Sugarcane: ಸಕ್ಕರೆ ಬೆಲೆ ಏರಿಕೆ ಬೆನ್ನಲ್ಲೇ ರೈತರ ಹೊಸ ಬೇಡಿಕೆ; ಬೆಲ್ಲದ ಘಟಕಗಳಿಗೆ ಎಥೆನಾಲ್ ಅನುಮತಿಗೆ ಆಗ್ರಹ

ಮೈಸೂರು: ಗಣೇಶ ಹಬ್ಬದೊಂದಿಗೆ ಮುಂದೆ ದಸರಾ ಮತ್ತು ದೀಪಾವಳಿ ಹೀಗೆ ಸಾಲು ಸಾಲು ಹಬ್ಬಗಳು ಎದುರಾಗುತ್ತವೆ. ಇದರ ನಡುವೆ ಸಕ್ಕರೆಯ ಬೆಲೆ ಹೆಚ್ಚಳ ಆಗಿರುವುದು ರಾಜ್ಯದ ಕಬ್ಬು ಬೆಳೆಗಾರರ ಬಹುಕಾಲದ ಬೇಡಿಕೆಯೊಂದರ ಚರ್ಚೆಗೆ ಮುನ್ನುಡಿ ಬರೆದಂತಾಗಿದೆ. ಅದೇನೆಂದರೆ ಬೆಲ್ಲದ ಘಟಕಗಳು ಹಾಗೂ ಧಾನ್ಯ-ಆಧಾರಿತ ಘಟಕಗಳಿಗೆ ಎಥೆನಾಲ್ ಉತ್ಪಾದಿಸಲು ಅನುಮತಿ ನೀಡಬೇಕು. ಎಥೆನಾಲ್ ಅನ್ನು ಇಂಧನವಾಗಿ ಬಳಸಲು ಅನುಮತಿ ನೀಡಬೇಕೆಂಬ ಬೇಡಿಕೆಗಳು ಮುನ್ನೆಲೆಗೆ ಬಂದಿವೆ.

ಸರ್ಕಾರದ ನಿಯಮ ಪ್ರಕಾರ ವಾಹನಗಳ ಇಂಧನ ಮಿಶ್ರಣಕ್ಕೆ ಕಬ್ಬಿನ ಉಪ ಉತ್ಪನ್ನವಾದ ಎಥೆನಾಲ್ ಬಳಸಲಾಗುತ್ತಿದೆ. ಅದಕ್ಕಾಗಿ ಕಬ್ಬನ್ನು ಹೆಚ್ಚಾಗಿ ಎಥೆನಾಲ್ ಉತ್ಪಾದನೆಗೆ ತಿರುಗಿಸುತ್ತಿರುವ ಕಾರಣ ಸಕ್ಕರೆ ಬೆಲೆ ಏರಿಕೆ ಆಗಿದೆ ಎಂದು ರೈತರು, ಆಹಾರ ಉದ್ಯಮಿಗಳು ಅಭಿಪ್ರಾಯ ಹೊರ ಹಾಕಿದ್ದಾರೆ. ಆದರೆ ಸರ್ಕಾರ ಇದನ್ನು ಒಪ್ಪಿಲ್ಲ. ಇತ್ತ ರಾಜ್ಯ ಕಬ್ಬು ಬೆಳೆಗಾರರ ರೈತ ಸಂಘದ ಕುರುಬೂರು ಶಾಂತಕುಮಾರ್ ಅವರು, ಎಥೆನಾಲ್ ಉತ್ಪಾದನೆ ಆರ್ಥಿಕ ಲಾಭ ಬರೀ ದೊಡ್ಡ ಸಕ್ಕರೆ ಕಾರ್ಖಾನೆಗಳಿಗೆ ಮಾತ್ರ ಸೀಮಿತ ಆಗಬಾರದು ಎಂದು ಒತ್ತಾಯಿಸಿದ್ದಾರೆ.

