ಕರ್ನಾಟಕ ನೋಂದಣಿಯ ವಾಹನಗಳಿಗೆ ಬೇರೆ ರಾಜ್ಯಗಳಲ್ಲಿ ₹10,000 ದಂಡ, ಕಾರಣ ಇಲ್ಲಿದೆ
ಕರ್ನಾಟಕದಲ್ಲಿ ನೋಂದಣಿಯಾಗಿರುವ (KA) ವಾಹನಗಳಿಗೆ ಬೇರೆ ರಾಜ್ಯಗಳಲ್ಲಿ ಭಾರೀ ಮೊತ್ತದ ದಂಡದ ಅಸ್ತ್ರ ಪ್ರಯೋಗಿಸಲಾಗುತ್ತಿದೆ. ಸಾಮಾನ್ಯವಾಗಿ ಪ್ರವಾಸ, ಇನ್ನಿತರೆ ಉದ್ದೇಶಗಳಿಗೆ ಬೇರೆ ರಾಜ್ಯಗಳಿಗೆ ತೆರಳುವ ಕರ್ನಾಟಕದ ವಾಹನಗಳಿಗೆ ಈ ಸಮಸ್ಯೆ ಎದುರಾಗಿದೆ. ಒಡಿಶಾ ಮತ್ತು ಗೋವಾ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈ ಪ್ರಕರಣಗಳು ಬೆಳಕಿಗೆ ಬಂದಿವೆ. ಎಲ್ಲ ದಾಖಲೆ ಇದ್ದರೂ ಸಹ ಕರ್ನಾಟಕದ ಮಾಹನ ಮಾಲೀಕರು ಭಾರೀ ದಂಡ ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಸಲಿಗೆ ಈ ಸಮಸ್ಯೆಗೆ ಕಾರಣವೇನು ಎನ್ನುವ ವಿವರವನ್ನು ಇಲ್ಲಿ ಓದಿ.
ಇತ್ತೀಚೆಗೆ ಹೊರ ರಾಜ್ಯಗಳಲ್ಲಿ ಕರ್ನಾಟಕದ ಜನರು ಈ ಸಮಸ್ಯೆಯನ್ನು ಎದುರಿಸಿದ್ದಾರೆ. ಒಡಿಶಾ ಮತ್ತು ಗೋವಾದಂತಹ ರಾಜ್ಯಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಚಾಲಿತ ಸಂಚಾರ ಜಾರಿ ಕ್ಯಾಮೆರಾಗಳು ಸ್ವಯಂಚಾಲಿತವಾಗಿ ಇ-ಚಲನ್‌ಗಳನ್ನು ರಚಿಸುತ್ತಿವೆ. ವಾಹನ ಚಾಲಕರು ಕರ್ನಾಟಕದಲ್ಲಿ ನೀಡಲಾದ ಮಾನ್ಯ ಪ್ರಮಾಣಪತ್ರಗಳನ್ನು ಹೊಂದಿದ್ದರೂ, ಬೇರೆ ರಾಜ್ಯಗಳಿಗೆ ಹೋದಾಗ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಅವಧಿ ಮುಗಿದಿದೆ ಎಂದು ದಂಡ ವಿಧಿಸಲಾಗುತ್ತಿದೆ.

ಪರಿವಾಹನ್ ಪೋರ್ಟಲ್‌ನಿಂದ ತೊಡಕು
ಕೇಂದ್ರದ ವಾಹನ (ಪರಿವಾಹನ್) ಪೋರ್ಟಲ್‌ಗೆ ರಾಜ್ಯ ಸರ್ಕಾರದ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರದ (ಪಿಯುಸಿಸಿ) ಡೇಟಾಬೇಸ್ ಲಿಂಕ್ ಆಗದ ಕಾರಣ, ಇತರ ರಾಜ್ಯಗಳಲ್ಲಿ ಕರ್ನಾಟಕ ನೋಂದಣಿಯ ವಾಹನಗಳಿಗೆ 10,000 ರೂಪಾಯಿಗಳವರೆಗೆ ದಂಡ ವಿಧಿಸಲಾಗುತ್ತಿದೆ. ಏಕೆಂದರೆ ಮೋಟಾರು ವಾಹನ ಕಾಯ್ದೆಯಡಿ ಮಾನ್ಯ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವಿಲ್ಲದೆ ವಾಹನ ಚಲಾಯಿಸಿದರೆ, 10,000 ರೂ. ದಂಡ ವಿಧಿಸಲು ಅವಕಾಶವಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.
