Karnataka: ಪತ್ರಕರ್ತರ ಸಂಘದ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು ಪ್ರಕಟ: ಇಲ್ಲಿದೆ ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ
ಬೆಂಗಳೂರು: ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ನಾಡಿನ ಪ್ರತಿಭಾವಂತ ಪತ್ರಕರ್ತರನ್ನು ಗುರುತಿಸಿ ನೀಡಲಾಗುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) 2024ನೇ ಸಾಲಿನ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿಗಳನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಮುಂಬರುವ ಏಪ್ರಿಲ್ 11 ಮತ್ತು 12 ರಂದು ಗಡಿ ಜಿಲ್ಲೆ ಬೀದರ್‌ನಲ್ಲಿ ಜರುಗಲಿರುವ 40ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಹಾಗೂ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುದ್ರಣ, ವಿದ್ಯುನ್ಮಾನ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಆಯ್ಕೆಯಾದ ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ.
ಮುದ್ರಣ ಮಾಧ್ಯಮ ವಿಭಾಗದ ಪ್ರಶಸ್ತಿಗಳು
1. ಜಿ. ನಾರಾಯಣಸ್ವಾಮಿ ಪ್ರಶಸ್ತಿ (ಗ್ರಾಮಾಂತರ ವರದಿ): ಯೋಗೇಶ್ ಮಲ್ಲೂರು (ವಾರ್ತಾಭಾರತಿ, ಬೆಂಗಳೂರು), ಕೆ.ಎ. ಇಸ್ಮಾಯಿಲ್ (ಶಕ್ತಿ, ಕೊಡಗು).
2. ಪಟೇಲ್ ಭೈರಹನುಮಯ್ಯ ಪ್ರಶಸ್ತಿ (ಮಾನವೀಯ ವರದಿ): ಮಲ್ಲಯ್ಯ ಪೋಲಂಪಲ್ಲಿ (ಕನ್ನಡಪ್ರಭ, ಶಹಪೂರ), ರವಿಕುಮಾರ ಕಗ್ಗಣ್ಣನವರ (ಕನ್ನಡಮ್ಮ, ಧಾರವಾಡ).
3. ಗಿರಿಧರ್ ಪ್ರಶಸ್ತಿ (ಅಪರಾಧ ವರದಿ): ಬಸವರಾಜ ಕಟ್ಟಿಮನಿ (ಕನ್ನಡಪ್ರಭ, ಹುಣಸಗಿ), ಪಿ.ಕೆ. ರವಿಕುಮಾರ್ (ವಿಜಯವಾಣಿ, ಮೈಸೂರು).

4. ಬಿ.ಎಸ್. ವೆಂಕಟರಾಂ ಪ್ರಶಸ್ತಿ (ಸ್ಕೂಪ್ ವರದಿ): ಓದೇಶ ಸಕಲೇಶಪುರ (ಪ್ರಜಾವಾಣಿ, ರಾಮನಗರ), ಮಹೇಶ್ ಮುನ್ನಯ್ಯನವರ ಮಠ (ಪ್ರಜಾವಾಣಿ, ಮಹಾಲಿಂಗಪುರ).
5. ಕೆ.ಎ. ನೆಟ್ಟಕಲಪ್ಪ ಪ್ರಶಸ್ತಿ (ಕ್ರೀಡಾ ವರದಿ): ನಾರಾಯಣರಾವ್ ದೇಶಪಾಂಡೆ (ಸಂಯುಕ್ತ ಕರ್ನಾಟಕ, ಹುಬ್ಬಳ್ಳಿ), ಪ್ರಸಾದ್ ಶೆಟ್ಟಿಗಾರ್ (ವಿಜಯವಾಣಿ, ಬೆಂಗಳೂರು).
6. ಖಾದ್ರಿ ಶಾಮಣ್ಣ ಪ್ರಶಸ್ತಿ (ರಾಜಕೀಯ ವಿಮರ್ಶೆ): ದಯಾಶಂಕರ ಮೈಲಿ (ಸುದ್ದಿಮೂಲ, ಮೈಸೂರು), ಶಂಕರ ಪಾಗೋಜಿ (ಉದಯಕಾಲ).
7. ಮಂಗಳ ಎಂ.ಸಿ. ವರ್ಗಿಸ್ ಪ್ರಶಸ್ತಿ (ವಾರ ಪತ್ರಿಕೆ ಲೇಖನ): ಎಂ.ಜಿ. ನಾಯ್ಕ (ಸುಧಾ, ಕುಮಟಾ), ವೆಂಕಟೇಶ ಎಸ್. ಸಂಪ (ಸಂಪದ ಸಾಲು).
