ದ್ವಿತೀಯ ಪಿಯುಸಿ ಪೂರಕ ಪರೀಕ್ಷಾ ವೇಳಾಪಟ್ಟಿ ಪ್ರಕಟ
ಬೆಂಗಳೂರು, ಮೇ.15: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು ಪಿಯು ಮಂಡಳಿ ಪ್ರಕಟಿಸಿದೆ. ಪೂರಕ ಪರೀಕ್ಷೆ ಜುಲೈ 3ರಿಂದ ಆರಂಭವಾಗಿ ಜುಲೈ 12ರವರೆಗೆ ನಡೆಯಲಿದೆ.
ಒಂದು ವಿಷಯಕ್ಕೆ 101 ರೂಪಾಯಿ ಪರೀಕ್ಷಾ ಶುಲ್ಕವನ್ನು ಪಿಯು ಬೋರ್ಡ್ ನಿಗದಿಪಡಿಸಿದ್ದು, ಮೂರು ಅಥವಾ ಮೂರಕ್ಕಿಂತ ಹೆಚ್ಚಿನ ವಿಷಯಕ್ಕೆ 302 ರೂಪಾಯಿ ಶುಲ್ಕವನ್ನು ನಿಗದಿಪಡಿಸಿದೆ.
ಪರೀಕ್ಷೆಗಳು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12.15ರ ವರೆಗೆ ನಡೆಯಲಿವೆ. ಮಧ್ಯಾಹ್ನ ನಂತರದ ಪರೀಕ್ಷೆಗಳು 2 ಗಂಟೆಯಿಂದ ಸಂಜೆ 5.15ರ ವರೆಗೆ ನಡೆಯಲಿದೆ.

ಬೆಳಗ್ಗೆ ನಡೆಯುವ ಪರೀಕ್ಷೆಗಳು
ಜುಲೈ 3 - ಸಮಾಜ ಶಾಸ್ತ್ರ/ ಲೆಕ್ಕಶಾಸ್ತ್ರ/ ಭೌತಶಾಸ್ತ್ರ
ಜುಲೈ 4 - ರಾಜ್ಯಶಾಸ್ತ್ರ/ಸಂಖ್ಯಾ ಶಾಸ್ತ್ರ/ಜೀವಶಾಸ್ತ್ರ
ಜುಲೈ 5 - ಅರ್ಥಶಾಸ್ತ್ರ/ಗಣಿತಶಾಸ್ತ್ರ
ಜುಲೈ 7 - ಕನ್ನಡ/ ತಮಿಳು/ ತೆಲುಗು/ ಮಲಯಾಳಂ/ಉರ್ದು/ಫ್ರೆಂಚ್
ಜುಲೈ 8 - ಬಿಸಿನೆಸ್ ಸ್ಟಡೀಸ್/ ರಸಾಯನಶಾಸ್ತ್ರ/ ಶಿಕ್ಷಣ
ಜುಲೈ 9 - ಇಂಗ್ಲಿಷ್
ಜುಲೈ 10- ಇತಿಹಾಸ/ ಎಲೆಕ್ಟ್ರಾನಿಕ್ಸ್/ ಕಂಪ್ಯೂಟರ್ ಸೈನ್ಸ್
ಜುಲೈ 11 - ಭೂಗೋಳ/ ಭೂವಿಜ್ಞಾನ/ ಮೂಲ ಗಣಿತ
ಜುಲೈ 12 - ಹಿಂದಿ/ಸಂಸ್ಕೃತ
ಮಧ್ಯಾಹ್ನ ನಂತರದ ಪರೀಕ್ಷೆಗಳು
ಜುಲೈ 3 - ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ
ಜುಲೈ 5 - ತರ್ಕಶಾಸ್ತ್ರ, ಗೃಹ ವಿಜ್ಞಾನ
ಜುಲೈ 7 - ಮರಾಠಿ, ಆರೇಬಿಕ್
ಜುಲೈ 8 - ಐಚ್ಚಿಕ ಕನ್ನಡ












Click it and Unblock the Notifications