2018ರಿಂದ ಪ್ರೌಢಶಿಕ್ಷಣದ ಎಲ್ಲಾ ವ್ಯವಹಾರವೂ ಸಂಪೂರ್ಣ ಡಿಜಿಟಲ್!

ಶೀಘ್ರದಲ್ಲೇ ಸಂಪೂರ್ಣ ಡಿಜಿಟಲ್ ಆಗಲಿರುವ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ. 2018ರ ಶೈಕ್ಷಣಿಕ ವರ್ಷದಿಂದ ಜಾರಿಯಾಗಿರುವ ಡಿಜಿಟಲ್ ಸೇವೆಗಳು. ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಿರುವ ಡಿಜಿಟಲ್ ಸೇವೆಗಳು.

ಬೆಂಗಳೂರು, ಆಗಸ್ಟ್ 7: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವರ್ಷಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಎಲ್ಲಾ ಕಾರ್ಯ ವಿಧಾನಗಳೂ ಸಂಪೂರ್ಣ ಡಿಜಿಟಲೀರಣಗೊಳ್ಳುತ್ತಿವೆ.

ಇದರಿಂದಾಗಿ, ದಾಖಲಾತಿ ವೇಳೆ, ಯಾವ ಶಾಲೆಗಳಲ್ಲಿ ಎಷ್ಟೆಷ್ಟು ಸೀಟುಗಳಿವೆ, ಯಾವ ಶಾಲೆಯಲ್ಲಿ ಎಷ್ಟು ವಿದ್ಯಾರ್ಥಿಗಳಿಗೆ ಸೀಟು ದೊರಕಿದೆ, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ವಿಧಾನ, ಪ್ರವೇಶ ಪತ್ರ (ಹಾಲ್ ಟಿಕೆಟ್) ನೀಡುವ ವಿಧಾನ, ಶುಲ್ಕಗಳನ್ನು ಕಟ್ಟುವ ವಿಧಾನಗಳೆಲ್ಲವೂ ಸಂಪೂರ್ಣ ಡಿಜಿಟಲ್ ಆಗಲಿದೆ.

KARNATAKA SECONDARY EDUCATION EXAMINATION BOARD OPS WILL SOON GO DIGITAL

ಈವರೆಗೆ ಫಲಿತಾಂಶವೊಂದನ್ನು ಮಾತ್ರ ಆನ್ ಲೈನ್ ನಲ್ಲಿ ಪ್ರಕಟಿಸುತ್ತಿದ್ದ ಇಲಾಖೆಯು ಇನ್ನು ತನ್ನದೇ ಸ್ವಂತ ವೆಬ್ ಸೈಟ್ ನಲ್ಲಿ ಮೇಲ್ಕಂಡ ಎಲ್ಲಾ ಪ್ರಕ್ರಿಯೆಗಳ ಆನ್ ಲೈನ್ ಸೇವೆಯನ್ನು ಒದಗಿಸಲಿದೆ.

ಈ ಕನಸಿನ ಸಾಕಾರಕ್ಕಾಗಿ 2017-18ರ ಶೈಕ್ಷಣಿಕ ವರ್ಷದಿಂದಲೇ ಡಿಜಿಟಲೀಕರಣ ಕಾರ್ಯ ಆರಂಭಿಸಲಾಗಿದ್ದು, ಮಂಡಳಿಯ ಸಂಪೂರ್ಣ ಡಿಜಿಟಲೀಕರಣಕ್ಕಾಗಿ ಕರ್ನಾಟಕ ಹಣಕಾಸು ಇಲಾಖೆಯಿಂದ 23 ಕೋಟಿ ರು. ಅನುದಾನ ಜಾರಿಗೊಂಡಿದೆ. ಆನ್ ಲೈನ್ ಸೇವೆಗಳ ಜಾರಿಗೆ ಸಚಿವ ಸಂಪುಟದ ಒಪ್ಪಿಗೆ ಸಿಕ್ಕ ಕೂಡಲೇ ಅಂತರ್ಜಾಲ ಸೇವೆಗಳಿಗೆ ಚಾಲನೆ ನೀಡಲಾಗುವುದು ಎಂದು ಮಂಡಳಿಯ ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+