"ನನ್ನ ಕರ್ನಾಟಕ ನೋಂದಣಿಯ ವಾಹನಕ್ಕೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಮಾಡಿಸಿಕೊಂಡಿದ್ದರೂ ಅದು ಎಂ-ಪರಿವಾಹನ್‌ನಲ್ಲಿ ತೋರಿಸಲ್ಪಡುತ್ತಿರಲಿಲ್ಲ. ಹೀಗಾಗಿ ನಾವು ದಂಡ ಕಟ್ಟಬೇಕಾಯಿತು ಎಂದು ಕೆಲ ಮಾಹನ ಮಾಲೀಕರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಕರ್ನಾಟಕದಲ್ಲಿ ನೀಡಿದ ಪ್ರಮಾಣಪತ್ರ ಹೊಂದಿದ್ದರೂ ಬೆಂಗಳೂರಿನಿಂದ ಒಡಿಶಾಗೆ ಚಾಲನೆ ಮಾಡುವಾಗ 20,000 ರೂಪಾಯಿ ದಂಡ ವಿಧಿಸಲಾಗಿದೆ. ನಾನು ಡಿಸೆಂಬರ್ 2026ರವರೆಗೆ ಮಾನ್ಯವಾಗಿರುವ ಎಲ್ಲ ದಾಖಲೆಗಳೊಂದಿಗೆ ಚಾಲನೆ ಮಾಡುತ್ತಿದ್ದೆ. ಆದರೆ ತಪ್ಪು ಚಲನ್‌ಗಳನ್ನು ನೀಡಲಾಗಿದೆ" ಎಂದು ದೂರಿದ್ದಾರೆ. ಒಡಿಶಾದ ಕ್ಯಾಮೆರಾಗಳು ಕರ್ನಾಟಕದ ಪಿಯುಸಿಸಿಗಳನ್ನು ಗುರುತಿಸುವುದಿಲ್ಲ. ಮಾನ್ಯವಾದ ಪ್ರಮಾಣಪತ್ರಗಳ ಹೊರತಾಗಿಯೂ ಭೇಟಿ ನೀಡುವ ವಾಹನ ಚಾಲಕರಿಗೆ ಇ-ಚಲನ್‌ಗಳನ್ನು ನೀಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಾರಿಗೆ ಸಚಿವರ ಪ್ರತಿಕ್ರಿಯೆ ಏನು?
ಇತರ ರಾಜ್ಯಗಳಲ್ಲಿ ಈಗಾಗಲೇ ಎಐ ಕ್ಯಾಮೆರಾಗಳು ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವನ್ನು ಪರಿಶೀಲಿಸುತ್ತಿದ್ದು, ಇದನ್ನು ಪರಿವಾಹನ್ ಡೇಟಾಬೇಸ್ ಮೂಲಕವೇ ಮಾಡುತ್ತಿದೆ. ಆದರೆ ಕರ್ನಾಟಕದ ದತ್ತಾಂಶ ಪರಿವಾಹನ್‌ನಲ್ಲಿ ಪೋರ್ಟಲ್‌ನಲ್ಲಿ ಇಲ್ಲದ ಕಾರಣ ರಾಜ್ಯದ ವಾಹನಗಳು ಹೊರರಾಜ್ಯಗಳಲ್ಲಿ ಭಾರೀ ದಂಡ ಕಟ್ಟುವ ಪರಿಸ್ಥಿತಿ ಎದುರಾಗಿದೆ. ಕರ್ನಾಟಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಈ ವಿಷಯವನ್ನು ಸಾರಿಗೆ ಆಯುಕ್ತರೊಂದಿಗೆ ಚರ್ಚಿಸಿ, ಆ ಸಮಸ್ಯೆ ಸರಿಪಡಿಸುವುದಾಗಿ ತಿಳಿಸಿದ್ದಾರೆ.
ಇತ್ತೀಚೆಗೆ ವಿವಿಧ ರಾಜ್ಯಗಳ ಟೋಲ್‌ಗಳಲ್ಲಿ ಎಐ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದು ಕೇವಲ ಸಂಚಾರಿ ನಿಯಮಗಳ ಉಲ್ಲಂಘನೆ ಮಾತ್ರವಲ್ಲ. ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವನ್ನೂ ಸಹ ಪರಿಶೀಲಿಸುವ ಸಾಮರ್ಥ್ಯ ಹೊಂದಿವೆ. ಪ್ರಮುಖವಾಗಿ ಗೋವಾಗೆ ಎಂಟ್ರಿ ನೀಡುವ ಟೋಲ್ ಗೇಟ್‌ಗಳಲ್ಲಿ ಇದನ್ನು ಪ್ರಧಾನವಾಗಿ ಅಳವಡಿಸಲಾಗಿದೆ. ಒಂದು ವೇಳೆ ಪಿಯುಸಿಸಿ ಪ್ರಮಾಣ ಪತ್ರ ಗಡುವು ಮುಗಿದಿದ್ದರೆ, ಅಂತಹ ವಾಹನಗಳಿಗೆ ದಂಡ ಅಥವಾ ಪ್ರವೇಶ ನಿರ್ಬಂಧ ಹೇರಲಾಗುತ್ತಿದೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications