Holiday; ಶಿಕ್ಷಕರ ರಜೆ; ಕೆಲವು ಪ್ರಶ್ನೆಗಳು & ಉತ್ತರಗಳು
ಬೆಂಗಳೂರು, ನವೆಂಬರ್ 20; ಶಿಕ್ಷಣ ಇಲಾಖೆ ಪ್ರತಿವರ್ಷದ ಶೈಕ್ಷಣಿಕ ವೇಳಾಪಟ್ಟಿಯನ್ನು ಮೊದಲೇ ಪ್ರಕಟಿಸುತ್ತದೆ. ಸರ್ಕಾರಿ ನೌಕರರಾದರೂ ಬೇರೆ ಇಲಾಖೆಯ ನೌಕರರಿಗೆ ಸಿಗುವಷ್ಟು ರಜೆಗಳು ಶಿಕ್ಷಕರಿಗೆ ಸಿಗುವುದಿಲ್ಲ. ಪಠ್ಯ ಬೋಧನೆ ಜೊತೆಗೆ ಇತರ ಹಲವು ಕೆಲಸಗಳಿಗೆ ಸಹ ಶಿಕ್ಷಕರನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.
ಕರ್ನಾಟಕ ಸರ್ಕಾರ ರಚನೆ ಮಾಡಿರುವ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗಕ್ಕೆ ಶೈಕ್ಷಣಿಕ ಕೆಲಸದ ಜೊತೆಗೆ ಬಿಎಲ್‌ಒ, ಜನಗಣತಿ, ಮನೆ ಗಣತಿ, ಜನ ಜಾಗೃತಿ ಮುಂತಾದ ಕಾರ್ಯದಲ್ಲಿ ತೊಡಗುವ ಶಿಕ್ಷಕರಿಗೆ ಗಳಿಕೆ ರಜೆ ಹೆಚ್ಚಿಸಬೇಕು ಎಂದು ಬೇಡಿಕೆ ಇಡಲಾಗಿದೆ.

ಸಾಮಾನ್ಯವಾಗಿ ಶಿಕ್ಷಕರು ಸಾಂದರ್ಭಿಕ ರಜೆ, ನಿರ್ಬಂಧಿತ ರಜೆ, ಗಳಿಕೆ ರಜೆ, ಸ್ಥಳೀಯ ವಿವೇಚನಾ ರಜೆ, ಬೇಸಿಗೆ ರಜೆ, ದಸರಾ ರಜೆ, ಭಾನುವಾರ, ಸಾರ್ವಜನಿಕ ರಜೆ ಹೀಗೆ ಹಲವು ರಜೆಗಳನ್ನು ಪಡೆಯುತ್ತಾರೆ. ಶಾಲೆಗಳ ಶೈಕ್ಷಣಿಕ ವೇಳಾಪಟ್ಟಿಯ ಮೇಲೆ ರಜೆಗಳು ನಿರ್ಧರಿತವಾಗುತ್ತವೆ.
ಹಾಗಾದರೆ ಶಿಕ್ಷಕರು ಪಡೆಯುವ Casual Leave (CL)ಗಳ ಸಂಖ್ಯೆ ಎಷ್ಟು?, ಹೇಗೆ ಪಡೆಯಬೇಕು?. ಯಾರು ಈ ರಜೆಗಳನ್ನು ಮಂಜೂರು ಮಾಡಬೇಕು? ಎಂಬ ಮಾಹಿತಿ ಇಲ್ಲಿದೆ. ಕರ್ನಾಟಕ ಶಿಕ್ಷಕರ ಬಳಗ ಎಂಬ ಫೇಸ್‌ಬುಕ್ ಗ್ರೂಪ್‌ನಲ್ಲಿ ಮಂಜು ನಾರಾಯಣ್ ಎಂಬುವವರು ಶಿಕ್ಷಕರ ಮಾಹಿತಿಗಾಗಿ ಈ ರಜೆಯ ಮಾಹಿತಿ ನೀಡಿದ್ದಾರೆ. ಅದರ ಪ್ರಶ್ನೋತ್ತರಗಳು ಇಲ್ಲಿವೆ...