Karnataka Sugar

ಆರ್ಥಿಕ ಪ್ರಗತಿಗೆ ಮಹತ್ವದ ಬೇಡಿಕೆಗಳು ಈಡೇರಿಸಲಿ!

ಸರ್ಕಾರಗಳು ಸ್ಥಳೀಯ ಬೆಲ್ಲದ ಘಟಕಗಳಿಗೆ ಎಥೆನಾಲ್ ಉತ್ಪಾದಿಸಲು ಅಗತ್ಯ ತಂತ್ರಜ್ಞಾನ ಬಳಕೆಗೆ ಅವಕಾಶ ನೀಡಬೇಕು. ಮನೆಗಳಲ್ಲಿ ಅಡುಗೆ ಇಂಧನವಾಗಿ ಎಥೆನಾಲ್ ಬಳಕೆ, ರೈತರ ಸ್ವಂತ ವಾಹನಗಳು ಮತ್ತು ಟ್ರಾಕ್ಟರ್‌ಗಳಿಗೆ ಇಂಧನವಾಗಿ ಬಳಕೆಗೆ ಅನುಮತಿಸಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ಸದ್ಯಕ್ಕೆ ತೈಲ ಕಂಪನಿಗಳು ಎಥೆನಾಲ್ ಒಂದು ಲೀಟರ್‌ಗೆ ಸುಮಾರು 65 ರೂ.ಗೆ ಖರೀದಿಸುತ್ತಿವೆ. ರೈತರು ಬೆಳೆದ ಕಬ್ಬನ್ನು ಎಥೆನಾಲ್ ಆಗಿ ಪರಿವರ್ತಿಸಿ, ಅವರಿಗೆ ನೇರ ಮಾರಾಟಕ್ಕೆ ಮಾರುಕಟ್ಟೆ, ಅಗತ್ಯ ಅನುಮತಿಗಳು ಸಿಕ್ಕರೆ ರೈತರ ಆದಾಯ ಹೆಚ್ಚಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

600 ಲಕ್ಷ ಟನ್ ಕಬ್ಬು ಉತ್ಪಾದನೆ

ಈ ಮೇಲಿನಂತೆ ರೈತರಿಗೆ ಎಥೆನಾಲ್ ವಿಚಾರದಲ್ಲಿ ಸರ್ಕಾರ ಅನುಮತಿ ನೀಡಿದರೆ ಸಕ್ಕರೆ ಕಾರ್ಖಾನೆಗಳ ಮೇಲಿನ ಕಬ್ಬು ಬೆಳೆಗಾರರ ​​ಅವಲಂಬನೆ ತಗ್ಗುತ್ತದೆ. ಈ ಕಾರ್ಖಾನೆಗಳು ಬೆಳೆಗಾರರಿಗೆ ಕಬ್ಬಿನ ಹಣ ವರ್ಷಗಳಿಂದ ಬಾಕಿ ಉಳಿಸಿಕೊಳ್ಳುತ್ತವೆ. ರಾಜ್ಯದಲ್ಲಿ ವಾರ್ಷಿಕವಾಗಿ ಸುಮಾರು 600 ಲಕ್ಷ ಟನ್ ಕಬ್ಬು ಉತ್ಪಾದನೆ ಆಗುತ್ತದೆ. ಅದರಲ್ಲಿ ಬರೀ 30 ರಿಂದ 40 ಲಕ್ಷ ಟನ್ ಮಾತ್ರ ಬೆಲ್ಲ ಉತ್ಪಾದನೆಗೆ ಪೂರೈಕೆ ಆಗುತ್ತದೆ. ಉಳಿದೆಲ್ಲವು ಸಕ್ಕರೆ ಉತ್ಪಾದನೆಗೆ ಬಳಕೆ ಆಗುತ್ತದೆ.

ರೈತರ ಜೀನವ ಬದಲಾಗುತ್ತೆ!