8. ತಗಡೂರು ಕಮಲಮ್ಮ ವೀರೇಗೌಡ ಪ್ರಶಸ್ತಿ (ರೈತರ ಬದುಕು): ಜಯರಾಮು (ಸಂಯುಕ್ತ ಕರ್ನಾಟಕ, ಚನ್ನರಾಯಪಟ್ಟಣ), ಅಬ್ದುಲ್ ರೆಹಮಾನ್ ತಲಪಾಡಿ (ವಾರ್ತಾ ಭಾರತಿ, ಮಂಗಳೂರು), ಕು. ಇಂದಿರಾ (ಹೊಸಪೇಟೆ ಟೈಮ್ಸ್, ಹೊಸಪೇಟೆ).
9. ಆರ್.ಎಲ್. ವಾಸುದೇವರಾವ್ ಪ್ರಶಸ್ತಿ (ಅರಣ್ಯ ವರದಿ): ಪಿ. ಪರಮೇಶ್ (ಸುದ್ದಿಮೂಲ, ಮಾನ್ವಿ), ಕೌಶಲ್ಯ ಡಿ. ಫಳನಕರ್ (ಗುಂಬಜ್ ಎಕ್ಸ್‌ಪ್ರೆಸ್, ವಿಜಯಪುರ).
10. ಆರ್.ಎಲ್. ವಾಸುದೇವರಾವ್ ಪ್ರಶಸ್ತಿ (ವನ್ಯ ಪ್ರಾಣಿಗಳ ವರದಿ): ನಾಗರಾಜ್ ನವೀಮನೆ (ವಿಜಯ ಕರ್ನಾಟಕ, ಮೈಸೂರು), ಎಂ. ನರಸಿಂಹಮೂರ್ತಿ (ಕನ್ನಡಪ್ರಭ, ಬೆಂಗಳೂರು ದಕ್ಷಿಣ).
11. ಬಿ.ಜಿ. ತಿಮ್ಮಪ್ಪಯ್ಯ ಪ್ರಶಸ್ತಿ (ಆರ್ಥಿಕ ದುರ್ಬಲ ವರ್ಗದವರ ವರದಿ): ರಾಜೇಶಶೆಟ್ಟಿ ದೋಟ (ವಿಜಯವಾಣಿ, ಮಂಗಳೂರು), ಶರತ್ ಕುಮಾರ್ ಎಸ್. (ಉದಯವಾಣಿ, ಶಿವಮೊಗ್ಗ).
12. ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ (ಗ್ರಾಮೀಣ ಜನ-ಜೀವನ): ಶಂಕರ ಕಟ್ಟೆ ಮಳಲವಾಡಿ (ಜನಮಿತ್ರ, ಹುಣಸೂರು), ಶಿವರಾಜ ಸುಂಕದ (ಮುದಗಲ್, ಲಿಂಗಸೂರು), ಪ್ರಶಾಂತ್ ಪಾದೆ (ಉದಯವಾಣಿ, ಕುಂದಾಪುರ).
13. ನಾಡಪ್ರಭು ಕೆಂಪೇಗೌಡ ಸ್ಮಾರಕ ಪ್ರಶಸ್ತಿ: ಎಚ್.ಪಿ. ಪ್ರವೀಣ್, ಪ್ರಶಾಂತ್ ರಿಪ್ಪನ್ ಪೇಟೆ, ವಿ.ಎಸ್. ಹೊನ್ನಾಚಾರ್ (ಲೀಡರ್ಸ್ ವೀಕ್ಲಿ), ಜುಕ್ರಿಯಾ (ಟೈಮ್ಸ್ ಆಫ್ ಕರ್ನಾಟಕ).
14. ಯಜಮಾನ್ ಟಿ. ನಾರಾಯಣಪ್ಪ ಸ್ಮಾರಕ ಪ್ರಶಸ್ತಿ (ಕೃಷಿ ವರದಿ): ವೆಂಕಟೇಶ್ ಗುಡೆಪ್ಪನವರ (ವಿಜಯವಾಣಿ, ಮುಧೋಳ), ಮಂಜುನಾಥ್ ಎನ್. ಬಳ್ಳಾರಿ (ಕವಿತಾಳ, ರಾಯಚೂರು).
15. ನಾಡಿಗೇರ ಕೃಷ್ಣರಾಯರ ಪ್ರಶಸ್ತಿ: ಸತೀಶ್ ಬಾಬು (ಉದಯವಾಣಿ, ಬೆಂಗಳೂರು), ಎ. ಅಕ್ಷರ (ಹಿರಿಯ ಪತ್ರಕರ್ತರು).
16. ಸುಣ್ಣುವಂಡ ಶ್ರೀನಿವಾಸ ಚಂಗಪ್ಪ ಪ್ರಶಸ್ತಿ (ಸೈನಿಕರ ವರದಿ): ಎ. ಅಪ್ಪಾಜಿಗೌಡ (ಮುಳಬಾಗಿಲು, ಕೋಲಾರ).
