ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಪ್ರಯಾಣಿಕರಿಗೆ ಸರ್ಕಾರದಿಂದ ಶಾಕ್‌

ಬೆಂಗಳೂರು, ಫೆಬ್ರವರಿ 23: ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಏರಿಕೆ ಮಾಡಲು ಇಲಾಖೆ ವತಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಅನುಗುಣವಾಗಿ ಪ್ರಯಾಣ ದರ ಏರಿಕೆ ಮಾಡುವುದು ಪರಿಪಾಠ, ಹಾಗಾಗಿ ಪ್ರಯಾಣಿಕರ ಟಿಕೆಟ್ ದರವನ್ನು 18% ಏರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಅಂತಿಮ ಆದೇಶ ಆಗಿಲ್ಲ ಎಂದರು.

Karnataka transport department decided to hike ticket price

2013-14ರಲ್ಲಿ ಅಂತಿಮವಾಗಿ ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಆ ನಂತರ ಸರ್ಕಾರಿ ಬಸ್‌ಗಳ ಪ್ರಯಾಣ ದರ ಏರಿಕೆ ಮಾಡಿರಲಿಲ್ಲ. ಹಲವು ಬಾರಿ ಪೆಟ್ರೋಲ್ ದರದಲ್ಲಿ ಭಾರಿ ಏರಿಕೆ ಆದರೂ ಸಹ ಟಿಕೆಟ್ ಬೆಲೆ ಏರಿಸಿರಲಿಲ್ಲ ಹಾಗಾಗಿ ಈಗ ಅನಿವಾರ್ಯವಾಗಿ ಟಿಕೆಟ್ ದರ ಏರಿಸಬೇಕಾಗಿದೆ ಎಂದು ಅವರು ಹೇಳಿದರು.

ಎಂಟು ಲಕ್ಷ ಕಿ.ಮೀ ಓಡಿದ ಬಸ್‌ಗಳನ್ನು ಕ್ರಾಂಗೆ ಹಾಕಲಾಗುತ್ತಿತ್ತು. ನಮ್ಮ ಬಸ್‌ಗಳ ಚಾರ್ಸಿ 20 ಲಕ್ಷ ಕಿ.ಮೀ ಬಾಳಿಕೆ ಬರುತ್ತದೆ. ಹಾಗಾಗಿ 7 ಲಕ್ಷ ಕಿ.ಮೀ ಓಡಿದ ಬಸ್‌ಗಳಿಗೆ ಮರುಕವಚ ಹೊದಿಸಿ ಮತ್ತೆ 5-6 ಲಕ್ಷ ಕಿ.ಮೀ ಓಡಿಸುವಂತೆ ಮಾಡಲಾಗುವುದು ಎಂದು ಅವರು ಹೇಳಿದರು.

ಸಾರಿಗೆ ಸಂಸ್ಥೆಗಳಿಗೆ ಐಷಾರಾಮಿ ಸೇರಿದಂತೆ ಮೂರು ಸಾವಿರ ಹೊಸ ಬಸ್ ಖರೀದಿ ಮಾಡಲಾಗುವುದು. 24 ಸ್ಲೀಪರ್‍ಕೋಚ್ ಬಸ್‍ಗಳನ್ನು ಖರೀದಿ ಮಾಡಲಾಗುತ್ತದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+