SSLC ಬೋರ್ಡ್ ಪರೀಕ್ಷೆ ನೋಂದಣಿಗೆ ಇನ್ಮುಂದೆ ಪೆನ್ ಹಾಗೂ ಅಪಾರ್ ಐಡಿ ಕಡ್ಡಾಯ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2027ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಮಹತ್ವದ ಆದೇಶವೊಂದನ್ನ ಹೊರಡಿಸಿದೆ. ಪ್ರಸ್ತುತ ವರ್ಷದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನೋಂದಣಿ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆ ತರಲಾಗಿದ್ದು, ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಪೆನ್ ಮತ್ತು ಅಪಾರ್ ಐಡಿ ಸಂಖ್ಯೆಯನ್ನು ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಶೈಕ್ಷಣಿಕ ದಾಖಲೆಗಳನ್ನ ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸುವ ಹಾಗೂ ಡಿಜಿಲಾಕರ್ ಮೂಲಕ ಅಂಕಪಟ್ಟಿಗಳನ್ನು ವಿತರಿಸುವ ಮಹತ್ವಾಕಾಂಕ್ಷೆಯೊಂದಿಗೆ ಶಿಕ್ಷಣ ಇಲಾಖೆ ಈ ಹೊಸ ನಿಯಮವನ್ನ ಜಾರಿಗೆ ತಂದಿದೆ.

Karnataka SSLC Exam Registration 2027 PEN and APAAR ID Now Mandatory for All Board Students

ಡಿಜಿಲಾಕರ್ ಮೂಲಕ ಡಿಜಿಟಲ್ ಅಂಕಪಟ್ಟಿ ವಿತರಣೆಗೆ ಸಿದ್ಧತೆ

ಕಳೆದ ಶೈಕ್ಷಣಿಕ ವರ್ಷದಿಂದಲೇ ಸರ್ಕಾರವು ಡಿಜಿಟಲ್ ಅಂಕಪಟ್ಟಿಗಳ ವಿತರಣೆಗೆ ಚಾಲನೆ ನೀಡಿದೆ. ಈ ಪ್ರಕ್ರಿಯೆಯನ್ನ ಮತ್ತಷ್ಟು ಸುಗಮಗೊಳಿಸಲು ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳಲು ಪೆನ್ ಮತ್ತು ಅಪಾರ್ ಐಡಿ ಕಡ್ಡಾಯ ಮಾಡಲಾಗಿದೆ ಎಂದು ಮಂಡಳಿಯ ಅಧ್ಯಕ್ಷರಾದ ಮಂಜುನಾಥ್ ಜಿ.ಹೆಚ್. ಮಾಹಿತಿ ನೀಡಿದ್ದಾರೆ.

ಪರೀಕ್ಷೆಗೆ ನೋಂದಾಯಿಸಿಕೊಳ್ಳುವಾಗ ವಿದ್ಯಾರ್ಥಿಗಳು ತಮ್ಮ 11 ಅಂಕಿಗಳ ಪೆನ್ ಸಂಖ್ಯೆ ಮತ್ತು 12 ಅಂಕಿಗಳ ಅಪಾರ್ ಐಡಿಯನ್ನ ತಪ್ಪದೇ ನಮೂದಿಸಬೇಕು. ಇದರಿಂದ ಭೌತಿಕ ಅಂಕಪಟ್ಟಿಯ ಜೊತೆಗೆ, ಡಿಜಿಟಲ್ ರೂಪದಲ್ಲೂ ಅಂಕಪಟ್ಟಿಯನ್ನ ಸುಲಭವಾಗಿ ಹಾಗೂ ಸುರಕ್ಷಿತವಾಗಿ ಪಡೆಯಲು ಸಾಧ್ಯವಾಗುತ್ತದೆ.

ಈ ಡಿಜಿಟಲ್ ವ್ಯವಸ್ಥೆಯು ಹಾಜರಾತಿ ಪ್ರಕ್ರಿಯೆಯನ್ನ ಸರಳಗೊಳಿಸುವುದಲ್ಲದೆ, ಭವಿಷ್ಯದಲ್ಲಿ ದಾಖಲೆಗಳು ಕಳೆದುಹೋಗುವ ಆತಂಕವನ್ನ ಕಡಿಮೆ ಮಾಡುತ್ತದೆ.

ಅಪಾರ್ ಐಡಿ ಎಂದರೇನು?