17. ಕೆ.ಎನ್. ಸುಬ್ರಮಣ್ಯ ಪ್ರಶಸ್ತಿ (ಇಂಗ್ಲೀಷ್ ವರದಿ): ಅಪ್ಯಾನ್ ಯಾಸ್ಮಿನ್ (ದಿ ಹಿಂದೂ), ವಿಕಾರ್ ಅಹಮದ್ (ಫ್ರಂಟ್ ಲೈನ್, ಬೆಂಗಳೂರು).
18. ಮಲಗೊಂಡ ಪ್ರಶಸ್ತಿ (ತನಿಖಾ ವರದಿ): ಶಿವಾನಂದ ಹಿರೇಮಠ (ವಿಜಯವಾಣಿ, ಗದಗ), ತಿಪಟೂರು ಕೃಷ್ಣ (ಆದಿತ್ಯವಾಣಿ, ತಿಪಟೂರು).
19. ನಟ ದ್ವಾರಕೀಶ್ ಸ್ಮಾರಕ ಪ್ರಶಸ್ತಿ (ಚಲನಚಿತ್ರ ವಿಭಾಗ): ಎಸ್. ಜಗದೀಶ್ ಕುಮಾರ್ (ಸಿನಿಸುದ್ದಿ).
20. ಅಭಿಮಾನಿ ಪ್ರಕಾಶನ ಪ್ರಶಸ್ತಿ: ಮಹೇಶ್ ಹೆಗಡೆ (ಸಂಯುಕ್ತ ಕರ್ನಾಟಕ, ಸಾಗರ), ರವೀಂದ್ರ ತಳಗಡೆ (ವಿಜಯ ಕರ್ನಾಟಕ, ಬಳ್ಳಾರಿ).
21. ಅತ್ಯುತ್ತಮ ಪುಟ ವಿನ್ಯಾಸಗಾರರು: ಸಂದೇಶ್ (ಪ್ರತಿನಿಧಿ, ಮೈಸೂರು).
22. ಅತ್ಯತ್ತಮ ಡೆಸ್ಕ್ ನಿರ್ವಹಣೆ: ವಿಜಯಕುಮಾರ್ (ವಿಜಯವಾಣಿ).
23. ಸುದ್ದಿಚಿತ್ರ (ಛಾಯಾಚಿತ್ರ ಸಹಿತ ವರದಿ): ಕೆ.ವಿ. ಬಲರಾಮ್ (ಕಿಕ್ಕೇರಿ, ಮಂಡ್ಯ), ಎಂ.ಆರ್. ಮಂಜುನಾಥ್ (ಹಿರಿಯ ಪೋಟೋಗ್ರಾಫರ್).
24. ಪೋಟೋಗ್ರಫಿ/ಕ್ಯಾಮರಾಮೆನ್: ಗಣೇಶ್ (ವಿಜಯ ಕರ್ನಾಟಕ), ಬಾಬು ಮಿಯಾ (ಕಲಬುರ್ಗಿ).
25. ಗಣೇಶ್ ಜಿ. ದತ್ತಿ ಪ್ರಶಸ್ತಿ: ಎಂ.ಪಿ. ಅರುಣ್ ಕುಮಾರ್ (ಸಿಟಿ ಹೈಲೈಟ್ಸ್, ಶಿವಮೊಗ್ಗ), ಮಹಾಂತೇಶ್ (ಆಂದೋಲನ, ಮೈಸೂರು).
26. ಕೆ. ಪ್ರಹ್ಲಾದರಾವ್ (ಮಂಡ್ಯ) ಪ್ರಶಸ್ತಿ: ಕೆ.ಎಸ್. ಜನಾರ್ಧನಾಚಾರಿ (ಈ ಸಂಜೆ), ರಮೇಶ್ ಕೆ. (ಕನ್ನಡಪ್ರಭ, ಬಂಗಾರಪೇಟೆ), ಕೆ.ವಿ. ನಾಗರಾಜ್ (ಪ್ರಜಾವಾಣಿ, ಎನ್.ಆರ್.ಪುರ).
27. ಗರುಡನಗಿರಿ ನಾಗರಾಜ್ ಪ್ರಶಸ್ತಿ: ಬಿ. ಶಿವರುದ್ರಪ್ಪ (ಕನ್ನಡಪ್ರಭ, ಹೊಳಲ್ಕೆರೆ), ರಮೇಶ್ ಕುಮಾರ್ ನಾಯಕ್ (ವಿಶ್ವವಾಣಿ), ರಾಮಕೃಷ್ಣ (ಸಂಯುಕ್ತ ಕರ್ನಾಟಕ, ಮಂಗಳೂರು).
28. ಗುರುಲಿಂಗಸ್ವಾಮಿ ಹೋಳಿಮಠ ಪ್ರಶಸ್ತಿ: ದೇವರಾಜ ಕಪ್ಪಸೋಗಿ (ಕನ್ನಡಪ್ರಭ, ಚಾಮರಾಜನಗರ), ನವ್ಯಜ್ಯೋತಿ (ಹೊಸದಿಗಂತ).
29. ಪ್ರಜಾಪ್ರಗತಿ ಪ್ರಶಸ್ತಿ: ರವೀಂದ್ರ ತಳಗಡೆ (ವಿಜಯ ಕರ್ನಾಟಕ, ಬಳ್ಳಾರಿ), ಬ್ರಹ್ಮಾನಂದ ಹಡಗಲಿ (ಕನ್ನಡಪ್ರಭ, ಬೆಳಗಾವಿ).
30. ಬಿ.ಎ. ನಂದಿಕೋಲುಮಠ ಪ್ರಶಸ್ತಿ: ಎಚ್.ಕೆ. ನಟರಾಜ್ (ಉದಯವಾಣಿ, ದಾವಣಗೆರೆ), ರಾಮಚಂದ್ರಯ್ಯ ಕುಣಿಗಲ್ (ಸಂಜೆವಾಣಿ, ತುಮಕೂರು).
ಟಿವಿ ವಿಭಾಗದ ಪ್ರಶಸ್ತಿಗಳು
1. ಅತ್ಯುತ್ತಮ ರಾಜಕೀಯ ವಿಶ್ಲೇಷಣೆ: ಪ್ರಶಾಂತ್ ನಾತು (ಸುವರ್ಣ ಟಿವಿ), ಪ್ರಮೋದ್ (ಟಿವಿ 9).
2. ಅತ್ಯುತ್ತಮ ಆ್ಯಂಕರ್: ಅರುಣ್ ಸಿ. ಬಡಿಗೇರ (ಪಬ್ಲಿಕ್ ಟಿ.ವಿ), ಕಿರಣ್ ಕುಮಾರ್ ಡಿಕೆ.
3. ಅಭಿವೃದ್ಧಿ/ಸಾಮಾಜಿಕ/ಮಾನವೀಯ ವರದಿ: ಪಿ.ಡಿ. ವೀರಣ್ಣ (ಚಂದನ ಟಿವಿ, ತುಮಕೂರು), ತಿಮ್ಮೇಗೌಡ (ನ್ಯೂಸ್ 18, ಬೆಂಗಳೂರು), ಮಾರುತಿ ಪಾವಗಡ (ಗ್ಯಾರಂಟಿ ಟಿವಿ), ರಾಜು ಬಿ.ಆರ್. (ನ್ಯೂಸ್ ಫಸ್ಟ್, ಕೊಪ್ಪಳ), ವಿಠಲ ಕ್ಯಾರವಾಡ (ಆರ್. ಕನ್ನಡ, ದಾವಣಗೆರೆ), ಮೋಹನಕೃಷ್ಣ (ಆಕಾಶವಾಣಿ, ದೂರದರ್ಶನ, ಹಾಸನ).
ಕೆಯುಡಬ್ಲ್ಯುಜೆ ವಿಶೇಷ ಪ್ರಶಸ್ತಿಗಳು
ವಿಜಯ ಬಿರಾದರ್ (ಜಮಖಂಡಿ), ಶ್ರೀಧರ ಉಚ್ಚಿಲ (ಮುಂಬಯಿ), ಶ್ರೀಕಾಂತ್ (ಕಾಸರಗೋಡು), ಸಂಜೀವರಾವ್ ಕುಲಕರ್ಣಿ ಅವರು ಕೆಯುಡಬ್ಲ್ಯುಜೆ ವಿಶೇಷ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಾಮಾಜಿಕ ಕಳಕಳಿ, ನೈಜ ವರದಿಗಾರಿಕೆ ಹಾಗೂ ಸಮಾಜಮುಖಿ ಚಿಂತನೆಗಳ ಮೂಲಕ ಪತ್ರಿಕೋದ್ಯಮದ ಘನತೆಯನ್ನು ಹೆಚ್ಚಿಸಿರುವ ಈ ಎಲ್ಲಾ ಸಾಧಕರಿಗೆ ಬೀದರ್‌ನ ಐತಿಹಾಸಿಕ ನೆಲೆಯಲ್ಲಿ ನಡೆಯುವ ಸಮ್ಮೇಳನದಲ್ಲಿ ಅದ್ದೂರಿಯಾಗಿ ಸನ್ಮಾನಿಸಲಾಗುವುದು ಎಂದು ಸಂಘವು ಹರ್ಷ ವ್ಯಕ್ತಪಡಿಸಿದೆ.












Click it and Unblock the Notifications