ಆದ್ದರಿಂದ ಬೆಲ್ಲದ ಘಟಕಗಳಲ್ಲಿ ಎಥೆನಾಲ್ ತಯಾರಿಕೆಗೆ ರೈತರಿಗೆ ಅವಕಾಶ ಕೊಟ್ಟಲ್ಲಿ ರಾಜ್ಯದಲ್ಲಿನ ಬೆಲ್ಲ ತಯಾರಿಕಾ ಘಟಕಗಳ ಸಂಖ್ಯೆ 15,000 ದಿಂದ 50,000 ಹೆಚ್ಚಾಗುವ ಸಾಧ್ಯತೆ. ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿಯಲ್ಲಿರುವ 'ಸೋಮಣ್ಣ ಅಲೆಮನೆ' ಸೇರಿದಂತೆ ಅನೇಕ ಕಬ್ಬು ತಯಾರಿಕೆ ಘಟಕದ ಮಾಲೀಕರು ಇದೇ ಅಭಿಪ್ರಾಯಪಟ್ಟಿದ್ದಾರೆ. ಕಬ್ಬು ಬೆಳೆಗಾರರು, ಕಬ್ಬು ತಯಾರಿಸುವವರು ಆದಾಯ ಹೆಚ್ಚಳಕ್ಕೆ ಇದು ಸರಿಯಾದ ಮಾರ್ಗ, ಇದರಿಂದ ಬೆಳೆಗಾರರ ಜೀವನ ಬದಲಾಗಲಿದೆ. ಜೊತೆಗೆ ಸ್ಥಳೀಯವಾಗಿ ಹೆಚ್ಚಿನ ಅನುಕೂಲ ಆಗಲಿದೆ ಎಂದಿದ್ದಾರೆ.

ಇತ್ತೀಚೆಗೆ ರಾಜಧಾನಿ ಬೆಂಗಳೂರಿನಲ್ಲಿ 'ಕಬ್ಬು, ಭತ್ತ ಮತ್ತು ಜೋಳದಿಂದ ಎಥೆನಾಲ್ ಉತ್ಪಾದನೆ' ಕುರಿತ ವಿಚಾರ ಸಂಕಿರಣ ನಡೆಯಿತು. ಈ ವೇಳೆ, ಎಥೆನಾಲ್ ಯಾವುದೆಲ್ಲದರಿಂದ ತಯಾರಿಸಬಹುದು. ಪ್ರಯೋಜನೆ, ರೈತರ ಆದಾಯ ಏರಿಕೆ, ಮುಖ್ಯವಾಗಿ ರೈತರಿಂದ ಪರಿಸರಕ್ಕೆ ಕೊಡುಗೆ, ಇಂಧನ ದಕ್ಷತೆ ಕುರಿತು ಚರ್ಚಿಸಲಾಯಿತು. ಸದಾ ನಷ್ಟ ಅನುಭವಿಸುವ ರೈತರಿಗೆ ಆರ್ಥಿಕ ಉತ್ತೇಜನ ದೊರೆಯಲಿದೆ ಭಾಷಣಕಾರರು ಒತ್ತಾಯಿಸಿದ್ದಾರೆ.

ರೈತರ ಹೆಸರಿನಲ್ಲಿ ಅಧಿಕಾರ ಸ್ವೀಕರಿಸುವ, ಸದಾ ತಮ್ಮ ಸರ್ಕಾರಗಳು ರೈತರ ಪರ ಎನ್ನುವವರು ಇಂತಹ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಗಮನಕೊಡಬೇಕು. ಕರ್ನಾಟಕ, ಭಾರತವನ್ನು ಎಥೆನಾಲ್ ವಿಚಾರದಲ್ಲಿ ಪ್ರಮುಖ ಕೇಂದ್ರವಾಗಿ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂಬುದು ಕಬ್ಬು ಬೆಳೆಗಾರರ ಆಗ್ರಹವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+