ಕರ್ನಾಟಕದಲ್ಲಿ ಹೊಸದಾಗಿ 442 ಕೊರೊನಾ ಸೋಂಕಿತರು ಪತ್ತೆ
ಬೆಂಗಳೂರು, ಜೂನ್ 25: ಕರ್ನಾಟಕದಲ್ಲಿ ಹೊಸದಾಗಿ 442 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ರಾಜ್ಯದಲ್ಲಿ ಒಟ್ಟು 3716 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ 6 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ ಒಟ್ಟು 170 ಮಂದಿ ಸಾವನ್ನಪ್ಪಿದ್ದಾರೆ.ಅನ್ಯ ಕಾರಣದಿಂದ ಮೃತಪಟ್ಟಿರುವ ಸಂಖ್ಯೆ 4.
ಕರ್ನಾಟಕದಲ್ಲಿ 10 ಸಾವಿರ ಗಡಿ ದಾಟಿದ ಕೊರೊನಾ ಕೇಸ್
ರಾಜ್ಯದಲ್ಲಿ ಒಟ್ಟು 10560 ಕೊರೊನಾ ಸೋಂಕಿತರಿದ್ದಾರೆ. 160 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಪತ್ತೆಯಾದವರಲ್ಲಿ 23 ಮಂದಿ ಅಂತಾರಾಷ್ಟ್ರೀಯ ಪ್ರಯಾಣಿಕರು, 51 ಮಂದಿ ಅಂತಾರಾಜ್ಯ ಪ್ರಯಾಣಿಕರಿದ್ದಾರೆ.
ಕೊರೊನಾ ಸೋಂಕಿತರ ಪ್ರಥಮ ಸಂಪರ್ಕದಲ್ಲಿದ್ದ 22123 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ, ದ್ವಿತೀಯ ಸಂಪರ್ಕಕ್ಕೆ ಬಂದಿದ್ದ 17,298 ಮಂದಿ ಆಸ್ಪತ್ರೆಯಲ್ಲಿದ್ದಾರೆ. ಒಟ್ಟು 39,421 ಜನರ ಮೇಲೆ ನಿಗಾ ಇರಿಸಲಾಗಿದೆ. ಇದುವರೆಗೆ 553325 ಮಂದಿಯ ಮಾದರಿ ಪರೀಕ್ಷಿಸಲಾಗಿದೆ.
ಬೆಂಗಳೂರಿನಲ್ಲಿ 113, ಕಲಬುರಗಿಯಲ್ಲಿ 35, ರಾಮನಗರದಲ್ಲಿ 33, ದಕ್ಷಿಣ ಕನ್ನಡದಲ್ಲಿ 29, ಬಳ್ಳಾರಿಯಲ್ಲಿ 26, ಧಾರವಾಡದಲ್ಲಿ 26, ಮೈಸೂರು 22, ಬಾಗಲಕೋಟೆ 18, ಕೊಡಗು 18, ಉಡುಪಿ 14, ಹಾಸನ 12, ಬೆಂಗಳೂರು ಗ್ರಾಮಾಂತರ 12, ಉತ್ತರ ಕನ್ನಡ 11, ವಿಜಯಪುರ 10, ಗದಗ 10, ಹಾವೇರಿ 10, ಮಂಡ್ಯ 9, ಬೀದರ್ 8, ದಾವಣೆಗೆರೆ 7, ಬೆಳಗಾವಿ 4, ಶಿವಮೊಗ್ಗ 4, ಕೋಲಾರ 4, ಯಾದಗಿರಿ 2, ಚಿಕ್ಕಬಳ್ಳಾಪುರ 2, ತುಮಕೂರು 1, ಚಿಕ್ಕಮಗಳೂರು 1, ಚಾಮರಾಜನಗರದಲ್ಲಿ 1 ಪ್ರಕರಣ ಪತ್ತೆಯಾಗಿದೆ.