* ಒಂದು ವರ್ಷದಲ್ಲಿನ ಒಟ್ಟು CLಗಳ ಸಂಖ್ಯೆ ಎಷ್ಟು?, CLಗಳನ್ನು ಜಮಾ ಮಾಡುವುದು ಕ್ಯಾಲೆಂಡರ್ ವರ್ಷಕ್ಕೊ ಅಥವಾ ಶೈಕ್ಷಣಿಕ ವರ್ಷಕ್ಕೊ?
ಒಟ್ಟು Cl 15, ಜಮಾ ಮಾಡುವುದು ಕ್ಯಾಲೆಂಡರ್ ವರ್ಷಕ್ಕೆ.
* ಉಳಿದ CL ಗಳನ್ನು ಮುಂದಿನ ವರ್ಷಕ್ಕೆ ಕೊಂಡೊಯ್ಯಬಹುದೇ?. CL ಗಳು ನಮ್ಮ ಹಕ್ಕುಗಳೇ?
ಇಲ್ಲ., ಉಳಿದ CLಗಳು ವ್ಯರ್ಥವೇ ಸರಿ, ಯಾವ ರೀತಿಯ ರಜೆಗಳೂ ನಮ್ಮ ಹಕ್ಕುಗಳಲ್ಲ.
* ಶಾಲೆಗಳಲ್ಲಿ CL ಮಂಜೂರು ಮಾಡುವವರು ಯಾರು?, ನಿರಂತರವಾಗಿ ಎಷ್ಟು CL ಗಳನ್ನು ಬಳಸಬಹುದು?
ಮುಖ್ಯ ಶಿಕ್ಷಕರು ಮಂಜೂರು ಮಾಡುತ್ತಾರೆ. ನಿರಂತರವಾಗಿ 7CL ಗಳನ್ನು ಬಳಸಬಹುದು. ಸಾರ್ವತ್ರಿಕ ರಜೆಗಳು ಸೇರಿದ್ದರೆ 10 CLಗಳನ್ನು ಬಳಸಬಹುದು.
* ಮುಖ್ಯಶಿಕ್ಷಕರು ನಿರಂತರ ಎಷ್ಟು CL ಗಳನ್ನು ಮಂಜೂರು ಮಾಡಬಹುದು?. ಶನಿವಾರ CL ಪಡೆದಿದ್ದರೆ ಭಾನುವಾರವೂ CL ಆಗುತ್ತದ್ದೆಯೇ?
Kcsr ನಂತೆ ನಿರಂತರ. 7 CL ಗಳನ್ನೂ ಮುಖ್ಯಶಿಕ್ಷಕರೇ ಮಂಜೂರು ಮಾಡಬಹುದು. ಆದರೆ ಇಲಾಖೆಯ ಸುತ್ತೋಲೆಯಂತೆ ನಿರಂತರ 5 CL ಗಳನ್ನು ಮುಖ್ಯಶಿಕ್ಷಕರು ಮಂಜೂರು ಮಾಡಬಹುದು ಮತ್ತೆ ಪಡೆಯಲು ಮೇಲಾಧಿಕಾರಿಗಳ ಅನುಮತಿ ಅಗತ್ಯ. ಭಾನುವಾರವೂ CL ಆಗುವುದಿಲ್ಲ. ಯಾವುದೇ ಸಾರ್ವತ್ರಿಕ ರಜೆಗಳಂದು CL ನಮೂದಿಸುವಂತಿಲ್ಲ.
* ನಿರ್ಬಂಧಿತ ರಜೆ ಯೊಂದಿಗೆ CL ಜೋಡಿಸಬಹುದೇ?, ಡಿಸೆಂಬರ್ ತಿಂಗಳಲ್ಲಿ ಗರಿಷ್ಠ ಎಷ್ಟು CL ಗಳನ್ನು ಬಳಸಬಹುದು?.
