ಲೋಕಸಭಾ ಚುನಾವಣೆ: ರಾಜ್ಯದಲ್ಲಿ 4 ದಿನ 'ಮದ್ಯ ಮಾರಾಟ' ಬಂದ್

Recommended Video

      Lok Sabha Elections 2019: ಕರ್ನಾಟಕದಲ್ಲಿ ನಾಲ್ಕು ದಿನ ಮದ್ಯ ಸಿಗೋದಿಲ್ಲ

      ಬೆಂಗಳೂರು, ಏ 12: 'ಪಬ್ ಕ್ಯಾಪಿಟಲ್' ಎಂದೂ ಹೆಸರಾಗಿರುವ ರಾಜಧಾನಿ ಬೆಂಗಳೂರು ಸೇರಿದಂತೆ, ರಾಜ್ಯದ ಎಲ್ಲೆಡೆಯಲ್ಲಿ ಒಟ್ಟು ನಾಲ್ಕು ದಿನ, ಲೋಕಸಭಾ ಚುನಾವಣೆಯ ಸಂಬಂಧ ಮದ್ಯದ ಅಂಗಡಿಗಳು ಬಂದ್ ಆಗಲಿವೆ.

      ಲೋಕಸಭಾ ಚುನಾವಣೆಯ ಮತದಾನದ ಮುನ್ನಾ ಮೂರು ದಿನ ಮತ್ತು ಮತಎಣಿಕೆಯ ದಿನ ರಾಜ್ಯದ ಎಲ್ಲಾ ವೈನ್ ಸ್ಟೋರ್, ಬಾರ್ & ರೆಸ್ಟೋರೆಂಟುಗಳು, ಮದ್ಯ ಮಾರಾಟ ಮಾಡುವ ಹೋಲ್ ಸೇಲ್ ಅಂಗಡಿಗಳು, ಕ್ಲಬ್ ಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

      ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಏಪ್ರಿಲ್ ಹದಿನೆಂಟರಂದು ಒಟ್ಟು 14 ಲೋಕಸಭಾ ಕ್ಷೇತ್ರಗಳಲ್ಲಿ ಮತ್ತು ಎರಡನೇ ಹಂತದಲ್ಲೂ ( ಏ 23) 14ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಮೇ 23ರಂದು ಮತಎಣಿಕೆ ನಡೆಯಲಿದೆ.

      Karnataka to go dry for 4days for Loksabha elections 2019

      ಮೊದಲ ಹಂತದ ಚುನಾವಣೆಯ ಹದಿನಾಲ್ಕು ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮದ್ಯದ ಅಂಗಡಿಗಳು, ಏಪ್ರಿಲ್ 16ರ ಸಂಜೆ ಆರು ಗಂಟೆಯಿಂದ, ಏಪ್ರಿಲ್ 18ರ ಮಧ್ಯರಾತ್ರಿಯ ವರೆಗೆ ಬಂದ್ ಮಾಡಲು, ಪೊಲೀಸ್ ಇಲಾಖೆ/ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಇನ್ನು, ಎರಡನೇ ಹಂತದ ಚುನಾವಣೆಯ ವೇಳೆ, ಏಪ್ರಿಲ್ 21ರ ಸಂಜೆ ಆರು ಗಂಟೆಯಿಂದ, ಏಪ್ರಿಲ್ 23ರ ಮಧ್ಯರಾತ್ರಿಯವರೆಗೆ ಮದ್ಯದ ಅಂಗಡಿ ಬಂದ್ ಆಗಲಿದೆ. ಮೇ 23ರ ಮುಂಜಾನೆ ಆರು ಗಂಟೆಯಿಂದ,ಮಧ್ಯರಾತ್ರಿಯವರೆಗೂ ಮದ್ಯದ ಅಂಗಡಿ ಬಂದ್ ಆಗಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+