SSLC Result: ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟ, ಇಲ್ಲಿದೆ ಲಿಂಕ್!
ಕರ್ನಾಟಕದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಕಾಯುತ್ತಿದ್ದ ಸಮಯ ಬಂದೇ ಬಿಟ್ಟಿದೆ. ಈ ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ಫಲಿತಾಂಶ ಇಂದು ಪ್ರಕಟವಾಗಿದೆ. ಪರೀಕ್ಷೆಯಲ್ಲಿ ಪಾಸ್ ಆಗಲು ಸಾಧ್ಯ ಆಗದೇ ಇರುವವರಿಗೆ ಈ ಅವಕಾಶ ಸಿಕ್ಕಿತ್ತು. ಇದೀಗ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ರಿಸಲ್ಟ್ ಪ್ರಕಟವಾಗಿದ್ದು, ಲಿಂಕ್ & ಮಾಹಿತಿಗಾಗಿ ಮುಂದೆ ಓದಿ.
ಅಂದಹಾಗೆ ಕರ್ನಾಟಕದ ಒಟ್ಟಾರೆ 724 ಪರೀಕ್ಷಾ ಕೇಂದ್ರಗಳಲ್ಲಿ ಜೂನ್ 14 ರಿಂದ 21 ರವರೆಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 (SSLC EXAM-2) ನಡೆದಿತ್ತು. ಹಾಗೇ ಒಟ್ಟು 7 ಮಾಧ್ಯಮಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಹೀಗೆ ಈ ಪರೀಕ್ಷೆಯಲ್ಲಿ 1.44 ಲಕ್ಷ ವಿದ್ಯಾರ್ಥಿ, 79,148 ವಿದ್ಯಾರ್ಥಿನಿಯರು ಸೇರಿ ಒಟ್ಟು 2.23 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿ ಪರೀಕ್ಷೆ ಬರೆದಿದ್ದರು. ಈ ಪೈಕಿ 13,085 ವಿದ್ಯಾರ್ಥಿಗಳು ಫಲಿತಾಂಶ ಹೆಚ್ಚಿಸಿಕೊಳ್ಳಲು 2ನೇ ಪರೀಕ್ಷೆಗೆ ಹೆಸರು ನೋಂದಾವಣೆ ಮಾಡಿದ್ದರು. ಈ ಮೂಲಕ ವಾರ್ಷಿಕ ಪರೀಕ್ಷೆಯಲ್ಲಿ ಪಾಸ್ ಆಗದೆ ಇದ್ದ ಅಥವಾ ಇನ್ನೂ ಹೆಚ್ಚಿನ ಅಂಕ ಬಯಸಿದ್ದ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು. ಈಗ ಅವರ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದೆ.

ಪರೀಕ್ಷೆ ಫಲಿತಾಂಶ ವೀಕ್ಷಿಸುವುದು ಹೇಗೆ?
ಶೈಕ್ಷಣಿಕ ಗುಣಮಟ್ಟ ವಿಚಾರದಲ್ಲಿ ಕರ್ನಾಟಕ ದೇಶದಲ್ಲೇ ದೊಡ್ಡ ಹೆಸರು ಪಡೆದಿದೆ. ಹೀಗಾಗಿ ಕರ್ನಾಟಕದ ಎಸ್‌ಎಸ್‌ಎಲ್ ಫಲಿತಾಂಶವು, ಇಡೀ ದೇಶದ ಗಮನವನ್ನ ಸೆಳೆದಿದೆ. ಯಾಕಂದ್ರೆ ಕರ್ನಾಟಕದಲ್ಲಿ ಅದ್ರಲ್ಲೂ ನಮ್ಮ ಬೆಂಗಳೂರಿನಲ್ಲಿ ಬೇರೆ ಬೇರೆ ರಾಜ್ಯದ ವಿದ್ಯಾರ್ಥಿಗಳು ಕೂಡ ಓದುತ್ತಿದ್ದಾರೆ. ಇದೀಗ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಫಲಿತಾಂಶವೂ ಪ್ರಕಟ ಆಗಿದೆ. ಹಾಗಾದರೆ ಯಾವ ವೆಬ್‌ಸೈಟ್ ಲಿಂಕ್ ಮೂಲಕ ಫಲಿತಾಂಶ ನೋಡಬಹುದು? ಪ್ರತಿ ಹಂತದ ಮಾಹಿತಿಗೆ ಮುಂದೆ ಓದಿ.
SSLC ರಿಸಲ್ಟ್ ನೋಡುವ ವಿಧಾನ!
ಸ್ಟೇಜ್-1: kseab.karnataka.gov.in ಅಥವಾ karresults.nic.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
ಸ್ಟೇಜ್-2: ಮತ್ತೊಂದು ಕಡೆ 2ನೇ ಹಂತದಲ್ಲಿ ವೆಬ್‌ಸೈಟ್‌ನ ಮುಖಪುಟದಲ್ಲಿ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶದ ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗಿದೆ.
ಸ್ಟೇಜ್-3: SSLC ಪೂರಕ ಪರೀಕ್ಷೆ ಫಲಿತಾಂಶದ ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ನೀವು ಯಾರ ಫಲಿತಾಂಶ ನೋಡಬೇಕೋ ಅವರ ನೋಂದಣಿ ಸಂಖ್ಯೆ & ಜನ್ಮ ದಿನಾಂಕ ನಮೂದಿಸಿ.
ಸ್ಟೇಜ್-4: ಹೀಗೆ ಎಲ್ಲಾ ಮಾಹಿತಿ ಅಪ್‌ಡೇಟ್ ಮಾಡಿದ ನಂತರ Submit ಬಟನ್ ಮೇಲೆ ಕ್ಲಿಕ್ ಮಾಡಿ ಒಂದೆರಡು ಕ್ಷಣಗಳ ಕಾಲ ಕಾಯಬೇಕು.
ಸ್ಟೇಜ್-5: ಫಲಿತಾಂಶ ನೋಡಲು ಎಲ್ಲಾ ಹಂತಗಳನ್ನ ಯಶಸ್ವಿಯಾಗಿ ನೀವು ಪೂರೈಸಿದ ನಂತರ ನಿಮ್ಮ ಫಲಿತಾಂಶ ಸ್ಕ್ರೀನ್ ಮೇಲೆ ಕಾಣಿಸುತ್ತದೆ.
ಸ್ಟೇಜ್-6: ಎಸ್‌ಎಸ್‌ಎಲ್‌ಸಿ ಫಲಿತಾಂಶ ಸ್ಕ್ರೀನ್ ಮೇಲೆ ಕಾಣುವಾಗ ಅದನ್ನು ಡೌನ್ಲೋಡ್ ಮಾಡಿ ಹಾಗೂ ಪ್ರಿಂಟ್ಔಟ್ ಕೂಡ ತೆಗೆದುಕೊಳ್ಳಲು ಅವಕಾಶ ಇದೆ.












Click it and Unblock the Notifications