CL ಜೋಡಿಸಿ ನಿರಂತರವಾಗಿ ಹಾಕಬಹುದು. ಡಿಸೆಂಬರ್ ಅಥವಾ ಯಾವುದೇ ತಿಂಗಳಲ್ಲಿ ಇಂತಿಷ್ಟೆ CL ಬಳಸಬೇಕೆಂಬ ನಿಯಮವಿರುವುದಿಲ್ಲ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಆದೇಶದಂತೆ ಡಿಸೆಂಬರ್ ತಿಂಗಳಲ್ಲಿ 2 CL ಗಳನ್ನು ಮಾತ್ರ ಬಳಸಲು ಆದೇಶವಾಗಿರುತ್ತದೆ. ಈ ಆದೇಶ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರಿಗೆ ಮಾತ್ರ ಅನ್ವಯವಾಗುತ್ತದೆ.ಇದು ಎಲ್ಲಾ ಜಿಲ್ಲೆಯವರಿಗಲ್ಲ. ಅದರಲ್ಲೂ ಪ್ರಾಥಮಿಕ ಶಾಲೆಗಳಿಗೆ ಎಲ್ಲೂ ಆದೇಶವಾಗಿರುವುದಿಲ್ಲ, ಅನಗತ್ಯ ಗೊಂದಲ ಬೇಡ.
* ಹೊಸದಾಗಿ ಸೇವೆಗೆ ಸೇರಿದ ಶಿಕ್ಷಕರಿಗೆ CL ಹೇಗೆ ನೀಡುವುದು?. ಎಲ್ಲಾ 15 CLಗಳು ಮುಗಿದ ನಂತರ ಮುಂಗಡವಾಗಿ CL ಪಡೆಯಬಹುದೆ?. CL ಪಡೆಯಲು ಮುಖ್ಯಶಿಕ್ಷಕರ ಪೂರ್ವಾನುಮತಿ ಅಗತ್ಯವೆ?
ಹೊಸ ಶಿಕ್ಷಕರಿಗೆ ಮುಂಗಡವಾಗಿ CLಗಳು ದೊರಕುವುದಿಲ್ಲ. ಅವರು ಒಂದು ವರ್ಷ ಸೇವೆ ಪೂರ್ಣಗೊಳಿಸಿದ ನಂತರ ಮುಂಗಡ 15 CL ಗಳು ದೊರಕುತ್ತವೆ. ಅಲ್ಲಿಯವರೆಗೆ ಅವರು ಪ್ರತಿ ಒಂದು ತಿಂಗಳ ಪೂರ್ಣ ಸೇವೆಯ ನಂತರ 1 CL ಪಡೆಯುತ್ತಾ ಹೋಗುತ್ತಾರೆ. ಮುಂಗಡವಾಗಿ ಪಡೆಯಲು ಅವಕಾಶವಿಲ್ಲ. ಮುಖ್ಯ ಶಿಕ್ಷಕರ ಅನುಮತಿ ಅಗತ್ಯ. ಆದರೆ ಅನಾರೋಗ್ಯ, ಮತ್ತಿತರ ಬೇರೆ ಸಾಧ್ಯತೆಗಳೇ ಇಲ್ಲದ ಸಂದರ್ಭದಲ್ಲಿ ಮಾತ್ರ ವಿನಾಯಿತಿ ಇದೆ. ಆದರೆ ಪೂರಕ ದಾಖಲೆ ಒದಗಿಸಬೇಕು.
-
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Water4Life: ಅತ್ಯಮೂಲ್ಯ ಜಲಮೂಲಗಳ ಸಂರಕ್ಷಣೆಗೆ ರಿಲಯನ್ಸ್ ಫೌಂಡೇಷನ್ನಿಂದ ಜನ ಚಳವಳಿ, ಡಿಟೇಲ್ಸ್ ಇಲ್ಲಿದೆ -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ?












Click it and Unblock the Notifications