ಅಪಾರ್ (APAAR - Automated Permanent Academic Account Registry) ಎನ್ನುವುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದನ್ನ ಒಂದು ರಾಷ್ಟ್ರ, ಒಂದು ವಿದ್ಯಾರ್ಥಿ ಗುರುತಿನ ಚೀಟಿ ಎಂದು ಸಹ ಕರೆಯಲಾಗುತ್ತದೆ. ಇದೊಂದು 12 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯಾಗಿದೆ.

ವಿದ್ಯಾರ್ಥಿಯ ಶೈಕ್ಷಣಿಕ ಸಾಧನೆಗಳು, ಅಂಕಪಟ್ಟಿಗಳು, ಪ್ರಶಸ್ತಿಗಳು ಮತ್ತು ಇತರ ಪ್ರಮಾಣಪತ್ರಗಳನ್ನ ಒಂದೇ ವೇದಿಕೆಯಲ್ಲಿ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಡಲು ಇದು ಸಹಾಯ ಮಾಡುತ್ತದೆ. ವಿಶೇಷವಾಗಿ, ಡಿಜಿಲಾಕರ್ ಮೂಲಕ ಯಾವುದೇ ಶೈಕ್ಷಣಿಕ ದಾಖಲೆಗಳನ್ನ ಕ್ಷಣಾರ್ಧದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಅಪಾರ್ ಐಡಿ ಅತ್ಯಂತ ಸಹಕಾರಿಯಾಗಿದೆ.

ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗೆ ಬೇಕು ಪೆನ್ (PEN) ಸಂಖ್ಯೆ

ಪೆನ್ (Permanent Education Number) ಎನ್ನುವುದು ವಿದ್ಯಾರ್ಥಿಯ ಶೈಕ್ಷಣಿಕ ಹಂತವನ್ನ ಟ್ರ್ಯಾಕ್ ಮಾಡಲು ನೀಡಲಾಗುವ ಶಾಶ್ವತ ಶಿಕ್ಷಣ ಸಂಖ್ಯೆ. ಇದು 11 ಅಂಕಿಗಳನ್ನ ಒಳಗೊಂಡಿರುತ್ತದೆ. ಮಗುವೊಂದು ಶಾಲೆಗೆ ದಾಖಲಾದಾಗಿನಿಂದ ಹಿಡಿದು ಶಿಕ್ಷಣ ಪೂರ್ಣಗೊಳಿಸುವವರೆಗಿನ ಸಂಪೂರ್ಣ ಮಾಹಿತಿಯನ್ನ ಶಿಕ್ಷಣ ಇಲಾಖೆಯ ಡೇಟಾಬೇಸ್‌ನಲ್ಲಿ ಸುರಕ್ಷಿತವಾಗಿ ನಿರ್ವಹಿಸಲು ಈ ಸಂಖ್ಯೆ ಸಹಾಯ ಮಾಡುತ್ತದೆ.

ವಿದ್ಯಾರ್ಥಿಯು ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ವರ್ಗಾವಣೆಗೊಂಡಾಗ ಅಥವಾ ರಾಜ್ಯದಿಂದ ಬೇರೆ ರಾಜ್ಯಕ್ಕೆ ವಲಸೆ ಹೋದಾಗ, ಅವರ ಶೈಕ್ಷಣಿಕ ದಾಖಲೆಗಳನ್ನ ಸುಲಭವಾಗಿ ವರ್ಗಾಯಿಸಲು ಮತ್ತು ಗುರುತಿಸಲು ಈ ಪೆನ್ ಸಂಖ್ಯೆ ಪ್ರಮುಖ ಪಾತ್ರ ವಹಿಸುತ್ತದೆ.

ಒಟ್ಟಿನಲ್ಲಿ, ಶಿಕ್ಷಣ ವ್ಯವಸ್ಥೆಯನ್ನ ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಹೀಗಾಗಿ, ಶಾಲಾ ಮುಖ್ಯಸ್ಥರು ಹಾಗೂ ಪೋಷಕರು ನಿಗದಿತ ಸಮಯದೊಳಗೆ ತಮ್ಮ ಮಕ್ಕಳ ಪೆನ್ ಹಾಗೂ ಅಪಾರ್ ಐಡಿಗಳನ್ನ ರೆಡಿ ಮಾಡಿಕೊಂಡು, ಪರೀಕ್ಷಾ ನೋಂದಣಿಯನ್ನ ಪೂರ್ಣಗೊಳಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+