಿಲಿಗೆ ಹೈರಾಣಾಗಿದ್ದಾರೆ.
ಬೆಂಗಳೂರು ಹವಾಮಾನ ವರದಿ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಮೂರು ದಿನ (ಸೆಪ್ಟೆಂಬರ್ 21) ಹಗಲು ಸ್ವಚ್ಚ ನೀಲಿ ಆಕಾಶ ಇರಲಿದ್ದು, ಬಿಸಿಲು ಹೆಚ್ಚಿರಲಿದೆ. ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 21-22 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದ್ದು, ಕೆಲವೆಡೆ ಮಬ್ಬು ವಾತಾವರಣ ನಿರ್ಮಾಣದ ಸಂಭವವು ಇದೆ. ಸದ್ಯಕ್ಕೆ ಬೆಂಗಳೂರಿಗೆ ಭಾರೀ ಮಳೆ ಮುನ್ಸೂಚನೆ ಇಲ್ಲ.
ನೆನ್ನೆ ಎಲ್ಲೆಲ್ಲಿ ಎಷ್ಟು ಮಳೆ ಆಗಿದೆ?
ಸೆಪ್ಟಂಬರ್ 17ರಿಂದ 18ರ ಬೆಳಗ್ಗೆಗೆ ವರೆಗಿನ 24 ಗಂಟೆಗಳಲ್ಲಿ ಚಾಮರಾಜನಗರ ಹನೂರಿನಲ್ಲಿ ಅತ್ಯಧಿಕ ಮಳೆ ಆಗಿದ್ದು, ಉಳಿದಂತೆ ರಾಮನಗರದ ಕನಕಪುರ ವ್ಯಾಪ್ತಿಯಲ್ಲಿ 112 ಮಿಲಿ ಮೀಟರ್, ಬೆಂಗಳೂರು ನಗರದ ಬೇಗೂರು ಮತ್ತು ಉಡುಪಿಯಲ್ಲಿ 37 ಮಿಲಿ ಮೀಟರ್, ಮೈಸೂರಿನ ಬನ್ನೂರಿನಲ್ಲಿ 57 ಮಿಲಿ ಮೀಟರ್, ಅರಸಿಕೆರೆ 55 ಮಿಲಿ ಮೀಟರ್, ತಿಪಟೂರಿನಲ್ಲಿ 54 ಮಿಲಿ ಮೀಟರ್, ಮಂಡ್ಯದ ನಾಗಮಂಗಲ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರಿನಲ್ಲಿ ತಲಾ 48 ಮಿಲಿ ಮೀಟರ್ ಮಳೆ ಆಗಿದೆ ಎಂದು ಐಎಂಡಿ ವರದಿ ಆಗಿದೆ.


Click it and Unblock the Notifications
